Advertisement
ತಾಲೂಕಿನ ಸಾವಕನಹಳ್ಳಿ ಮತ್ತು ದೇವನಹಳ್ಳಿ ಪಟ್ಟಣದ ರಾಣಿ ವೃತ್ತ, ರಾಷ್ಟ್ರೀಯ ಹೆದ್ದಾರಿ ರಸ್ತೆ ಪರಿಶೀಲಿಸಿ ದರು. ಸಾವಕನಹಳ್ಳಿ ಗ್ರಾಮಸ್ಥರಿಂದ ಗ್ರಾಮ ಸಂಪರ್ಕ ಅವೈಜ್ಞಾನಿಕ ರಸ್ತೆ ಸಂಬಂಧ ಪಟ್ಟಂತೆ ಮನವಿ ಪತ್ರ ಸ್ಪೀಕರಿಸಿ ಮಾತನಾಡಿದರು. ಎಲ್ಲ ಕಡೆಗಳ ಲ್ಲಿಯೂ ಸಮಸ್ಯೆಯಿದೆ. ಪರಿ ಶೀಲಿಸಲಾಗುತ್ತಿದೆ. ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
Related Articles
Advertisement
ಕಾಮಗಾರಿ ಸರಿಯಿಲ್ಲ: ಸಚಿವ ಸತೀಶ್ ಜಾರಿಕಿ ಹೊಳಿ ಹಾಗೂ ಕೆ.ಎಚ್.ಮುನಿಯಪ್ಪ ಅವರೊಂ ದಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಗ್ರಾಪಂ ಅಧ್ಯಕ್ಷ ಎಸ್‌ಪಿ ಮುನಿರಾಜ್ ಮಾತನಾಡಿ, ಹೆದ್ದಾರಿ ಕಾಮಗಾರಿ ಅವೈಜ್ಞಾನಿ ಕವಾಗಿದೆ. ನಾಮ ಫಲಕದಲ್ಲಿ ಹಾಕಿರುವ ದಿಕ್ಸೂಚಿಯಂತೆ ಕಾಮ ಗಾರಿ ಸರಿಯಾಗಿ ಮಾಡಿಲ್ಲ. ಸ್ಥಳೀಯವಾಗಿ ರೈತರಿಗೆ, ಜನರಿಗೆ ಸಾಕಷ್ಟು ಅನಾನುಕೂಲ ವಾಗುತ್ತಿದೆ. ಅಪಘಾತಗಳಿಗೂ ಕಾರಣವಾಗುತ್ತಿದೆ ಎಂದು ಮನವರಿಕೆ ಮಾಡಿದರು.
ಜಿಲ್ಲಾಧಿಕಾರಿ ಎನ್.ಶಿವಶಂಕರ್, ಮಾಜಿ ಜಿಪಂ ಸದಸ್ಯ ಬಿ ರಾಜಣ್ಣ , ವಿಶ್ವನಾಥಪುರ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಲೋಕೇಶ್, ಉಪವಿಭಾಗಾಧಿಕಾರಿ ಶ್ರೀನಿ ವಾಸ್, ತಹಶೀಲ್ದಾರ್ ಶಿವರಾಜ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಉಪಾಧ್ಯಕ್ಷ ಶಾಂತ ಕುಮಾರ್, ಲೋಕೇಶ್, ಮಾಳಿಗೇನಹಳ್ಳಿ ಪ್ರಕಾಶ್, ಖಾದಿ ಬೋರ್ಡ್ ಮಾಜಿ ಅಧ್ಯಕ್ಷರಾದ ನಾಗೇಗೌಡ, ಶ್ರೀನಿವಾಸ್ ಮುಖಂಡರಾದ ದೇವರಾಜ್, ಮುನಿರಾಜ್, ಪ್ರಕಾಶ್, ಸುಧಾಕರ್, ಸಾವಕನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರಿದ್ದರು.
