Advertisement

ಪತ್ರಿಕೆಗಳು ಜನರ ಧ್ವನಿಯಾಗಲಿ

01:19 PM Aug 26, 2019 | Naveen |

ದೇವದುರ್ಗ: ಪತ್ರಿಕೆಗಳು ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಜನರ ಧ್ವನಿಯಾಗಬೇಕು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

Advertisement

ದೇವದುರ್ಗ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ರವಿವಾರ ಪಟ್ಟಣದ ಮುರಿಗೆಪ್ಪ ಖೇಣೇದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಿಕೆಗಳು ಸರಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕು. ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಜೊತೆಗೆ ಸರ್ಕಾರದ ಲೋಪದೋಷಗಳನ್ನು ಬೆಳಕಿಗೆ ತರುವುದು ಪತ್ರಿಕೆ, ಪತ್ರಕರ್ತರ ಜವಾಬ್ದಾರಿಯಾಗಿದೆ. ಸರಕಾರ ಜಾರಿಗೆ ತರುವ ಯೋಜನೆಗಳ ಬಗ್ಗೆ ಪ್ರಚುರಪಡಿಸಿ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪತ್ರಕರ್ತರು ವ್ಯಕ್ತಿಗತವಾಗಿ ತೇಜೋವಧೆ ಮಾಡುವಂತಹ ವರದಿಗಳನ್ನು ಮಾಡಬಾರದು. ಸತ್ಯಾಸತ್ಯತೆ ಅರಿತು ವರದಿ ಮಾಡುವ ಮೂಲಕ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಕಣ್ಣು ತೆರೆಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆದಕ್ಕಿಂತ ಕೆಟ್ಟದ್ದೇ ಹೆಚ್ಚಾಗಿ ಸುದ್ದಿ ಹರಡುವುದರಿಂದ ಬಹುತೇಕ ಕುಟುಂಬಗಳಿಗೆ ಆಘಾತ ಆಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಪತ್ರಿಕೆಗಳ ಕೆಲಸ ಮುಖ್ಯವಾಗಿದೆ. ಬಹುತೇಕ ಪತ್ರಕರ್ತರ ಜೀವನ ಕಷ್ಟದಾಯಕವಾಗಿದೆ. ಸಮಾಜದ ಒಳಿತಿಗಾಗಿ ಶ್ರಮಿಸುವ ಪತ್ರಕರ್ತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದರು.

Advertisement

ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ, ಪತ್ರಕರ್ತರು ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಕಣ್ತೆರೆಸಬೇಕು ಎಂದರು.

ತಹಶೀಲ್ದಾರ್‌ ಮಂಜುನಾಥ ಮಾತನಾಡಿ, ಪ್ರವಾಹದ ಸಂದರ್ಭದಲ್ಲಿ ಪತ್ರಿಕೆಗಳು, ಪತ್ರಕರ್ತರು ನೈಜ ವರದಿ ಮಾಡಿದ್ದಾರೆ. ಇಲ್ಲಿನ ಪತ್ರಕರ್ತರಲ್ಲಿ ಕ್ರಿಯಾಶೀಲತೆ ಹೆಚ್ಚಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಪತ್ರಕರ್ತರು ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರಾದ ರಂಗಣ್ಣ ಪಾಟೀಲ ಅಳ್ಳುಂಡಿ, ಮಲ್ಲೇಶ ಮಹಾಶೆಟ್ಟ ಅವರಿಗೆ ಸಿರಿದುರ್ಗ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗಿರಿಯಪ್ಪ ಪೂಜಾರಿ ಜಾಲಹಳ್ಳಿ, ಆನಂದ ಗುಡಿ ಅರಕೇರಾ, ಪ್ರಭು ಯಾದವ ಗಬ್ಬೂರು ಅವರಿಗೆ ತಾಲೂಕು ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಗರಿಕ ವೇದಿಕೆ ಸಂಚಾಲಕ ಭಾನುಪ್ರಕಾಶ ಖೇಣೇದ, ಬಸವರಾಜ ಅಮರಾಪುರ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರಶೇಖರ ನಾಡಗೌಡ, ಸರಿಗಮಪ ಯುವ ಗಾಯಕಿ ಮೋನಮ್ಮ ಸೋಮನಮರಡಿ, ಪತ್ರಿಕಾ ವಿತರಕ ವೆಂಕಟೇಶ, ಏಳುಬಾವೆಪ್ಪ ಗೌಡ ಅವರನ್ನು ಗೌರವಿಸಲಾಯಿತು. ಜಿಪಂ ಸದಸ್ಯರಾದ ಶರಭಣ್ಣ ಸಾಹು, ವೀರಣ್ಣ ಪಾಣಿ, ಸಂದೀಪ ನಾಯಕ, ಗುಂಡಮ್ಮ ಹನುಮಯ್ಯ, ದೇವೀಂದ್ರಪ್ಪ ಸಾಸ್ವಿಗೇರಾ, ಜಿಪಂ ಎಇಇ ವೆಂಕಟೇಶ ಗಲಗ, ಪುರಸಭೆ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಸಿಪಿಐ ಎನ್‌.ಲೋಕೇಶ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಗುರುನಾಥ, ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಬಾಬುಅಲಿ, ಮೈನುದ್ಧೀನ್‌ ಕಾಟಮಳ್ಳಿ, ನರಸಿಂಗರಾವ್‌ ಸರ್ಕಿಲ್, ಬಸವರಾಜ ಬ್ಯಾಗವಾಟ, ಅಲಿಬಾಬು ಪಟೇೕಲ, ನಾಗರಾಜ ತೇಲ್ಕರ್‌, ಮಹ್ಮದ್‌ ರಫಿ, ನಾಗರಾಜ ಸುಟ್ಟಿ, ರವಿ ಪಾಟೀಲ ಅಳ್ಳುಂಡಿ, ಸುರೇಶ ಪಾಟೀಲ, ಗುರುನಾಥ ಇಂಗಳದಾಳ, ನಾಗರಾಜ ಸೋಮಕರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next