Advertisement

ದೇವಲಗಾಣಗಾಪುರ; ಅದ್ಧೂರಿ ಮಾಘ ಉತ್ಸವ

05:36 PM Mar 05, 2021 | Team Udayavani |

ಅಫಜಲಪುರ: ತಾಲೂಕಿನ ಸುಕ್ಷೇತ್ರ ದೇವಲಗಾಣಗಾಪುರದಲ್ಲಿ ಮಾಘ ಉತ್ಸವ ನಿಮಿತ್ತ ಸಾವಿರಾರು ಭಕ್ತರ ಮಧ್ಯೆ ಮೊಸರು ಗಡಿಗೆ (ಗೋಪಾಳ ಕಾವಲಿ) ಒಡೆಯಲಾಯಿತು. ನಂತರ ರಾಜ್ಯ ಹಾಗೂ ಹೊರ ರಾಜ್ಯಗಳ ಭಕ್ತರು ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ತದನಂತರ ದತ್ತ ಮಹಾರಾಜರು ನಿರ್ಗುಣ ಪಾದುಕೆ ಇಟ್ಟು ಶ್ರೀಶೈಲಕ್ಕೆ ಹೋದ ದಿನದ ಸವಿ ನೆನಪಿಗಾಗಿ ಸನ್ಯಾಸಿಗಳ ಪಾದ ಪೂಜೆ ಮಾಡಲಾಯಿತು.

Advertisement

ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಕೋವಿಡ್‌ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಸೂಚಿಸಿದಂತೆ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸುವಂತೆ, ಸ್ಯಾನಿಟೈಸರ್‌ ಬಳಸುವಂತೆ ಮುನ್ನೆಚ್ಚರಿಕೆ ಸೂಚನಾ ಫಲಕ ಹಾಕಿಸಿದ್ದೇವು. ಅಲ್ಲದೇ ಎಲ್ಲೆಡೆ ಸ್ಯಾನಿಟೈಸರ್‌ ವ್ಯವಸ್ಥೆ ಕೂಡಾ ಮಾಡಲಾಗಿತ್ತು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ರಾಠೊಡ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ:
ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಸುಕ್ಷೇತ್ರದಲ್ಲಿ ದೇವರ ಉತ್ಸವಗಳನ್ನು ಸರಳವಾಗಿ
ಆಚರಿಸಲು ಹಾಗೂ ಹೊರ ರಾಜ್ಯದವರು ಪಾಲ್ಗೊಳ್ಳದಿರಲು ಡಿಸಿ ಆದೇಶಿಸಿದ್ದರು. ಆದರೆ ದೇವಲ ಗಾಣಗಾಪುರದಲ್ಲಿ ನಡೆದ ಮಾಘ ಉತ್ಸವದಲ್ಲಿ ಮಹಾರಾಷ್ಟ್ರದ ಅಪಾರ ಭಕ್ತರು ಆಗಮಿಸಿದ್ದರು. ಅಲ್ಲದೇ ಅಂತರ ಕೂಡ ಕಾಪಾಡಿಕೊಂಡಿದ್ದು ಕಂಡುಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next