ನಂಜನಗೂಡು: ನಂಜನಗೂಡಿನ ಕೈಗಾರಿಕಾ ವಲಯದ ಎಟಿ &ಎಸ್ ನಿಂದ ವಜಾಗೊಂಡು ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರ ಪ್ರತಿಭಟನೆಗೆ ವರ್ಷ ತುಂಬಿದೆ.
ಬುಧವಾರ ಪ್ರತಿಭಟನಾ ಸ್ಥಳಕ್ಕೆ ಖ್ಯಾತ ಸಾಹಿತಿ ದೇವನೂರು ಮಹಾದೇವ ಆಗಮಿಸಿ ಕಾರ್ಮಿರ ನ್ಯಾಯದ ಕೂಗಿಗೆ ಧ್ವನಿಗೂಡಿಸಿದರು.
ಈ ವೇಳೆ ಮಾತಾನಾಡಿದ ಅವರು, ‘ಶಾಸಕ ಹರ್ಷವರ್ಧನರೇ ನಿಮ್ಮ ತಾತ ದಿವಂಗತ ಮಾಜಿ ಸಚಿವ. ಧೀಮಂತ ನಾಯಕ ಲಬಸವ ಲಿಂಗಪ್ಪನವರು ಹಾಗೂ ನಿಮ್ಮ ಮಾವ ಸಂಸದ ಪ್ರಾಮಾಣಿಕ ರಾಜಕಾರಣಿ ಶ್ರೀನಿವಾಸ ಪ್ರಸಾದ ಅವರ ಗೌರವ ಉಳಿಸಲಾದರೂ ಈ ಬಡಕಾರ್ಮಿಕರಿಗೆ ನ್ಯಾಯಕೊಡಿಸಿ ಇಲ್ಲವೆ ನ್ಯಾಯಕ್ಕಾಗಿ ಪ್ರತಿಭಟನೆಯಲ್ಲಿ ನೀವೇ ಭಾಗಿಯಾಗಿ’ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ವಿದೇಶಿ ಕಂಪನಿಗಳ ಕಾಂಚಾಣದ ಧಿಮಾಕಿಗೆ ಅಮಾಯಕರಾದ ಕಾರ್ಮಿಕರ ಬದುಕು ಶೋಚನೀಯಾವಾಗುತ್ತಿರುವುದಕ್ಕೆ ಈ ಪ್ರತಿಭಟನೆಯೇ ಸಾಕ್ಷಿ ಎಂದು ಮಹದೇವ್ ಕಿಡಿಕಾರಿದರು. ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾದಾಗ ಇಂಥಹ ಸ್ಥಿತಿ ಬರುತ್ತದೆ ಎಂದು ಅವರು ಟೀಕೀಸಿದರು.