Advertisement

ಸ್ವಚ್ಛತೆ -ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರ ಆಗ್ರಹ

07:51 PM Feb 29, 2020 | Naveen |

ದೇವದುರ್ಗ: ಪಟ್ಟಣದ ಬಸ್‌ ನಿಲ್ದಾಣದ ಬಳಿಯ ರಾಜಕಾಲುವೆ ಸೇರಿ ಪಟ್ಟಣದ ವಿವಿಧ ಬಡಾವಣೆ, ರಸ್ತೆಗಳಲ್ಲಿನ ಚರಂಡಿ ಸ್ವಚ್ಛತೆ ಜೊತೆಗೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಪಟ್ಟಣದಲ್ಲಿ ಚರಂಡಿ ಸ್ವಚ್ಛತೆ ಮಾಡದ್ದರಿಂದ ಮತ್ತು ತ್ಯಾಜ್ಯ ವಿಲೇವಾರಿ ಆಗದ್ದರಿಂದ ಸೊಳ್ಳೆ ಹಾವಳಿ ಹೆಚ್ಚಾಗಿ ಸಾರ್ವಜನಿಕರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಮೊದಲೇ ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುತ್ತಿದ್ದು ರಾತ್ರಿ ಸೊಳ್ಳೆ ಕಾಟಕ್ಕೆ ಮಲಗಲು ಆಗುತ್ತಿಲ್ಲ. ಪಟ್ಟಣದ ಬಸ್‌ ನಿಲ್ದಾಣ ಬಳಿಯ ರಾಜಕಾಲುವೆಗೆ ಸುತ್ತಲಿನ ವ್ಯಾಪಾರಿಗಳು ಕಸ, ಪ್ಲಾಸ್ಟಿಕ್‌, ಗ್ಲಾಸ್‌ ಇತರೆ ತ್ಯಾಜ್ಯ ಎಸೆಯುತ್ತಿದ್ದು, ಕೊಳಚೆ ನೀರು ಸರಿಯಾಗಿ ಹರಿಯುತ್ತಿಲ್ಲ. ಇಲ್ಲಿನ ವಾತಾವರಣ ಹದಗೆಟ್ಟಿದೆ. ಬಸ್‌ ನಿಲ್ದಾಣದಲ್ಲೂ ಸೊಳ್ಳೆ ಹಾವಳಿ ಹೆಚ್ಚಿದೆ. ಪಟ್ಟಣದಲ್ಲಿ ಕಸ ಸಂಗ್ರಹಕ್ಕೆ ಆರು ವಾಹನಗಳನ್ನು ಖರೀದಿಸಲಾಗಿದೆ. ಆದರೆ ಡ್ರೈವರ್‌ ಇಲ್ಲದ ಕಾರಣಕ್ಕೆ ನೈರ್ಮಲ್ಯ ಕಚೇರಿ ಆವರಣದಲ್ಲಿ ಇವುಗಳನ್ನು ನಿಲ್ಲಿಸಲಾಗಿದೆ.

ಹೀಗಾಗಿ ಮನೆಯಲ್ಲಿ ಸಂಗ್ರಹವಾಗುವ ಒಣ ಮತ್ತು ಹಸಿ ಕಸ ವಿಲೇವಾರಿ ಮಾಡುವುದೇ ತಲೆ ನೋವಾಗಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಸ್ವಚ್ಛತೆಗೆ ಕ್ರಮ ಕೈಗೊಳ್ಳುವ ಜತೆಗೆ ಪಟ್ಟಣದೆಲ್ಲೆಡೆ ಫಾಗಿಂಗ್‌ಗೆ ಮುಂದಾಗಬೇಕು. ಗ್ರಾಮೀಣ ಭಾಗದಲ್ಲೂ ಗ್ರಾಪಂ ಅಧಿಕಾರಿಗಳು ಸ್ವಚ್ಛತೆಗೆ ಮತ್ತು ಸೊಳ್ಳೆ ಹಾವಳಿ ತಡೆಗೆ ಮುಂದಾಗಬೇಕು ಎಂದು ಮುಸ್ಟೂರು ಗ್ರಾಮದ ದೇವಪ್ಪ ಇತರರು ಆಗ್ರಹಿಸಿದ್ದಾರೆ.

ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ. ಸದಸ್ಯರಿಂದ ದೂರುಗಳು ಬಂದಲ್ಲಿ ಸ್ಪಂದಿಸಲು ಅಧಿಕಾರಿಗಳು, ಸಿಬ್ಬಂದಿಗೆ ಸೂಚಿಸಿದ್ದೇನೆ.
ತಿಮ್ಮಪ್ಪ ಜಗ್ಲಿ,
ಪುರಸಭೆ ಮುಖ್ಯಾಧಿಕಾರಿ

ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮಸ್ಥರಿಂದ ದೂರುಗಳು ಬಂದಲ್ಲಿ ಕ್ರಮ ವಹಿಸಲಾಗುತ್ತದೆ.
ವೆಂಕಟೇಶ ಗಲಗ,
 ತಾಪಂ ಪ್ರಭಾರಿ ಇಒ

Advertisement
Advertisement

Udayavani is now on Telegram. Click here to join our channel and stay updated with the latest news.

Next