Advertisement
2009-10ನೇ ಸಾಲಿನಲ್ಲಿ ಆರಂಭವಾಗಿರುವ ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 52 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಆರಂಭದಲ್ಲಿ ಒಬ್ಬರೇ ಶಿಕ್ಷಕರು ಮರದ ಕೆಳಗೆ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. 2014ರಲ್ಲಿ ಎರಡು ಕೋಣೆಗಳನ್ನು ನಿರ್ಮಿಸಲಾಯಿತು. ಶಾಲಾ ಮುಂಭಾಗದಲ್ಲಿ ಬಸವಣ್ಣ, ಮಹರ್ಷಿವಾಲ್ಮೀಕಿ ಅವರ ಚಿತ್ರಗಳನ್ನು ಬಿಡಿಸಲಾಗಿದೆ.
ನೀಡುವ ಮೂಲಕ ಶಾಲೆ ಪ್ರಗತಿಗೆ ಕೈಜೋಡಿಸಿದ್ದಾರೆ. ಶಾಲೆಯಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಮಧ್ಯಾಹ್ನ ಬಿಸಿಯೂಟ ಮತ್ತು ಕೈತೋಟಕ್ಕೆ ಗಿಡಮರಗಳಿಗೆ ಕೊಳವೆಬಾವಿ ನೀರು ಅನುಕೂಲವಾಗಿದೆ. ಬಳಕೆಯಾಗಿ ಉಳಿದ ನೀರು ನೇರವಾಗಿ ಕೈತೋಟಕ್ಕೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರಿಗಿಂತ ಮಕ್ಕಳ ಪಾಲಕರೇ ಶಾಲೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂದು ಮುಖ್ಯ ಶಿಕ್ಷಕಿ ಭಾಗ್ಯ ತಿಳಿಸಿದರು. ಮಜ್ಜಿಗೇರದೊಡ್ಡಿ ಸರಕಾರಿ ಶಾಲೆಯಿಂದ ಪ್ರತಿ ವರ್ಷ ಮೊರಾರ್ಜಿ ವಸತಿ ಶಾಲೆಗೆ ಮಕ್ಕಳು ಆಯ್ಕೆಯಾಗುತ್ತಿದ್ದಾರೆ. ಪ್ರಸಕ್ತ ವರ್ಷ ನಾಲ್ಕು ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ.