Advertisement

ಮುಗದದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸಂಕಲ್ಪ: ಹೊರಟ್ಟಿ

07:22 AM May 23, 2020 | Suhan S |

ಹುಬ್ಬಳ್ಳಿ: ಮುಗದ ಗ್ರಾಮದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲು ಸಂಕಲ್ಪ ಮಾಡಿದ್ದೇನೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ಧಾರವಾಡ ತಾಲೂಕು ಮುಗದ ಗ್ರಾಮದ ಹನಮಂತಪ್ಪ ಮಾವಳೇರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರೌಢಶಾಲೆಗಾಗಿ ಅಂದು ಭೂದಾನ ಮಾಡಿದ ಹನಮಂತಪ್ಪ ಮಾವಳೇರ ಅವರ ಶೈಕ್ಷಣಿಕ ಎಲ್ಲ ಆಶೋತ್ತರಗಳನ್ನು ಈಡೇರಿಸಲು ಪಣ ತೊಡುತ್ತೇನೆ. ಮುಧೋಳ ತಾಲೂಕು ಯಡಳ್ಳಿ ಗ್ರಾಮದಲ್ಲಿ ನಮ್ಮ ತಂದೆ ಶಿವಲಿಂಗಪ್ಪ ಎಸ್‌. ಹೊರಟ್ಟಿ ಹೆಸರಿನಲ್ಲಿ 8 ಎಕರೆ ಜಮೀನನ್ನು ಸರಕಾರಕ್ಕೆ ದಾನ ಮಾಡಿ 20 ಕೋಟಿ ರೂ. ಖರ್ಚು ಮಾಡಿ ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡಿದ್ದೇನೆ. ಇದನ್ನು ಮೀರಿ ಗ್ರಾಮದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು.

ಶಾಸಕ ಸಿ.ಎಂ. ನಿಂಬಣ್ಣವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಕ್ಲಬ್‌ ಅಧ್ಯಕ್ಷ ಡಾ| ಕವನ ದೇಶಪಾಂಡೆ, ಕಲ್ಲಪ್ಪ ಹಟ್ಟಿ, ಗ್ರಾಪಂ ಅಧ್ಯಕ್ಷ ಬಸವರಾಜ ಕಲಕೇರಿ, ರುದ್ರಪ್ಪ ಕೊಂಪಣ್ಣವರ, ಕಲ್ಲಪ್ಪ ಹಟ್ಟಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next