Advertisement

ನಂಜನಗೂಡು: ವಜಾಗೊಂಡ ಕಾರ್ಮಿಕರ ನ್ಯಾಯದ ಕೂಗಿಗೆ ಧ್ವನಿಯಾದ ಸಾಹಿತಿ ದೇವನೂರು ಮಹದೇವ

05:17 PM Mar 02, 2022 | Team Udayavani |

ನಂಜನಗೂಡು: ನಂಜನಗೂಡಿನ ಕೈಗಾರಿಕಾ ವಲಯದ ಎಟಿ &ಎಸ್ ನಿಂದ ವಜಾಗೊಂಡು ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರ ಪ್ರತಿಭಟನೆಗೆ ವರ್ಷ ತುಂಬಿದೆ.

Advertisement

ಬುಧವಾರ ಪ್ರತಿಭಟನಾ ಸ್ಥಳಕ್ಕೆ ಖ್ಯಾತ ಸಾಹಿತಿ ದೇವನೂರು ಮಹಾದೇವ ಆಗಮಿಸಿ ಕಾರ್ಮಿರ ನ್ಯಾಯದ ಕೂಗಿಗೆ ಧ್ವನಿಗೂಡಿಸಿದರು.

ಈ ವೇಳೆ ಮಾತಾನಾಡಿದ ಅವರು, ‘ಶಾಸಕ ಹರ್ಷವರ್ಧನರೇ ನಿಮ್ಮ ತಾತ ದಿವಂಗತ ಮಾಜಿ ಸಚಿವ.  ಧೀಮಂತ ನಾಯಕ ಲಬಸವ  ಲಿಂಗಪ್ಪನವರು ಹಾಗೂ ನಿಮ್ಮ ಮಾವ ಸಂಸದ  ಪ್ರಾಮಾಣಿಕ ರಾಜಕಾರಣಿ ಶ್ರೀನಿವಾಸ ಪ್ರಸಾದ ಅವರ ಗೌರವ ಉಳಿಸಲಾದರೂ ಈ ಬಡಕಾರ್ಮಿಕರಿಗೆ ನ್ಯಾಯಕೊಡಿಸಿ ಇಲ್ಲವೆ ನ್ಯಾಯಕ್ಕಾಗಿ ಪ್ರತಿಭಟನೆಯಲ್ಲಿ ನೀವೇ ಭಾಗಿಯಾಗಿ’ ಎಂದು  ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

ವಿದೇಶಿ ಕಂಪನಿಗಳ ಕಾಂಚಾಣದ ಧಿಮಾಕಿಗೆ ಅಮಾಯಕರಾದ ಕಾರ್ಮಿಕರ ಬದುಕು ಶೋಚನೀಯಾವಾಗುತ್ತಿರುವುದಕ್ಕೆ ಈ ಪ್ರತಿಭಟನೆಯೇ ಸಾಕ್ಷಿ ಎಂದು ಮಹದೇವ್ ಕಿಡಿಕಾರಿದರು. ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾದಾಗ ಇಂಥಹ ಸ್ಥಿತಿ ಬರುತ್ತದೆ ಎಂದು ಅವರು ಟೀಕೀಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next