Advertisement

ಕ್ವಾರಂಟೈನ್‌ನಲ್ಲಿದ್ದವರಿಗೆ ಹೆಚ್ಚಿದ ಭಯ

12:13 PM May 22, 2020 | Naveen |

ದೇವದುರ್ಗ: ತಾಲೂಕಿನಲ್ಲಿ ಒಟ್ಟು ಮೂರು ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿದ್ದು, ಇಡೀ ತಾಲೂಕಿನ ಜನರನ್ನು ತಲ್ಲಣಗೊಳಿವೆ.

Advertisement

ಸಾರಿಗೆ ಸಂಸ್ಥೆ ಬಸ್‌ ಸೇರಿ ಖಾಸಗಿ ವಾಹನಗಳಲ್ಲಿ ಪ್ರತಿದಿನ ಸರಾಸರಿ 200 ಜನ ಕೂಲಿಕಾರರು ಬರುತ್ತಿದ್ದು, ಎಲ್ಲರನ್ನೂ ವಿವಿಧ ಇಲಾಖೆ ಹಾಸ್ಟೆಲ್‌ ಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಮಸರಕಲ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2 ಹಾಗೂ ಕೊತ್ತದೊಡ್ಡಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯಲ್ಲಿ 1 ಸೇರಿ ಮೂವರಿಗೆ ಕೋವಿಡ್ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಉಳಿದ ಹಾಸ್ಟೆಲ್‌ಗ‌ಳಲ್ಲಿ ಇರುವ ಸುಮಾರು ಎರಡು ಸಾವಿರ ಜನರಿಗೆ ಭಯ ಶುರುವಾಗಿದ್ದು, ಇಲ್ಲಿನ ಕೂಲಿಕಾರರಿಗೆ ಕ್ವಾರಂಟೈನ್‌ ಮಾಡಲಾಗಿದೆ.

ಅದರಂತೆ ನಿತ್ಯ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈವರೆಗೆ ಯಾರೂ ಕೂಡ ಕ್ವಾರಂಟೈನ್‌ನಿಂದ ಬಿಡುಗಡೆಯಾಗಿಲ್ಲ. ಪಾಸಿಟಿವ್‌ ಕಂಡುಬಂದ ತಾಲೂಕಿನ ಎರಡು ಹಾಸ್ಟೆಲ್‌ಗ‌ಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಕಂಟೇನ್ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದೆ. ಎರಡು ಪ್ರಕರಣ ಕಂಡು ಬಂದ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ 242 ಹಾಗೂ ಒಂದು ಪ್ರಕರಣ ಕಂಡು ಬಂದ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯಲ್ಲಿ 238 ಜನರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಪಾಸಿಟಿವ್‌ ಪ್ರಕರಣ ಕಂಡುಬಂದ ಮೂವರಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ನೂರಾರು ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಹಶೀಲ್ದಾರ್‌ ಮಧುರಾಜ್‌ ಯಾಳಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next