Advertisement
ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಒಂದೊಂದು ಹೆಸರು ಇದೆ. ಈ ಜಿಲ್ಲೆಗೆ ದೇವನಹಳ್ಳಿ ಜಿಲ್ಲೆ ಎಂದು ಹೆಸರಿಡಬೇಕು. ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು ಇತರೆ ಜಿಲ್ಲೆಗಳಿಗೆ ಹೆಸರುಗಳಿವೆ. ಈ ಜಿಲ್ಲೆಗೆ ಹೆಸರು ಇಲ್ಲ. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಕೇಂದ್ರ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಕಾಂಗ್ರೆಸ್ ಸರ್ಕಾರದಲ್ಲೇ ಜಿಲ್ಲಾಡಳಿತ ಕಟ್ಟಡಗಳನ್ನು ತಾಲೂಕಿನ ಬೀರಸಂದ್ರ ಗ್ರಾಮದ ಬಳಿ ಉದ್ಘಾಟನೆ ಮಾಡಿತ್ತು.
Related Articles
Advertisement
ಎತ್ತಿನಹೊಳೆ ಯೋಜನೆಗೆ ಹಣಕಾಸಿನ ಕೊರತೆ:ಬೆಂಗಳೂರಿನಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ದೇವನಹಳ್ಳಿಗೆ ಸ್ಥಳಾಂತರ ಮಾಡಲು ಅನುದಾನ ನೀಡಬೇಕು. ದೇವನಹಳ್ಳಿ ಮೀಸಲು ಕ್ಷೇತ್ರದಲ್ಲಿ ಜಿಲ್ಲಾ ಕೇಂದ್ರವಾಗಿದ್ದು, ಜಿಲ್ಲಾ ಸಂಕೀರ್ಣದ ಕಟ್ಟಡದಲ್ಲಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ಬಹುತೇಕ ಅಧಿಕಾರಿಗಳು ಮತ್ತು ನೌಕರರಿಗೆ ವಸತಿ ಲಭ್ಯವಿರುವುದಿಲ್ಲ. ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲು ನೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಎತ್ತಿನಹೊಳೆ ಯೋಜನೆಗೆ ಹಣಕಾಸಿನ ಕೊರತೆ ಜೊತೆಗೆ ಭೂಸ್ವಾಧೀನ ಸಮಸ್ಯೆ ಇರುವ ಕಾರಣ ಎತ್ತಿನಹೊಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹರಿಯುವ ಕನಸು ಇನ್ನೂ ಈಡೇರಿಲ್ಲ. ಸರ್ಕಾರ ಪ್ರಾರಂಭಿಕವಾಗಿ 13 ಸಾವಿರ ರೂ.ಕೋಟಿ ಯೋಜನೆ ರೂಪಿಸಿದ್ದರು. ಯೋಜನೆ ಕಾರ್ಯಗತ ವಿಳಂಬ ಆಗಿರುವುದರಿಂದ ಯೋಜನೆ ವೆಚ್ಚ 20 ಸಾವಿರ ಕೋಟಿ ದಾಟುವ ಅಂದಾಜು ಮಾಡಲಾಗಿದೆ. ದೇವನಹಳ್ಳಿ ತಾಲೂಕಿನಲ್ಲಿ ಜಿಲ್ಲಾಡಳಿತ ಭವನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲಾ ಕೇಂದ್ರ ಘೋಷಣೆ, ವಿಜಯಪುರ ದೇವನಹಳ್ಳಿ ಪಟ್ಟಣಗಳನ್ನು ಅವಳಿ ನಗರವನ್ನಾಗಿ ಮಾಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು. ವಿಜಯಪುರ ಮತ್ತು ದೇವನಹಳ್ಳಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಆಗಬೇಕು.
●ಎಲ್.ಎನ್.ನಾರಾಯಣಸ್ವಾಮಿ, ಶಾಸಕ ವಿಜಯಪುರ ತಾಲೂಕನ್ನಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ವಿಜಯಪುರ ತಾಲೂಕನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ವಿಜಯಪುರ ತಾಲೂಕು ಆಗಲು
ಸಾಕಷ್ಟು ಹೋರಾಟ ಮಾಡಲಾಗಿದೆ.
●ಬಿ.ಕೆ.ಶಿವಪ್ಪ, ತಾಲೂಕು ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವನಹಳ್ಳಿ ತಾಲೂಕಿನಲ್ಲಿ ತರಕಾರಿ ಮತ್ತು ಹೂವು ಹಣ್ಣು ಹೆಚ್ಚು ಬೆಳೆಯುವ ರೈತರಿದ್ದು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಅದಕ್ಕಾಗಿ ಈ ಬಜೆಟ್‌ನಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ.
●ವೆಂಕಟನಾರಾಯಣಪ್ಪ,
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ನೀಡುವಂತೆ ಆಗಬೇಕು. ಬಜೆಟ್ ಮಂಡಿಸಿದರೆ ಸಾಲದು, ಅದು ಕಾರ್ಯಗತವಾಗಬೇಕು. ನಾಮ್ ಕೇ ವಾಸ್ತೆ ಬಜೆಟ್ ಆಗಬಾರದು.
●ಕೆ.ಸಿ.ಮಂಜುನಾಥ್, ಜಿಪಂ ಮಾಜಿ ಸದಸ್ಯ