Advertisement

ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಜನರಿಗೆ ಆತಂಕ

06:56 PM Jun 03, 2020 | Naveen |

ದೇವದುರ್ಗ: ಅನಾರೋಗ್ಯದಿಂದ ಮೃತಪಟ್ಟ ತಾಲೂಕಿನ ಕೊತ್ತಿಗುಡ್ಡ ಗ್ರಾಮದ 56 ವರ್ಷದ ವ್ಯಕ್ತಿ ವರದಿ ಪಾಸಿಟಿವ್‌ ಬಂದಿದ್ದು, ಆತನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಜನರಿಗೆ ಭಯ ಎದುರಾಗಿದೆ.

Advertisement

ಮಹಾರಾಷ್ಟ್ರದಿಂದ ಬಂದಿದ್ದ ಈ ವ್ಯಕ್ತಿಯನ್ನು ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ರಾಯಚೂರಿನ ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಮೊದಲು ಆತನ ವರದಿ ನೆಗೆಟಿವ್‌ ಬಂದಿತ್ತು. ಆದರೆ ಮೃತಪಟ್ಟ ಹಿನ್ನೆಲೆಯಲ್ಲಿ ಮೊತ್ತೂಮ್ಮೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ರಾತ್ರಿ ಪಾಸಿಟಿವ್‌ ವರದಿ ಬಂದಿದೆ. ಕೋತಿಗುಡ್ಡ ಗ್ರಾಮದಲ್ಲಿ ಮೃತ ವ್ಯಕ್ತಿ ಅಂತ್ಯಕ್ರಿಯೆ ಆರೋಗ್ಯ ಇಲಾಖೆ ನಿಯಮದ ಪ್ರಕಾರ ನಡೆದಿಲ್ಲ ಎನ್ನಲಾಗಿದೆ. ಶುಕ್ರವಾರ ಶವದ ಮೆರವಣಿಗೆ ಮಾಡಲಾಗಿದ್ದು, ಇದರಲ್ಲಿ 150ಕ್ಕೂ ಹೆಚ್ಚು ಜನರು ಸೇರಿದಂತೆ ಪರಸ್ಥಳದ ಜನರು ಭಾಗವಹಿಸಿದ್ದರು ಎನ್ನಲಾಗಿದೆ.

ಹೀಗಾಗಿ ಅಕ್ಕಪಕ್ಕದ ಹಳ್ಳಿಗೆ ಹಬ್ಬುವ ಭೀತಿ ಎದುರಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಕೈ ಪಂಪ್‌ ಬಂದ್‌ ಮಾಡಿಸಲಾಗಿದೆ. ಗ್ರಾಮದಲ್ಲಿ 300 ಮನೆಗಳಿದ್ದು, ಒಂದು ಸಾವಿರ ಜನಸಂಖ್ಯೆ ಇದೆ. ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಗ್ರಾಮದಲ್ಲಿನ 7 ಕಿರಾಣಿ ಅಂಗಡಿಗಳು, ನಾಲ್ಕು ಹೋಟೆಲ್‌ಗ‌ಳನ್ನು ಬಂದ್‌ ಮಾಡಲಾಗಿದೆ. ಗ್ರಾಪಂ ಅಧಿಕಾರಿಗಳ ಜತೆ ಮನೆ ಮನೆಗೆ ತೆರಳಿ ಹೋಂ ಕ್ವಾರಂಟೆೃನ್‌ನಲ್ಲಿರುವಂತೆ ಜನರಿಗೆ ಸೂಚಿಸಿದ್ದೇವೆ ಎಂದು ಗ್ರಾಪಂ ಸದಸ್ಯ ಮಾನಸಯ್ಯ ತಿಳಿಸಿದ್ದಾರೆ.

ಕೋವಿಡ್ ವೈರಸ್‌ ಭೀತಿಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಧೈರ್ಯ ಹೇಳಲಿಲ್ಲ. ಪಿಡಿಒ ಹೊರತುಪಡಿಸಿ ಯಾರೂ ಗ್ರಾಮಕ್ಕೆ ಬಂದಿಲ್ಲ. ಗ್ರಾಮದ ನೂರಾರು ಜನರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರೂ ಸೀಲ್‌ಡೌನ್‌ ಮಾಡದ ಕಾರಣ ಭಯದ ವಾತಾವರಣ ಆವರಿಸಿದೆ ಎಂದು ತಿಳಿದು ಬಂದಿದೆ.

ಕೋತಿಗುಡ್ಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೆೃರ್ಯ ತುಂಬಿ, ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. ಅಲ್ಲಿನ ಕೈ ಪಂಪ್‌ ಸೀಲ್‌ ಡೌನ್‌ ಮಾಡಲಾಗಿದೆ. 7 ಕಿರಾಣಿ ಅಂಗಡಿ, 4 ಹೋಟೆಲ್‌ ಮುಚ್ಚಿಸಲಾಗಿದೆ. ಗ್ರಾಮಸ್ಥರ ಮೇಲೆ ನಿಗಾ ವಹಿಸಲಾಗಿದೆ. ಸುನೀಲಕುಮಾರ,
ಪಿಡಿಒ ಕೆ. ಇರಬಗೇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next