ದೇವದುರ್ಗ: ಪಟ್ಟಣದ ಪಶು ಆಸ್ಪತ್ರೆ ಪಕ್ಕದಲ್ಲಿರುವ ಆಹಾರ ಸರಬರಾಜು ನಿಗಮದ ಹಳೆ ಗೋದಾಮುಗಳಿಗೆ ಭದ್ರತೆ ಕೊರತೆ ಕಾಡುತ್ತಿದೆ.
Advertisement
ಗೋದಾಮುಗಳಲ್ಲಿ ಸಾವಿರಾರೂ ಕ್ವಿಂಟಲ್ ಅಕ್ಕಿ, ಬೆಳೆ, ಗೋಧಿ ಸೇರಿ ಇತರೆ ಆಹಾರ ಸಂಗ್ರಹಿಸಲಾಗುತ್ತಿದೆ. ಗೋದಾಮು ಸುತ್ತಲೂ ಮಲ ಮೂತ್ರವಿಸರ್ಜನೆ ಮಾಡಲಾಗುತ್ತಿದೆ. ಅವ್ಯವಸ್ಥೆ ಆಗರ ವಾತಾವರಣದಲ್ಲಿ ಆಹಾರ ಸಂಗ್ರಹ ಮಾಡಲಾಗಿದೆ. 50 ಸಾವಿರ 200 ಬಿಪಿಎಲ್ ಪಡಿತರ್ ಕಾರ್ಡ್, 9800 ಅತ್ಯೋದಯ, ತಿಂಥಿಣಿ ಬ್ರಿಜ್‌ನಲ್ಲಿರುವ ಕನಕ ಗುರು ಪೀಠ ಕಾಗಿನಲೆಗೆ 24 ಕ್ವಿಂಟಲ್ ಅಕ್ಕಿ ಉಚಿತವಾಗಿ ಪೂರೈಸಲಾಗುತ್ತಿದೆ.
Related Articles
Advertisement
ಸಾವಿರಾರು ಕ್ವಿಂಟಲ್ ಆಹಾರ: ಪಟ್ಟಣ ಸೇರಿ ತಾಲೂಕಿನಾದ್ಯಂತ 108 ನ್ಯಾಯಬೆಲೆ ಅಂಗಡಿಗಳಿಗೆ 12 ಸಾವಿರ ಕ್ವಿಂಟಲ್ ಅಕ್ಕಿ, 558 ಕ್ವಿಂಟಲ್ ಬೆಳೆ ಪೂರೈಸಲಾಗುತ್ತಿದೆ. ಸರಕಾರದಿಂದ ಆಹಾರ ನಿಗಮಕ್ಕೆ ಗೋಧಿ ಸಮರ್ಪಕವಾಗಿ ಪೂರೈಕೆಯಾಗದೇ ಇರುವುದರಿಂದ ವಿಳಂಬವಾಗುತ್ತಿದೆ. ಮಧ್ಯಾಹ್ನ ಬಿಸಿಊಟ ಯೋಜನೆಗೆ ನಿಗಮದಿಂದ 350 ಸರಕಾರಿಗೆ ಶಾಲೆಗಳಿಗೆ 1500 ಕ್ವಿಂಟಲ್ ಅಕ್ಕಿ ಸೇರಿ ಎಣ್ಣೆ, ಗೋಧಿ, ಬೆಳೆ ಸೇರಿ ಇತರೆ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಬಿಸಿಎಂ, ಸಮಾಜ ಕಲ್ಯಾಣ, ಎಸ್‌ಟಿ ಸೇರಿ ಇತರೆ ವಸತಿ ನಿಲಯಗಳಿಗೆ ನೂರಾರು ಕ್ವಿಂಟಲ್ ಆಹಾರ ಪೂರೈಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಸಲು ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಎರಡು ಕಳ್ಳತನ: ಆಹಾರ ಸರಬರಾಜು ನಿಗಮಕ್ಕೆ ಸ್ವಂತ ಕಚೇರಿ ಸೌಲಭ್ಯ ಇಲ್ಲ. ಕೃಷಿ ಮಾರುಕಟ್ಟೆ ಆವರಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಯುತ್ತಿದೆ. ಇದರಿಂದ ಇಲ್ಲಿನ ಗೋದಾಮುಗಳನ್ನು ರಕ್ಷಣೆ ಮಾಡದೇ ಇರುವ ಕಾರಣ ಇದೀಗ ಎರಡು ಬಾರಿ ಕಳ್ಳತನವಾಗಿದೆ. ರಾತ್ರಿ ಗೋದಾಮುಗಳು ಕಾಯುವ ಕಾವಲಗಾರರು ಇಲ್ಲದೇ ಅನಾಥವಾಗಿದೆ. ನಿಗಮದಲ್ಲಿ ವ್ಯವಸ್ಥಾಪಕ ಹುದ್ದೆ ಬಿಟ್ಟರೇ ಕಂಪ್ಯೂಟರ್, ಪರಿಚಾರಕ, ರಾತ್ರಿ ಕಾವಲುಗಾರ ಹುದ್ದೆಗಳು ಸುಮಾರು ವರ್ಷಗಳಿಂದ ಭರ್ತಿಯಾಗಿಲ್ಲ.
