ದೇವದುರ್ಗ: ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದಾಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ಹಿಂಗಾರು ಬಿತ್ತನೆ ಚುರುಕು ಪಡೆದಿದ್ದು, ತಾಲೂಕಿನಲ್ಲಿ ನೀರಾವರಿ ಮತ್ತು ಖುಷ್ಕಿ ಸೇರಿ 43,565 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜ ಸಂಗ್ರಹಿಸಲಾಗಿದ್ದು, ಜೋಳ ಬೀಜಕ್ಕೆ ಬೇಡಿಕೆ ಹೆಚ್ಚಿದೆ.
Advertisement
ಎಷ್ಟು ಬೀಜ ಸಂಗ್ರಹ: ಪಟ್ಟಣ ಸೇರಿ ತಾಲೂಕಿನಾದ್ಯಂತ ನಾಲ್ಕು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜೋಳ, ಕಡಲೆ ಬೀಜ ಸಂಗ್ರಹಿಸಲಾಗಿದೆ. ದೇವದುರ್ಗದಲ್ಲಿ 95 ಕ್ವಿಂಟಲ್ ಕಡಲೆ, 21 ಕ್ವಿಂಟಲ್ ಜೋಳ, ಜಾಲಹಳ್ಳಿಯಲ್ಲಿ 54 ಕ್ವಿಂಟಲ್ ಕಡಲೆ, 21 ಕ್ವಿಂಟಲ್ ಜೋಳ, ಅರಕೇರಾದಲ್ಲಿ 80 ಕ್ವಿಂಟಲ್ ಕಡಲೆ, 10 ಕ್ವಿಂಟಲ್ ಜೋಳ, ಗಬ್ಬೂರಲ್ಲಿ 54 ಕ್ವಿಂಟಲ್ ಕಡಲೆ, 6 ಕ್ವಿಂಟಲ್ ಜೋಳ ಸಂಗ್ರಹಿಸಲಾಗಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ಪೂರೈಸಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ಆಧಾರ್, ಪಹಣಿ ಕಾರ್ಡ್ ಪಡೆದು, ಎಸ್‌ಸಿ. ಎಸ್‌ಟಿ ವರ್ಗದ ರೈತರಿಗೆ ಜಾತಿ, ಆದಾಯ, ಆಧಾರ್ ಕಾರ್ಡ್ ಪಹಣಿ ದಾಖಲೆ ಪಡೆದು ಸಬ್ಸಿಡಿಯಲ್ಲಿ ಬೀಜ ನೀಡಲಾಗುತ್ತಿದೆ.
Related Articles
Advertisement
ರೈತರಿಗೆ ಜಾಗೃತಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಕಡಲೆ, ಜೋಳ ಬಿತ್ತನೆ ಕೈಗೊಳ್ಳುವ ರೈತರಿಗೆ ಈಗಾಗಲೇ ಕೃಷಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ. ಬೆಳೆಗಳಿಗೆ ರಸಗೊಬ್ಬರ, ಔಷಧ ಹೇಗೆ ಬಳಸಬೇಕು, ಬೆಳೆ ಸಂರಕ್ಷಣೆ, ಭೂಮಿ ಫಲವತ್ತತೆ ಕಾಯ್ದುಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಕಳಪೆ ಗುಣಮಟ್ಟದ ಬೀಜ ಪೂರೈಸುವ ಮಧ್ಯವರ್ತಿಗಳಿಂದ ಬೀಜ ಖರೀದಿದಂತೆ ತಿಳಿವಳಿಕೆ ನೀಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.