Advertisement

ರಸ್ತೆ-ತಂಗುದಾಣ ದುರಸ್ತಿಗೆ ಆಗ್ರಹ

04:37 PM Apr 28, 2019 | Team Udayavani |

ದೇವದುರ್ಗ: ಪಾಳು ಬಿದ್ದ ಸರ್ಕಾರಿ ಶಾಲೆ, ನಿರ್ವಹಳೆ ಇಲ್ಲದೇ ಪಾಳು ಬಿದ್ದ ಬಸ್‌ ತಂಗುದಾಣ, ಡಾಂಬರ್‌ ಕಿತ್ತೋಗಿ ಕಂಕರ್‌ ಎದ್ದಿರುವ ರಸ್ತೆ ಇವು ತಾಲೂಕಿನ ಜೇರಬಂಡಿ ಗ್ರಾಮದಲ್ಲಿ ಕಂಡುಬರುವ ಸಮಸ್ಯೆ.

Advertisement

ಯರಮಸಾಳ ಗ್ರಾಮದಿಂದ ಚಿಕ್ಕಬೂದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಎಲ್ಲೆಂದರಲ್ಲಿ ಕಿತ್ತು ಹೋಗಿದೆ. ಯರಮಸಾಳ, ಜೇರಬಂಡಿ, ಚಿಕ್ಕಬೂದೂರು, ಸಲಿಕ್ಯಾಪುರ ಸೇರಿ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ವಾಹನ ಸವಾರರು ಅಧಿಕಾರಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಸಂಚರಿಸಬೇಕಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ವಹಣೆ ಮಾಡದ್ದರಿಂದ ದಿನೇದಿನೆ ರಸ್ತೆ ಹಾಳಾಗುತ್ತಿದೆ. ಸರಕಾರ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಆದರೆ ಈ ಗ್ರಾಮಗಳ ರಸ್ತೆ ಮಾತ್ರ ಸುಧಾರಣೆ ಆಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಪಾಳು ಬಿದ್ದ ತಂಗುದಾಣ: ಜೇರಬಂಡಿ ಗ್ರಾಮದಲ್ಲಿ ನಿರ್ವಹಣೆ ಇಲ್ಲದೇ ಪ್ರಯಾಣಿಕರ ತಂಗುದಾಣ ಹಾಳಾಗಿದೆ. ಹೀಗಾಗಿ ಗ್ರಾಮಸ್ಥರು ಬಸ್‌ಗೆ ರಸ್ತೆಯಲ್ಲೇ ಕಾಯುವಂತಾಗಿದೆ.

ಪಾಳು ಬಿದ್ದ ಶಾಲಾ ಕಟ್ಟಡ: ಜೇರಬಂಡಿ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ ಶಾಲಾ ಕಟ್ಟಡ ಪಾಳು ಬಿದ್ದಿದೆೆ. ಶಾಲಾ ಕಟ್ಟಡ ನಿರ್ಮಿಸಲು ಸರಕಾರ ಲಕ್ಷಾಂತರ ರೂ. ವ್ಯಯಿಸಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮಕ್ಕಳ ಕಲಿಕೆಗೆ ಕಟ್ಟಡ ಅನುಕೂಲ ಕಲ್ಪಿಸದೇ ಇರುವುದರಿಂದ ನಿರುಪಯುಕ್ತವಾಗಿದೆ. ಪಾಳು ಬಿದ್ದಿರುವ ಕಟ್ಟಡಗಳ ದುರಸ್ತಿ ಕೈಗೊಂಡು ಇಲ್ಲಿನ ಕಟ್ಟಡದಲ್ಲಿ ಅಂಗನವಾಡಿ ನಡೆಸಲು ಗ್ರಾಪಂ ಆಡಳಿತ ಮಂಡಳಿ ಮುಂದಾಗಬೇಕು. ರಸ್ತೆ, ತಂಗುದಾಣ, ಶಾಲಾ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು.ರಾಮಣ್ಣ ಎನ್‌.ಗಣೇಕಲ್ ಬಸವರಾಜ ನಾಯಕ, ಕೊತ್ತದೊಡ್ಡಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next