ಸ್ವಯಂ ನಿವೃತ್ತಿ: ಇಲ್ಲಿನ ಆಹಾರ ಸರಬರಾಜು ನಿಗಮದಲ್ಲಿ ಕರ್ತವ್ಯ ನಿಭಾಹಿಸುತ್ತಿದ್ದ ಅಧಿಕಾರಿ ಕಳೆದ ಎರಡು ವರ್ಷಗಳಿಂದೆ ಸ್ವಯಂ ನಿವೃತ್ತಿ ಹೊಂದಿದ್ದಾರೆ. ನ್ಯಾಯಬೆಲೆ ಅಂಗಡಿಯವರು, ಬಿಪಿಎಲ್ ಕುಟುಂಬದವರು, ಸಂಘ ಸಂಸ್ಥೆಯವರು, ದಿನ ಪತ್ರಿಕೆ ಪೂರೈಸುವ ಏಜೆಂಟರು ಯಾವುದೇ ಸಮಸ್ಯೆ ಕುರಿತು ನಿಗಮದ ವ್ಯವಸ್ಥಾಪಕರ ಬಳಿ ಹೋದರೆ ಸ್ವಯಂ ನಿವೃತ್ತಿ ಹೊಂದಿದ ಅಧಿಕಾರಿ ಜತೆ ಮಾತನಾಡಿದ ಬಳಿಕ ಬಗೆಹರಿಸುತ್ತೇನೆ ಎಂದು ಹೇಳುತ್ತಿರುವುದು ಬಾರಿ ಗೊಂದಲಕ್ಕೆ ಕಾರಣವಾಗಿದೆ.
ಸ್ವಯಂ ನಿವೃತ್ತಿ ಹೊಂದಿದ ಅಧಿಕಾರಿ ಹೆಸರೇ ಅತಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಅಕ್ರಮವಾಗಿ ಅಕ್ಕಿ ಪೂರೈಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ನಿಗಾವಹಿಸಬೇಕಾಗಿದೆ.•ಹೆಸರು ಹೇಳಲು ಇಚ್ಛಿಸದ ಕೂಲಿ ಕಾರ್ಮಿಕ ಸಾವಿರಾರ ಕ್ವಿಂಟಲ್ ಆಹಾರ ಪದಾರ್ಥ ಸಂಗ್ರಹಿಸಲು ಜಾಗದ ಸಮಸ್ಯೆ ಇದೆ. ಕೆಲ ಹುದ್ದೆಗಳು ಖಾಲಿಯಿದ್ದು, ಬಾಡಿಗೆ ಕಟ್ಟಡದಲ್ಲಿ ಕಚೇರಿಗೆ ನಡೆಸಲಾಗುತ್ತಿದೆ.
•ಶಂಕರಗೌಡ ಪಾಟೀಲ,
ಆಹಾರ ನಿಗಮ ವ್ಯವಸ್ಥಾಪಕ