Advertisement
ಪಾರಿಜಾತ ಎಂದರೇ ಒಂದು ಬಗೆಯ ಸುಗಂಧ ಪುಷ್ಪ. ಇದನ್ನು ಪುರಾಣದಲ್ಲಿ ದೇವ ಪುಷ್ಪಾ ಎಂದು ಕರೆಯುತ್ತಿದ್ದರು. ಇದರಲ್ಲಿ ನಾವು ಎರಡು ರೀತಿಯ ಹೂವನ್ನು ಕಾಣಬಹುದು. ಆರು ದಳ ಬಿಡಿ ಬಿಡಿ ಇದ್ದು ಹಿಂದಕ್ಕೆ ಮುದುಡಿರುವುದು ಒಂದಾದರೆ, ಇನ್ನೊಂದು ದಳ ಅಗಲವಿದ್ದು ಒಂದಕ್ಕೊಂದು ಸೇರಿದಂತೆ ಇರುತ್ತದೆ ಹಾಗೂ ಎಲೆಗಳಲ್ಲಿನ ವ್ಯತ್ಯಾಸವನ್ನೂ ನೋಡಬಹುದು. ಆದರೆ ಎರಡು ಬಗೆಯ ಹೂವಿನಲೂ ತೊಟ್ಟು ಕೇಸರಿ ಬಣ್ಣದಲ್ಲೇ ಇರುತ್ತದೆ.
Related Articles
Advertisement
ಸಮುದ್ರ ಮಂಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ಅನಂತರ ಜನಿಸಿದ್ದು ಪಾರಿಜಾತ. ಕ್ಷೀರ ಸಮುದ್ರದಿಂದ ಹುಟ್ಟಿದ ಐದು ಕಲ್ಪ ವೃಕ್ಷಗಳಲ್ಲಿ ಇದು ಒಂದು. ಕೃಷ್ಣಾವತಾರ ಕಾಲದಲ್ಲಿ ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಒಂದು ಕಥೆ ಆದರೆ ಇನ್ನೊಂದು ಕಥೆಯ ಪ್ರಕಾರ ಒಮ್ಮೆ ರುಕ್ಮಿಣಿಗೆ ಪಾರಿಜಾತದ ಹೂವು ಮುಡಿಯಬೇಕೆಂಬ ಆಸೆಯಾಗಿ, ಕೃಷ್ಣನ ಒಲಿಸಿ, ಪಾರಿಜಾತ ತಂದುಕೊಡಲು ದೇವಲೋಕಕ್ಕೆ ಕಳುಹಿಸುತ್ತಾಳೆ. ಇಂದ್ರನ ಜೊತೆ ಜಗಳ ಮಾಡಿಕೊಂಡು ಪಾರಿಜಾತ ಹೂವು ತಂದು ರುಕ್ಮಿಣಿಗೆ ಕೊಡುತ್ತಾನೆ. ಆಗ ಇಂದ್ರ ಹೂವಿಗೆ ಸೂರ್ಯಾಸ್ತದ ಅನಂತರ ಅರಳಲಿ, ಬೆಳಗಿನ ಜಾವ ನೆಲಕ್ಕೆ ಬೀಳಲಿ ಎಂಬ ಶಾಪ ಹಾಕುತ್ತಾನೆ. ಇದರಿಂದ ಪಾರಿಜಾತ ಮರಕ್ಕೆ ಸೊರಗಿದ ಮರ ಎಂದು ಕರೆಯುತ್ತಾರೆ.
ಈ ಎರಡೂ ಕಥೆಗಳನ್ನು ನೋಡಿದಾಗ ಪಾರಿಜಾತ ಈ ಹೂವು ಶಾಪಗ್ರಸ್ತ ಎಂದಾದರೂ ಪಾರಿಜಾತದ ಸೌಂದರ್ಯದಷ್ಟೇ ಅದರ ಸುಂಗಂಧವು ಎಲ್ಲರನ್ನೂ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ.
ನಿಕ್ಟಾಂತಸ್ ಆರ್ಬೋ-ಟ್ರಿಸ್ಟಿಸ್ ಎಂಬದು ಪಾರಿಜಾತದ ವೈಜ್ಞಾನಿಕ ಹೆಸರು. ಇದು ಕೇವಲ ಪರಿಮಳಕ್ಕಲ್ಲ ಇದರಲ್ಲಿ ಅನೇಕ ರೀತಿಯ ಔಷಧಿ ಗುಣಗಳು ಇದೆ ಎಂದು ಸಂಶೋಧನೆಗಳು ಹೇಳುತ್ತವೆ. ಅಸ್ತಮಾ, ಒಣ ಕೆಮ್ಮು, ಶೀತ, ಮಂಡಿ ನೋವು, ಅಜೀರ್ಣ ಇನ್ನೂ ಅನೇಕ ಔಷಧಿ ಗುಣಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ.
ಪ್ರಜ್ಞಾ ಹೆಗಡೆ
ಎಂ.ಎಂ. ಕಾಲೇಜು, ಶಿರಸಿ