Advertisement

ನೀರಿಲ್ಲದೇ ಒಣಗುತ್ತಿವೆ ರಸ್ತೆ ಪಕ್ಕದ ಗಿಡಗಳು!

12:35 PM Apr 06, 2019 | Naveen |

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಆರೇಳು ತಿಂಗಳ ಹಿಂದೆ ರಸ್ತೆ ಬದಿ ಸಾವಿರಾರು ಸಸಿಗಳನ್ನು ನೆಡಲಾಯಿತು. ಸಂರಕ್ಷಣೆ ಮಾಡಬೇಕಾದ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮ ಗಿಡಗಳು ಬಾಡಲು ಆರಂಭಿಸಿವೆ. ರಾಜ್ಯ ಹೆದ್ದಾರಿ, ಶಾಲಾ-ಕಾಲೇಜು, ಜಹಿರುದ್ದೀನ್‌ ವೃತ್ತದಿಂದ ಸಾರ್ವಜನಿಕ ಕ್ಲಬ್‌
ವರೆಗೆ ರಸ್ತೆಯ ಎಡಬಲಕ್ಕೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸುವವರು ಇಲ್ಲದೇ ಇರುವ ಕಾರಣ ಬಾಡುತ್ತಿವೆ. ಸಾರ್ವಜನಿಕ ಕ್ಲಬ್‌ ಆವರಣದ ಒಳಗೆ ಹಾಕಿದ ಗಿಡಗಳು ಬಹುತೇಕ ಈಗಾಗಲೇ ಬಾಡಿ
ಹೋಗಿವೆ. ಪರಿಸರ ದಿನಾಚರಣೆಯೆಂದೇ ಸರಕಾರಿ ಶಾಲಾ-ಕಾಲೇಜು ಸರಕಾರಿ ಕಚೇರಿ ಆವರಣದಲ್ಲಿ ಸಸಿಗಳು ನೆಡುವುದು ಸಾಮಾನ್ಯ. ಆದರೆ ಅವುಗಳ ಸಂರಕ್ಷಣೆ ಮಾಡಿ ಉತ್ತಮ ಪರಿಸರ, ವಾತಾವರಣ ನಿರ್ಮಿಸಲು ಅಧಿಕಾರಿಗಳು, ಸಂಘ ಸಂಸ್ಥೆಯವರು
ಆಸಕ್ತಿ ವಹಿಸದಿರುವುದರಿಂದ ವರ್ಷದಲ್ಲೇ ಬಾಡಿ, ದನಕರಗಳ ಬಾಯಿಗೆ ಆಹಾರವಾಗುತ್ತಿವೆ.

