Advertisement

ದತ್ತ ಮಂದಿರದಲ್ಲಿ ಗೋಪಾಳ ಕಾವಲಿ

12:31 PM Feb 14, 2020 | Naveen |

ಅಫಜಲಪುರ: ದೇವಲಗಾಣಗಾಪುರದ ದತ್ತ ದೇವಸ್ಥಾನದಲ್ಲಿ ಗುರುವಾರ ಪ್ರತಿಪದ ದಿನದಂದು ದತ್ತ ಮಹಾರಾಜರು ಶ್ರೀಶೈಲದ ಕದಳಿ ವನಕ್ಕೆ ಪ್ರಯಾಣ ಬೆಳೆಸಿದ ಪ್ರಯುಕ್ತ “ಗೋಪಾಳ ಕಾವಲಿ’ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದರ್ಶನ ಪಡೆದರು.

Advertisement

ಗುರುವಾರ ಬೆಳಗಿನ ಜಾವ 2 ಗಂಟೆಗೆ ಕಾಕಡಾರತಿ, ನಿರ್ಗುಣ ಪಾದುಕೆ ಪೂಜೆ, ಪಾಲಕರಿ ಪೂಜಾರಿಗಳಿಂದ ಚಂದನ ಲೇಪನ, 5:30ಕ್ಕೆ ಮಹಾ ಮಂಗಳಾರತಿ, ನಂತರ ಭಕ್ತರಿಗೆ ಪಾದುಕೆಗಳ ದರ್ಶನ, 10 ಗಂಟೆಗೆ ಮಹಾ ಮಂಗಳಾರತಿ, 12 ಗಂಟೆಗೆ ಗೋಪಾಳ ಕಾವಲಿ (ಮೊಸರು ಗಡಿಗೆ ಒಡೆಯುವುದು) 12:30ಕ್ಕೆ ಪಲ್ಲಕ್ಕಿ ಉತ್ಸವವು ಅಪಾರ ಭಕ್ತರೊಂದಿಗೆ ರುದ್ರಪಾದ ತೀರ್ಥಕ್ಕೆ ತೆರಳಿ ಪುಣ್ಯಸ್ನಾನ ನಡೆಯಿತು.

ಪುಣ್ಯಸ್ನಾನ ಬಳಿಕ ಮಧ್ಯಾಹ್ನ 3ಗಂಟೆಗೆ ದೇವಸ್ಥಾನಕ್ಕೆ ಮರಳಿ ಪಲ್ಲಕ್ಕಿ ಬಂತು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸೀಮಾಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ಗೋವಾ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಮುಖಂಡ ಮಹಾದೇವ ಗುತ್ತೇದಾರ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಬಿರಾದಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next