ಸಚಿವ ಸತೀಶ್ ಜಾರಕಿಹೊಳಿಗೆ ಭವ್ಯ ಸ್ವಾಗತ:
ಹೊಸಕೋಟೆ: ರಾಜ್ಯದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿ ಹೊಳಿಯವರು ದಾಬಸ್ ಪೇಟೆಯಿಂದ ಚೆನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ವೇಳೆ ಸೂಲಿಬೆಲೆ ಸಮೀಪದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ವಿ.ಸತೀಶ್ ಗೌಡರು, ಸಚಿವರಿಗೆ ಹಾಗೂ ಶಾಸಕ ಶರತ್ ಬಚ್ಚೇಗೌಡರಿಗೆ ಸ್ವಾಗತ ಕೋರಿದರು. ಹಿರಿಯ ಮುಖಂಡರಾದ ಬಿ.ಎನ್. ಗೋಪಾಲಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ಮುತ್ಸಂದ್ರ ಆನಂದಪ್ಪ, ಹಸಿಗಾಳ ಜಗದೀಶ್, ಸಾದಪ್ಪನ ಹಳ್ಳಿ ನವೀನ್, ಲಕ್ಕೊಂಡಹಳ್ಳಿ ಆನಂದ್ ಇತರರು ಇದ್ದರು.
ಚನ್ನಹಳ್ಳಿಗೆ ಸಚಿವರಿಂದ ಸ್ಕೈವಾಕ್ ಭರವಸೆ:
ಚನ್ನರಾಯಪಟ್ಟಣ: ದೇವನಹಳ್ಳಿ ಮುಖಾಂತರ ಹೊಸಕೋಟೆ ಹೋಗುವ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ ವೇಳೆ ಚನ್ನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಅಂಡರ್ ಪಾಸ್ ಇಲ್ಲದ ಕಾರಣ ಚನ್ನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಂಡರ್ ಪಾಸ್ ಒದಗಿಸುವಂತೆ ಈ ಗ್ರಾಮದ ಅಕ್ಕಪಕ್ಕ ಇರುವ ದೊಡ್ಡ ಹೊಸಹಳ್ಳಿ, ಚಿಕ್ಕ ಹೊಸಹಳ್ಳಿ, ರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಅನಾನೂಕೂಲವಾಗಿದೆ. ದೇವನಹಳ್ಳಿಗೆ ಬಸ್ಸಿಗೆ ಹೋಗ ಬೇಕಾದರೆ ಪ್ರಯಾಣಿಕರು ರಸ್ತೆ ದಾಟಿ ಬಸ್ ಹತ್ತುವುದಕ್ಕೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಜಿಪಂ ಸದಸ್ಯ ಬಿ.ರಾಜಣ್ಣ ಸಚಿವರಿಗೆ ವಿವರಿಸಿದರು. ಸಚಿವರು ಈ ರಸ್ತೆಯಲ್ಲಿ ಸ್ಕೈ ವಾಕರ್ ನಿರ್ಮಾಣ ಮಾಡುವುದಕ್ಕೆ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು. ನಲ್ಲೂರು ಕ್ರಾಸ್ ಬಳಿ ಇರುವ ಟೋಲ್ ಹತ್ತಿರ ರೈತರು ಅಕ್ಕಪ ಕ್ಕದ ಜಮೀನಿಗೆ ಹೋಗಬೇಕಾದರೆ ಹೆದ್ದಾರಿ ಅವರು ರಸ್ತೆ ಬಿಡುತ್ತಿಲ್ಲ. ಸುತ್ತಲೂ ತಡೆಗೋಡೆ ಹಾಕಿಕೊಳ್ಳುತ್ತಿದ್ದಾರೆ ಎಂದು ಮನವಿ ಮಾಡಿದರು. ಇದರ ಬಗ್ಗೆ ಪರಿಶೀಲಿಸಿ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದರು.