Advertisement

ಹದಗೆಟ್ಟ ರಸ್ತೆಗೆ ಜನ ಸುಸ್ತೋ ಸುಸ್ತು..

08:53 AM Jul 29, 2019 | Suhan S |

ರೋಣ: ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆಗೆ ಕೇಂದ್ರ-ರಾಜ್ಯ ಸರಕಾರಗಳು ಸಾಕಷ್ಟು ಹಣ ಬಿಡುಗಡೆ ಮಾಡುತ್ತವೆ. ಆದರೆ ಅನುದಾನ ಉಪಯೋಗ ಸರಿಯಾಗಿ ಮತ್ತು ಅವಶ್ಯವಿರುವ ಕಡೆಗಳಲ್ಲಿ ಮಾತ್ರ ಬಳಕೆಯಾಗದಿರುವುದಕ್ಕೆ ತಾಲೂಕಿನ ಕೋತಬಾಳಯಿಂದ ಮಾಡಲಗೇರಿಗೆ ಸಂಪರ್ಕಿಸುವ ರಸ್ತೆಯೇ ಸಾಕ್ಷಿ.

Advertisement

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾದರೆ ವಾಹನ ಸವಾರರು ಹರಸಾಹಸ ಪಡಬೇಕಿದೆ.

ರಸ್ತೆ ಅಭಿವೃದ್ಧಿ ಯಾವಾಗ?: ತಾಲೂಕು ಕೇಂದ್ರ ಸ್ಥಾನದಿಂದ ಬೆರಳೆಣಿಕೆಯಷ್ಟು ಕಿ.ಮಿ.ದೂರದಲ್ಲಿರುವ ಕೋತಬಾಳ ಗ್ರಾಮದಿಂದ ಮಾಡಲಗೇರಿ ಗ್ರಾಮಕ್ಕೆ ಹೋಗುವ ಈ ರಸ್ತೆ ಕೋತಬಾಳ ಗ್ರಾಮದಿಂದ ಸಂಪೂರ್ಣ ಕಚ್ಚಾ ರಸ್ತೆಯಿಂದ ಕೂಡಿದೆ. ಇದು ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ದುರಸ್ತಿ ಕಂಡಿಲ್ಲ. ರೈತರು ಹೊಲಗಳಿಗೆ ತೆರಳಬೇಕಾದರೆ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಇಂತಹ ರಸ್ತೆ ದುರಸ್ತಿ ಕಾಣದಿರುವುದಕ್ಕೆ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಳೆಯಾದರೆ ಸಂಚಾರವೇ ಬಂದ್‌: ಮಳೆ ಬಂದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡುವವರ ಪಾಡು ಹೇಳತಿರದು. ಇದು ಕಚ್ಚಾ ರಸ್ತೆಯಾಗಿರುವುದರಿಂದ ರಸ್ತೆಯಲ್ಲಿರುವ ತಗ್ಗುಗಳು ನೀರಿನಿಂದ ಆವೃತವಾಗುತ್ತವೆ. ಇದರಿಂದ ರಸ್ತೆ ಸಂಪೂರ್ಣ ಕೊಚ್ಚೆಯಾಗಿ ಪರಿಣಮಿಸುವುದು. ವಾಹನ ಸವಾರರು ಸ್ವಲ್ಪ ಆಯ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ.

ಸಮಯ ಮತ್ತು ಹಣ ಉಳಿತಾಯವಾಗುವ ಕಾರಣಕ್ಕೆ ರೋಣದಿಂದ ಕೋತಬಾಳ ಮಾರ್ಗವಾಗಿ ಮಾಡಲಗೇರಿಗೆ ಪ್ರಯಾಣಿಸಬಹುದು. ಆದರೆ ರಸ್ತೆಯಲ್ಲಿ ಬಿದ್ದಿರುವ ತಗ್ಗು-ದಿನ್ನೆಗಳಿಗೆ ಮಣ್ಣು ಹಾಕಿ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿ ಮಾಡಿದರೆ ಈ ರಸ್ತೆ ಸಂಚಾರಕ್ಕೆ ಅನುಕೂಲವಾಗುತ್ತದೆ.•ಭರಮಗೌಡ ರಾಯನಗೌಡ್ರ, ಮಾಡಲಗೇರಿ ಗ್ರಾಮಸ್ಥ

Advertisement

ಕೋತಬಾಳದಿಂದ ಮಾಡಲಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ವಾಸ್ತವ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವಿನೊಂದಿಗೆ ಉತ್ತಮ ರಸ್ತೆ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.•ಕಳಕಪ್ಪ ಬಂಡಿ, ಶಾಸಕ, ರೋಣ

2.5 ಕಿ.ಮೀ ದೂರ ಮಾತ್ರ: ಕೋತಬಾಳ ಗ್ರಾಮದಿಂದ ಮಾಡಲಗೇರಿಗೆ ಪ್ರಯಾಣಿಸಬೇಕಾದರೆ ಸುಮಾರು 2.5 ಕಿ.ಮೀ.ಗೂ ಹೆಚ್ಚು ರಸ್ತೆ ಸಂಪೂರ್ಣವಾಗಿ ಕಚ್ಚಾ ರಸ್ತೆಯಾಗಿದ್ದು, ಹದಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವುದು ಸುಲಭವಲ್ಲ. ದ್ವಿಚಕ್ರ ವಾಹನ ಸವಾರರಂತೂ ರಸ್ತೆಯಲ್ಲಿ ಬಿದ್ದಿರುವ ತಗ್ಗು-ದಿನ್ನೆ ತಪ್ಪಿಸಿ ವಾಹನ ಓಡಿಸಬೇಕಾದರೆ ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಅದಕ್ಕಾಗಿ ರಸ್ತೆ ದುರಸ್ತಿ ಪಡಿಸುವುದು ಅವಶ್ಯ ಎನ್ನುತ್ತಾರೆ ಕೋತಬಾಳ ಗ್ರಾಮಸ್ಥ ಬಸವರಾಜ ದಿಂಡೂರ. ಮಾಡಲಗೇರಿ ಗ್ರಾಮಸ್ಥರು ಕೋತಬಾಳ ಹಾಗೂ ರೋಣಕ್ಕೆ ಬರಬೇಕಾದರೆ ಹಿರೇಹಾಳ ಮಾರ್ಗವಾಗಿ ಸುತ್ತು ಹಾಕಿ ಬರಬೇಕಾಗುವುದು. ಅದಕ್ಕಾಗಿ ಗ್ರಾಮಸ್ಥರು ನಿತ್ಯ ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಅವರು ಸಮೀಪದ ದಾರಿ ಆಯ್ಕೆ ಮಾಡಿಕೊಂಡು ಕೋತಬಾಳ ಮಾರ್ಗವಾಗಿ ಬರುತ್ತಾರೆ. ಆದರೆ ಇಲ್ಲಿ ರಸ್ತೆ ಸರಿಯಾಗಿಲ್ಲ. ಅದಲ್ಲಿರಯೇ ಬಂದು ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ. ರೋಣ ಪಟ್ಟಣದಿಂದ ಕೋತಬಾಳ ಮಾರ್ಗವಾಗಿ ಮಾಡಲಗೇರಿ ಗ್ರಾಮಕ್ಕೆ ಬಂದರೆ ಕೋತಬಾಳ ಮಾರ್ಗವಾಗಿ ಪ್ರಯಾಣಿಸುತ್ತಾರೆ. ಇದರಿಂದ ಸಮಯ ಉಳಿಯುವುದಲ್ಲದೇ ಹಣ ಕೂಡ ಉಳಿತಾಯವಾಗುತ್ತದೆ.

 

•ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next