ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಣ್ಣಗುಡ್ಡ ಮತ್ತು ದೇವಾಡಿಗರ ಸಂಘ ದುಬಾೖ ಸಹಯೋಗದಲ್ಲಿ 7 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಕರ್ಣಾಟಕ ಬ್ಯಾಂಕ್ ಸಾಮಾಜಿಕ ಜವಾಬ್ದಾರಿ ಖಾತೆಯ ನೆರವಿನಲ್ಲಿ ನಿರ್ಮಿಸಲ್ಪಟ್ಟ ನವೀಕೃತ ಸಭಾಭವನದ ಉದ್ಘಾಟನೆ ಮಣ್ಣಗುಡ್ಡೆ ದೇವಾಡಿಗ ಸಮಾಜಭವನದಲ್ಲಿ ರವಿವಾರ ನಡೆಯಿತು.
ಡಾ| ದೇವರಾಜ್ ಕೆ. ಅಧ್ಯಕ್ಷತೆ ವಹಿಸಿದ್ದರು. ಮಂಗಳಾ ವಿದ್ಯಾಕೇಂದ್ರದ ನವೀಕೃತ ಕಟ್ಟಡವನ್ನು ಕರ್ಣಾಟಕ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್ ಎಂ. ಉದ್ಘಾಟಿಸಿದರು.
ಸಮ್ಮಾನ: ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾರ್ಕಳ ಬೈಲೂರಿನ ಆಕೃತಿ ದೇವಾಡಿಗ ಅವರಿಗೆ ಹರೀಶ್ ಶೇರಿಗಾರ್ ಅವರು ಲ್ಯಾಪ್‌ಟಾಪ್ ನೀಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಅನುಷಾ ಎಸ್. ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು.
ಉಡುಪಿ ಜಿ.ಪಂ. ಯೋಜನಾ ನಿರ್ದೇಶಕಿ ನಯನಾ ಲಚೇಂದ್ರ, ಅಕೆ¾ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ದುಬಾೖಯ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್, ಹಿರಿಯ ಮಾರ್ಗದರ್ಶಕ ಡಾ| ಕೆ.ವಿ. ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ಮೊಲಿ, ಪಬ್ಲಿಕ್ ಪ್ರಾಸಿಕ್ಯೂಟರ್ ನಾರಾಯಣ ಶೇರಿಗಾರ್, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ಎನ್. ದೇವಾಡಿಗ, ಸಮಾಜದ ಗಣ್ಯರಾದ ದಿನೇಶ್ ದೇವಾಡಿಗ ಕದ್ರಿ, ಕೆ.ಜೆ. ದೇವಾಡಿಗ, ಅಶೋಕ್ ಮೊಲಿ, ಡಾ| ಸುಂದರ ಮೊಲಿ ಮತ್ತು ಮಮತಾ ಪದ್ಮನಾಭ ದೇವಾಡಿಗ, ಉದಯ ಕುಮಾರ್ ಕಣ್ವತೀರ್ಥ ಉಪಸ್ಥಿತರಿದ್ದರು.
ಸಂಘಟನ ಕಾರ್ಯದರ್ಶಿ ಭಾಸ್ಕರ್ ಇಡ್ಯಾ ಅವರು ವಂದಿಸಿದರು. ವಿಜೇಶ್ ಮತ್ತು ನೇಹಾ ಅವರು ಕಾರ್ಯಕ್ರಮ ನಿರ್ವಹಿಸಿದರು.