Advertisement

ರಾಜ್ಯ ಹೆದ್ದಾರಿ ಕಲಬುರಗಿ, ತಿಂಥಿಣಿ ಬ್ರಿಜ್‌, ಕ್ರೀಡಾಂಗಣದಲ್ಲಿ ಗಿಡಗಳು ಹಾಕಲಾಗಿದೆ. ಅರಣ್ಯ ಇಲಾಖೆಯಿಂದ ಅವುಗಳ ಸಂರಕ್ಷಣೆ ನೀರು ಹಾಕದಿರುವುದರಿಂದ ಇದೀಗ ಬಾಡುತ್ತಿವೆ. ವಾರದ
ರವಿವಾರಕ್ಕೆ ಒಂದು ದಿನ ಸಂಘಟನೆಯಿಂದ ಟ್ಯಾಂಕರ್‌ ಮೂಲಕ ಗಿಡಗಳಿಗೆ ನೀರು ಹಾಕಲಾಗುತ್ತಿದೆ. ಉಳಿದ ದಿನ ಸಂಘಟನೆಯವರು
ಅಧಿ ಕಾರಿಗಳು ನೀರು ಹಾಕದೇ ವಾರ ಬರುವವರೆಗೆ ಗಿಡಗಳಿಗೆ ನೀರಿಲ್ಲದೇ ಬಾಡುತ್ತಿವೆ. ಮುಂಗಾರು, ಹಿಂಗಾರು ವೈಫಲ್ಯ, ಮಳೆ ಕೊರತೆ ಹೀಗಾಗಿ ಬೆಳೆದು ನೆರಳಿನ ಆಸರೆ ನೀಡಬೇಕಾದ ಗಿಡಗಳು ನೀರಿನ ಅಭಾವದಿಂದ ಇದೀಗ ಬಾಡಲು ಆರಂಭಿಸಿವೆ. ಮುಖ್ಯರಸ್ತೆ ಪಕ್ಕದಲ್ಲಿ ಹಾಕಿದ ಗಿಡಗಳಿಗೆ ಪಕ್ಕದ ಅಂಗಡಿ ಹೋಟೆಲ್‌ ಮಾಲೀಕರು ನಿತ್ಯ ಒಂದೆರಡು ಕೊಡಗಳು ನೀರು ಹಾಕುತ್ತಿದ್ದರು. ಆದರೆ ಬೇಸಿಗೆ ಆರಂಭವಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಮಾಲೀಕರು ಗಿಡಗಳಿಗೆ ನೀರು ಎಲ್ಲಿಂದ ಹಾಕಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಶಾಸಕ ಕೆ.ಶಿವನಗೌಡ ನಾಯಕ ಬಿಜೆಪಿ ಸರಕಾರ ಆಡಳಿತ ಅವ ಧಿಯಲ್ಲಿ ಮಂಜೂರು ಆಗಿದ್ದ ಕ್ರೀಡಾಂಗಣ ಅಂದಿನ ಸಚಿವ ಗೂಳ್ಳಿಹಟ್ಟಿ ಶೇಖರ ಉದ್ಘಾಟಿಸಿದರು. ಸುತ್ತಲೂ ಕಾಂಪೌಂಡ್‌ ವ್ಯವಸ್ಥೆ ಕುಡಿಯುವ ನೀರು, ರಸ್ತೆ ಅರೆಬರೆ ಕಾಮಗಾರಿ
ಮಾಡಿದ ಪರಿಣಾಮ ಇಲ್ಲಿವರೆಗೆ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಹೋಗದಿರುವುದರಿಂದ ಪಾಳು ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕ್ರೀಡಾಂಗಣ ಸುತ್ತಲೂ ಸಸಿ ನೆಡಲಾಗಿದೆ. ನೀರುಣಿಸುವ ಆಲೋಚನೆ ಮಾಡದೇ ಹಿನ್ನೆಲೆ ಬೇಸಿಗೆ ಬಿಸಿಲಿಗೆ ಬಾಡಲು ಆರಂಭಿಸಿವೆ.

ಸಿಪಿಐ ಟಿ.ಸಂಜೀವಕುಮಾರ ಗಿಡಗಳು ಬೆಳೆಸಲು ಬಹಳ ಆಸಕ್ತಿ ತೋರಿದರು. ಆದರೆ ಅವರ ವರ್ಗಾವಣೆ ಹಿನ್ನೆಲೆ ಸಂಘಟನೆಯವರು ಅಲ್ಪಸ್ವಲ್ಪ ರಕ್ಷಣೆ ಬಿಟ್ಟರೇ ಸಂಬಂಧಪಟ್ಟ ಅರಣ್ಯಾಧಿ ಕಾರಿಗಳು ಗಿಡಗಳು ಯಾವ ಹಂತದಲ್ಲಿ ಇವೆ ಎಂಬುದನ್ನು ನೋಡುವ ಗೋಜಿಗೆ ಹೋಗದಿರುವುದರಿಂದ ಪರಿಸರ ದಿನಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೀಸಲಾಗಿದ್ದಾರೆ ಎಂದು ಸ್ಥಳೀಯರಾದ ಅಮರೇಶ ಆರೋಪಿಸಿದ್ದಾರೆ.

‌ಪಟ್ಟಣದ ಪ್ರಮುಖ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನೆಟ್ಟಿರುವ ಗಿಡಗಳು
ನೀರಿಲ್ಲದೇ ಬಾಡುತ್ತಿವೆ. ಅರಣ್ಯಾಧಿ ಕಾರಿಗಳು ಸಂರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಸಂಘಟನೆಯವರು
ಆಸಕ್ತಿ ವಹಿಸಿದ್ದರಿಂದ ಅಲ್ಪ ಸ್ವಲ್ಪ ಗಿಡಗಳು ನೋಡುವಂತಾಗಿದೆ.
.ಎಚ್‌.ಶಿವರಾಜ, ಕರವೇ ಮುಖಂಡ

Advertisement

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next