Advertisement

ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಜನರ ಸಹಕಾರ ಮುಖ್ಯ

04:29 PM Sep 28, 2019 | Naveen |

ದೇವನಹಳ್ಳಿ: ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸ ಉಳ್ಳ ಭಾರತದ ಪೌರರಾದ ನಾವು ಮೂಲಭೂತ ಕರ್ತವ್ಯಗಳಲ್ಲಿ ಒಂದಾದ ಘನ ತ್ಯಾಜ್ಯ ನಿರ್ವಹಣ ಕಾಯ್ದೆ 2016 ಅಡಿಯಲ್ಲಿ ಒಂದೇ ಬಾರಿ ಬಳಸಿ ಬಿಸಾಡುವ ವಸ್ತುಗಳನ್ನು ನಿಷೇಧಿಸ್ಪಟ್ಟಿದ್ದು, ಇಂದಿನಿಂದ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ ತಿಳಿಸಿದರು.

Advertisement

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪುರಸಭಾ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಶೂನ್ಯ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ಮುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ಲಾಸ್ಟಿಕ್‌ ಬಳಕೆ ಕಾನೂನು ಬಾಹೀರವಾಗಿದ್ದು, ನಗರದ್ಯಂತ ಬಳಕೆ ನಿಷೇಧಿಲಾಗುತ್ತಿದೆ. ಹೋಟೆಲ್‌ಗ‌ಳಲ್ಲಿ ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್‌ ಗೆ ಹಾಕುವುದರಿಂದ ಆಹಾರಕ್ಕೆ ಪ್ಲಾಸ್ಟಿಕ್‌ ಅಂಶ ಸೇರಿ ಮನುಷ್ಯನ ಆರೋಗ್ಯದ ಮೇಲೆ ಪರುಣಾಮ ಬೀರುತ್ತದೆ. ಹೋಟೆಲ್‌ ಮತ್ತು ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಅರಿವು ಮೂಡಿಸಲಾಗಿದ್ದು, ಮಾರಾಟ ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈ ಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗ್ರಾಹಕರು ತಮ್ಮ ಮನೆಯಿಂದಲೇ ಬಟ್ಟೆಯ ಬ್ಯಾಗ್‌ ತೆಗೆದುಕೊಂಡು ಹೋಗಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಹಾಗೂ ನಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್‌ ಬಳಕೆ ತ್ಯಜಿಸುವಂತೆ, ಮನೆಯಲ್ಲೇ, ಹಸಿ ಮತ್ತು ಒಣ ಕಸ ವಿಂಗಡಣೆ, ದಿನ ನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್‌ ಬಳಸದೆ ಪರಿಸರ ಸ್ನೇಹಿ ಚೀಲವನ್ನು ಉಪಯೋಗ ಹಾಗೂ ಸುತ್ತಮುತ್ತಲ ಪರಿಸರದಲ್ಲಿನ ಪ್ಲಾಸ್ಟಿಕ್‌ ಸಂಗ್ರಹಿವಿಲೇವಾರಿ ಮಾಡುವ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮುಡಿಸಬೇಕು ಎಂದರು.

ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾತನಾಡಿ, ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮವಾಗುತ್ತಿದ್ದು, ಪ್ಲಾಸ್ಟಿಕ್‌ ನಿಂದ ಅಂತರ್ಜಲಕ್ಕೂ ಹಾನಿ ಆಗುತ್ತಿದ್ದು, ಪರಿಸರದ ಅಂದ ಚಂದ ಹಾಳು ಮಾಡುವ ಪ್ಲಾಸ್ಟಿಕ್‌ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿದೆ. ನಮ್ಮ ಮನೆಯಲ್ಲೇ ಪ್ಲಾಸ್ಟಿಕ್‌ ನಿಷೇಧಿಸುವ ಪ್ರತಿಜ್ಞೆ ಮಾಡಬೇಕು. ಪ್ಲಾಸ್ಟಿಕ್‌ ನೀಡಿದರೆ ತೆಗೆದುಕೊಳ್ಳಬಾರದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಾಣ ಮಾಡುತ್ತಿವುದು ಉತ್ತಮ ಕಾರ್ಯ ಎಂದರು.

Advertisement

ಪುರಸಭಾ ಕಂದಾಯಾಧಿಕಾರಿ ರಾಜೇಂದ್ರ, ಪುರಸಭಾ ಅಭಿಯಂತರ ನೇತ್ರಾವತಿ, ಹಿರಿಯ ಆರೋಗ್ಯ ಸಹಾಯಕರಾದ ಬಿಜಿ, ತೃಪ್ತಿ, ಕಾಲೇಜು ಪ್ರಭಾರ ಪ್ರಾಂಶುಪಾಲ ರುದ್ರಮನಿ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್‌, ಪ್ರಭಾರ ಉಪ ಪ್ರಾಂಶುಪಾಲ ಬಸವರಾಜ್‌ ಕೆಂಚನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next