Advertisement

ರಜೆ ದಿನ ಮರಳು ಸಾಗಣೆ ಬಂದ್‌ ಮಾಡಿ

05:35 PM Nov 30, 2019 | |

ದೇವದುರ್ಗ: ತಾಲೂಕಿನ ನದಿ ದಂಡೆ ಗ್ರಾಮಗಳಲ್ಲಿ ರವಿವಾರ ಸರ್ಕಾರಿ ರಜೆ ದಿನ ಮರಳು ಸಾಗಣೆಗೆ ಅನುಮತಿ ನೀಡದೆ, ಬಂದ್‌ ಮಾಡಬೇಕು. ಅಕ್ರಮ ಮರಳು ಸಾಗಣೆಗೆ ಅವಕಾಶ ನೀಡದೆ ಅಧಿಕಾರಿಗಳು ಕೆಲಸ ನಿರ್ವಹಿಸುವಂತೆ ಮರಳು ಸಮಿತಿ ಸದಸ್ಯರಿಗೆ ಸಹಾಯಕ ಆಯುಕ್ತ ಸಂತೋಷ್‌ ಸೂಚಿಸಿದರು. ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ತಾಲೂಕು ಮರಳು ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಹಕಾರ ಅಗತ್ಯ: ಬೆಳಗ್ಗೆ 6ರಿಂದ ಸಂಜೆ 6ರ ವೆಗೆ ಮಾತ್ರ ಮರಳು ಸಾಗಣೆಗೆ ಅವಕಾಶ ನೀಡಬೇಕು. ರಾತ್ರಿ ವೇಳೆ ಮರಳು ಸಾಗಣೆ, ಓವರ್‌ ಲೋಡ್‌, ಅನಧಿಕೃತ ಮರಳು ಸಾಗಣೆಗೆ ಅವಕಾಶ ನೀಡಬಾರದು. ಮರಳು ಸಮಿತಿ ಸದಸ್ಯರು ಪ್ರತಿನಿತ್ಯ ಒಬ್ಬರಂತೆ ಮರಳು ಖರೀದಿ ಕೇಂದ್ರ, ತಪಾಸಣೆ ಕೇಂದ್ರಕ್ಕೆ ಭೇಟಿ ನೀಡಬೇಕು. ಅಕ್ರಮ ಮರಳು ತಡೆಗೆ ಎಲ್ಲ ಇಲಾಖೆ ಸಹಕಾರ ಅಗತ್ಯ ಎಂದರು.

ಒಗ್ಗಟ್ಟಿನಿಂದ ಕೆಲಸ ಮಾಡಿ: ಚೆಕ್‌ಪೋಸ್ಟ್‌, ಮರಳು ಕೇಂದ್ರಗಳಲ್ಲಿ ಆಸನ, ಟೇಬಲ್‌, ಬೆಳಕು, ಕುಡಿವ ನೀರಿನ ವ್ಯವಸ್ಥೆ ಪಿಡಬ್ಲ್ಯೂಡಿ ಅಧಿಕಾರಿಗಳು ಮಾಡಬೇಕು. ಚೆಕ್‌ ಪೋಸ್ಟ್‌, ಮರಳು ಬ್ಲಾಕ್‌ನಲ್ಲಿ ಹಾಜರಿ ಪುಸ್ತಕ ಇರಿಸಿ, ಅಧಿಕಾರಿಗಳು ಭೇಟಿ ನೀಡಿದ ಬಗ್ಗೆ ಸಹಿ ಪಡೆಯಬೇಕು. ರಾಯಚೂರಿಗಿಂತ ದೇವದುರ್ಗದಲ್ಲಿ ಅಕ್ರಮ ಮರಳು ಸಾಗಣೆ ಬಗ್ಗೆ ಹೆಚ್ಚು ದೂರುಗಳು ಕೇಳಿಬಂದಿವೆ. ಎಲ್ಲ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಿಮ್ಮದೆಯಾದ ವಾಟ್ಸ್‌ ಆ್ಯಪ್‌ ಗ್ರುಪ್‌ ರಚಿಸಿ ಪ್ರತಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದರು.

ಪಿಡಬ್ಲ್ಯೂಡಿ, ಆರ್‌ಟಿಒ ಅ ಧಿಕಾರಿಗಳು ದಾಳಿ ನಡೆಸಿದ ಬಗ್ಗೆ ತಹಶೀಲ್ದಾರ್‌, ಪೊಲೀಸ್‌ ಅಧಿಕಾರಿಗಳು ಹಾಗೂ ನನಗೂ ಒಂದು ಮಾಹಿತಿ ಹಾಕಿ. ಲಾರಿ ತಪಾಸಣೆ ಮಾಡಿದರೆ, ನಿಮ್ಮ ಸಹಿ, ದಿನಾಂಕ, ಸಮಯ ನಮೋದಿಸಿ, ರಾಯಲ್ಟಿ ಲಾಕ್‌ ಮಾಡಬೇಕು ಎಂದು ಸೂಚಿಸಿದರು. ಸಿಪಿಐ ಲೋಕೇಶ ಮಾತನಾಡಿ, ಇತ್ತೀಚೆಗೆ ಕರ್ಕಿಹಳ್ಳಿ, ಬಾಗೂರಿನಲ್ಲಿ ದಾಳಿ ನಡೆಸಿ ಸುಮಾರು 12 ಸಾವಿರ ಮೆಟ್ರಿಕ್‌ ಟನ್‌ ಮರಳು ವಶಕ್ಕೆ ಪಡೆಯಲಾಗಿದೆ. ಸುಮಾರು 32 ಪ್ರಕರಣಗಳು ದಾಖಲಾಗಿವೆ. ಅಕ್ರಮ ಮರಳು ಸಾಗಣೆ ಕಂಡುಬಂದರೆ, ಆ್ಯಕ್ಟ್ 379 ಹಾಗೂ ಎಂಎಂಆರ್‌ ಡಿಯಡಿ ಪ್ರಕರಣ ದಾಖಲಿಸಲಾಗುವುದು ಎಂದರು.

ಪಿಡಬ್ಲ್ಯೂಡಿ ಅಧಿಕಾರಿ ಮಂಜುನಾಥ, ತಾಲೂಕಿನ ಮರಳು ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರ್‌ ಮಂಜುನಾಥ ಭೋಗಾವತಿ, ಸಿಪಿಐ ಲೋಕೇಶ, ದೇವದುರ್ಗ ಪಿಎಸ್‌ಐ ಎಲ್‌.ಬಿ. ಅಗ್ನಿ, ಜಾಲಹಳ್ಳಿ ಪಿಎಸ್‌ಐ ಬಸವರಾಜ ಹೊಸಹಳ್ಳಿ, ಭೂ ಮತ್ತು ಗಣಿ ಇಲಾಖೆ ಅಧಿಕಾರಿ ಮಂಜುನಾಥ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯಾಂಕಾ, ಶ್ರೀನಿವಾಸ್‌ ಚಾಪಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next