Advertisement
ಬಿಡದಿಯ ರೈತ ಸಮುದಾಯ ಭವನದಲ್ಲಿ ಭಾನುವಾರ ಬೆಳಗ್ಗೆ ಸರ್ವ ಸದಸ್ಯರ ಸಭೆ ಉದ್ಘಾಟನೆಯಾಗುತ್ತಲೇ ಕೆಲವು ಸದಸ್ಯರು ಸಂಘದ ವಿರುದ್ಧ ಗಂಭೀರ ಆರೋಪಗಳಿವೆ. ಸದರಿ ಆರೋಪಗಳ ತನಿಖೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆಜ್ಞೆ ಮಾಡಿದ್ದಾರೆ. ತನಿಖೆ ಕಳೆದ ಜುಲೈನಲ್ಲಿ ಆರಂಭವಾಗಿದೆ, 90 ದಿನಗಳಲ್ಲಿ ವರದಿ ಕೈಸೇರಲಿದೆ. ಅಲ್ಲಿಯವರೆಗೂ ಸರ್ವ ಸದಸ್ಯರ ಸಭೆ ಬೇಡ ಎಂದು ಒತ್ತಾಯಿಸಿದರು.
Related Articles
Advertisement
ಆರೋಪಗಳ ತನಿಖೆಗೆ ಆದೇಶ: ಸಂಘದ ಕಟ್ಟಡವೊಂದಕ್ಕೆ 20 ಸಾವಿರ ಬಾಡಿಗೆ ಬದಲಿಗೆ 15 ಸಾವಿರಕ್ಕೆ ಇಳಿಸಿರುವುದು, ಸಂಘದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೇತ್ರ ಶ್ರೇಣಿ ಮತ್ತು ವೃಂದ ಬಲವನ್ನು ಮಂಜೂರು ಮಾಡಿರುವ ವಿಷಯದಲ್ಲಿಯು ನಿಯಮಗಳ ಉಲ್ಲಂಘನೆಯಾಗಿದೆ. 2013-14ರಿಂದ 2017-18ನೇ ಸಾಲಿನ ಶಾಸನ ಬದ್ಧ ಲೆಕ್ಕಪರಿಶೋಧಕರ ವರದಿಗಳಲ್ಲಿ ಕಂಡು ಬಂದಿರುವ ಗಂಭೀರವಾದ ನ್ಯೂನತೆಗಳನ್ನು ಸರಿಪಡಿಸದಿರುವುದು, 2015-16ನೆ ಸಾಲಿಗೆ ಹೋಲಿಸಿದರೆ 2016-17, 2017-18ನೇ ಸಾಲಿನಲ್ಲಿ ನಿವ್ವಳ ಲಾಭದಲ್ಲಿ ಕಡಿಮೆಯಾಗಿರುವ ವಿಚಾರ ಹೀಗೆ 10ರಿಂದ 12 ಆರೋಪಗಳ ತನಿಖೆಗೆ ಆದೇಶವಾಗಿದೆ. ಹೀಗಾಗಿ ಸಭೆ ನಡೆಸುವುದು ಬೇಡ ಎಂದು ಸದಸ್ಯರಾದ ಬಸವರಾಜು, ರೇಣುಕಪ್ಪ, ಪುಟ್ಟರೇವಯ್ಯ, ನಂಜುಂಡಿ ಅವರು ಏರಿದ ದನಿಯಲ್ಲೇ ಪಟ್ಟು ಹಿಡಿದರು.
ತನಿಖೆಗೆ ಯಾರು ತಡೆದಿಲ್ಲ: ಸಂಘದ ಅಧ್ಯಕ್ಷ ಬೈರೇಗೌಡ ಮಾತನಾಡಿ, ತನಿಖೆಯನ್ನು ಯಾರು ತಡೆದಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ಸರ್ವ ಸದಸ್ಯರ ಸಭೆಯನ್ನು ನಡೆಯಲು ಬಿಡಿ ಎಂದು ಮಾಡಿದ ಮನವಿಗೆ ಸದಸ್ಯರು, ತಮ್ಮ ಪಟ್ಟು ಸಡಿಸಲಿಲ್ಲ. ಪ್ರಭಾರ ಸಿಇಒ ಸೀನಪ್ಪ ಮತ್ತು ಕೆಲವು ಪದಾಧಿಕಾರಿಗಳು ಮತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದಸ್ಯರ ಧರಣಿ: ಪದಾಧಿಕಾರಿಗಳ ಸಮಜಾಯಿಷಿಗಳಿಗೆ ಸಮಾಧಾನಗೊಳ್ಳದ ಸದಸ್ಯರಾದ ಬಸವರಾಜು, ರೇಣುಕಯ್ಯ ಮತ್ತಿತರರು ವೇದಿಕೆಯ ಮೇಲೆ ಧರಣಿ ಕುಳಿತು ಪ್ರತಿಭಟಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಉಮಾ, ನಿರ್ದೇಶಕರಾದ ಎಂ.ಚಂದ್ರಶೇಖರ್, ನಿರ್ದೇಶಕರಾದ ಜಿ.ಡಿ.ಸತೀಶ್, ಆರ್.ಮಲ್ಲೇಶ್, ಬಿ.ಪಿ.ರಾಮು, ಸಿ.ಎನ್ .ನಾಗರಾಜಯ್ಯ, ಶಿವಯ್ಯ ಮುಂತಾದವರು ಉಪಸ್ಥಿತರಿದ್ದರು.