Advertisement
ತಾಲೂಕಿನ ಜಾಲಹಳ್ಳಿ ಪಟ್ಟಣದ ವಾಲ್ಮೀಕಿ, ಪಟ್ಟಣದ ಬಂಜಾರ ಸಮುದಾಯ ಭವನಗಳು ಇದಕ್ಕೆ ಸಾಕ್ಷಿಯಾಗಿವೆ. 2011-12ನೇ ಸಾಲಿನ ಎಸ್‌ಟಿಪಿ ಗಿರಿಜನ ಕಲ್ಯಾಣ ಉಪಯೋಜನೆಯಡಿ 1ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನಿರ್ವಹಣೆ ಹೊಣೆ ವಹಿಸಲಾಗಿತ್ತು. 8 ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಜಾಲಹಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದ ಜನರೇ ಹೆಚ್ಚಾಗಿದ್ದಾರೆ. ಮಾಜಿ ಸಂಸದ ಬಿ.ವಿ.ನಾಯಕ, ಸ್ಥಳೀಯ ಶಾಸಕ ಕೆ.ಶಿವನಗೌಡ ನಾಯಕ ಕೂಡ ಅದೇಶ ಸಮುದಾಯಕ್ಕೆ ಸೇರಿದ್ದಾರೆ. ಆದರೆ ಸಮುದಾಯ ಭವನ ಪೂರ್ಣಕ್ಕೆ ನಿರ್ಲಕ್ಷ್ಯ ವಹಿಸಿರುವುದು ಸಮುದಾಯದ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸಮುದಾಯ ಭವನ ಪೂರ್ಣವಾಗದ್ದಕ್ಕೆ ಜಾಲಹಳ್ಳಿ ಪಟ್ಟಣದ ನಾಯಕ ಸಮುದಾಯದ ಜನರು ಸಭೆ, ಸಮಾರಂಭಗಳಿಗೆ ಖಾಸಗಿ ಕಲ್ಯಾಣ ಮಂಟಪಗಳ ಮೊರೆ ಹೋಗುವಂತಾಗಿದೆ. ಪಟ್ಟಣದ ಹೊರವಲಯದ ಯಲ್ಲಾಲಿಂಗ ಕಾಲೋನಿ ಹೆಮ್ಮಡಗಿ ಮಠದ ಪಕ್ಕದಲ್ಲಿ 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಂಜಾರ ಸಮುದಾಯ ಭವನ ಕಾಮಗಾರಿ ಆರೇಳು ತಿಂಗಳಿನಿಂದ ಸ್ಥಗಿತಗೊಂಡಿದೆ. ಕಾಮಗಾರಿ ಆರಂಭಿಸಲು ಸಮುದಾಯದ ಮುಖಂಡರು ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೆಲ ಸಮಸ್ಯೆ ಕಾರಣದಿಂದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಅಪೂರ್ಣ ಸ್ಥಿತಿಯಲ್ಲಿರುವ ವಾಲ್ಮೀಕಿ, ಬಂಜಾರ ಸಮುದಾಯ ಭವನ ಕಾಮಗಾರಿಯನ್ನು ಪುನಾರಂಭಿಸಿ ಕೂಡಲೇ ಪೂರ್ಣಗೊಳಿಸಬೇಕೆಂದು ನರಸಣ್ಣ ನಾಯಕ ಜಾಲಹಳ್ಳಿ ಆಗ್ರಹಿಸಿದ್ದಾರೆ.
••ಮಾನಸಯ್ಯ,
ಮಾನಸಯ್ಯದೊಡ್ಡಿ ವಾಲ್ಮೀಕಿ ಸಮಾಜ ಉಪಾಧ್ಯಕ್ಷ