Advertisement

ಯಕ್ಷಲೋಕಕ್ಕೆ ಇಳಿದು ಬಂದ “ದೇವಗಂಗೆ’

02:59 PM Sep 02, 2017 | |

ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳಷ್ಟೇ ಸಾಮಾಜಿಕ ಪ್ರಸಂಗಗಳೂ ಸದ್ದು ಮಾಡುತ್ತದೆ. ವಾಸುದೇವಮಯ್ಯ ಅವರ ಕಥಾ ಸಂರಚನೆಯಲ್ಲಿ “ದೇವಗಂಗೆ’ ಎಂಬ ಪ್ರಸಂಗ ಇದೀಗ ಯಕ್ಷರೂಪ ಪಡೆದುಕೊಳ್ಳುತ್ತಿದೆ. ಪೆರ್ಡೂರು ಮೇಳದ ಕಲಾವಿದರು ಸೆ.2ರ ಶನಿವಾರ ರಾತ್ರಿ 10ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರದರ್ಶನವನ್ನು ನಡೆಸಿಕೊಡಲಿದ್ದಾರೆ.

Advertisement

ಯುವ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ನಿರ್ದೇಶನ, ಪ್ರಸಾದ್‌ ಮೊಗೆಬೆಟ್ಟು ಪದ್ಯಸಾಹಿತ್ಯ ಮತ್ತು ರಮೇಶ್‌ ಬೇಗಾರ್‌ ರಂಗ ಸಂಯೋಜನೆಯನ್ನು “ದೇವಗಂಗೆ’ ಹೊಂದಿದೆ. ಮನುಷ್ಯ ಕನಸು ಕಾಣುವುದು ತಪ್ಪಲ್ಲ. ಆದರೆ, ಕಂಡ ಕನಸು ಅರ್ಥಪೂರ್ಣವಾಗಿರದಿದ್ದರೆ, ಏನೆಲ್ಲಾ ಪ್ರಸಂಗವನ್ನು ಅನುಭವಿಸಬೇಕಾದೀತು ಎಂಬ ಸಂಗತಿಯನ್ನು ದೇವಗಂಗಾ ಎನ್ನುವ ಹೆಣ್ಣಿನ ಬದುಕಿನ ಸ್ಥಿತ್ಯಂತರದ ಮೂಲಕ ವಾಸುದೇವ ಮಯ್ಯ ಪಡಿಮೂಡಿಸಿದ್ದಾರೆ. ಯಲಗುಪ್ಪಸುಬ್ರಮಣ್ಯ ಇಲ್ಲಿ ದೇವಗಂಗೆಯಾಗಿ ಬಣ್ಣಹಚ್ಚಲಿದ್ದಾರೆ.

 “ಪೆದ್ದಸಮೀರ’ ಎಂಬ ಹಾಸ್ಯಪಾತ್ರದಲ್ಲಿ ಮೂರೂರು ರಮೇಶ್‌ ಭಂಡಾರಿ ಅಭಿನಯಿಸಲಿದ್ದಾರೆ. ಇವರೊಂದಿಗೆ ರವೀಂದ್ರ ದೇವಾಡಿಗ ಸಾಥ್‌ ನೀಡಲಿದ್ದಾರೆ. ಥಂಡಿಮನೆ ಶ್ರೀಪಾದ ಭಟ್‌, ಕಡಬಾಳು ಉದಯ ಹೆಗಡೆ ರಂಗಸ್ಥಳ ಏರಲಿದ್ದಾರೆ. ತೊಂಭಟ್ಟು ವಿಶ್ವನಾಥ ಆಚಾರ್ಯ, ಕಿರಾಡಿ ಪ್ರಕಾಶ ಮೊಗವೀರ, ಮಾಗೋಡು ಅಣ್ಣಪ್ಪ, ಹೆನ್ನಾಬೈಲು ಸಂಜೀವ ಶೆಟ್ಟಿ, ವಿಜಯಗಾಣಿಗ, ರಮೇಶ ಸೀತೂರು, ಆನಂದ ಭಟ್‌, ಪ್ರಣವ ಭಟ್‌, ಆದಿತ್ಯ ಭಟ್‌, ಉಮೇಶ್‌ ತೋಟಾಡಿ- ಮುಂತಾದ ಕಲಾವಿದರ ತಾರಾಗಣವನ್ನು “ದೇವಗಂಗೆ’ ಹೊಂದಿದೆ. ಜನ್ಸಾಲೆ, ಬ್ರಹೂ¾ರು, ಸುನೀಲ್‌, ಸುಜನ್‌, ಪ್ರಸನ್ನ ಮತ್ತು ಭಾಸ್ಕರ ಇವರ ಹಿಮ್ಮೇಳವನ್ನು ಪ್ರದರ್ಶನ ಒಳಗೊಂಡಿದೆ.

ಹೊಸತನದ ಸಿಂಹರಾಜ
ಅಂದಹಾಗೆ, ಈ ಪ್ರಸಂಗದಲ್ಲಿ ಪುರಾಣದ ಜಾಂಬವಂತನನ್ನು ಹೋಲುವ ಸಿಂಹರಾಜನ ಪಾತ್ರವೊಂದನ್ನು ಸೃಷ್ಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮಖ ಪ್ರತಿಭೆ ಕೆಕ್ಕಾರು ಆನಂದ ಭಟ್‌ ಇದನ್ನು ನಿರ್ವಹಿಸಲಿದ್ದು, ಹೊಸತನದ ಆಹಾರ್ಯದ ಸಿದ್ಧತೆ ನಡೆಸಿದ್ದಾರೆ. ಯಕ್ಷಗಾನೀಯವಾದ ಅಂಗಾಭರಣ- ಕಿರೀಟಗಳ ಜೊತೆಗೆ ಮುಖವಾಡವನ್ನು ಅಳವಡಿಸಿದ ಈ ಪ್ರಾಯೋಗಿಕ ದಿರಿಸಿನೊಂದಿಗೆ, ಕರ್ಕಿ ಹಾಸ್ಯಗಾರ ಸಂಪ್ರದಾಯದಿಂದ ಪ್ರೇರಣೆ ಪಡೆದ ತೆರೆಒಡ್ಡೋಲಗವನ್ನು ಈ ಪಾತ್ರಕ್ಕೆ ಅಳವಡಿಸಲಾಗಿದೆ.

ಯಾವಾಗ?: ಸೆ.2, ಶನಿವಾರ, ರಾ.10 
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ
ಸಂಪರ್ಕ: ಮೊ. 9448101708, 9900808109

Advertisement
Advertisement

Udayavani is now on Telegram. Click here to join our channel and stay updated with the latest news.

Next