Advertisement

ಹದಗೆಟ್ಟ ರಸ್ತೆ, ಒಳಚರಂಡಿ ದುರಸ್ತಿಗೆ ಆಗ್ರಹ: ರೈತ ಸಂಘದಿಂದ ರಸ್ತೆತಡೆ

11:02 AM Apr 24, 2019 | Suhan S |

ಕೋಲಾರ: ನಗರಾದ್ಯಂತ ಹದಗೆಟ್ಟಿರುವ ರಸ್ತೆ ಹಾಗೂ ಒಳಚರಂಡಿ ದುರಸ್ತಿ ಮಾಡಬೇಕು ಎಂದು ರೈತ ಸಂಘದಿಂದ ಇಟಿಸಿಎಂ ಸರ್ಕಲ್ನಲ್ಲಿ ರಸ್ತೆ ತಡೆ ಮಾಡಿ ನಗರಸಭೆ ಎಂಜಿನಿಯರ್‌ಗೆ ಮನವಿ ನೀಡಲಾಯಿತು.

Advertisement

ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇತ್ತೀಚೆಗೆ ಸುರಿದ ಮಳೆಗೆ ನಗರದ ರಸ್ತೆಗಳು ಕೆರೆಕುಂಟೆಗಳಾಗಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ದುಸ್ತರವಾಗಿದೆ. ಒತ್ತುವರಿ ಆಗಿರುವ ರಾಜಕಾಲುವೆ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸದೇ, ಮಳೆ ಬಂದಾಗ ಅಧಿಕಾರಿಗಳಿಗೆ ಜ್ಞಾಪನ ಬರುತ್ತಿದೆ ಎಂದು ದೂರಿದರು.

ಸರ್ಕಾರ ನಗರದ ರಸ್ತೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡುತ್ತಿದ್ದರೂ ಟೆಂಡರ್‌ದಾರರು ಹಾಗೂ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಕಳಪೆ ಗುಣಮಟ್ಟದ ಕಾಮಗಾರಿಗಳಾಗುತ್ತಿವೆ. ಜೊತೆಗೆ ಅಮೃತ ಸಿಟಿ ಯೋಜನೆಯಲ್ಲಿ ನಗರವನ್ನು ಸಿಂಗಪೂರ್‌ ಮಾಡುತ್ತೇನೆಂದು ಎಲ್ಲಾದಂರಲ್ಲಿ ರಸ್ತೆಗಳನ್ನು ಅಗೆದು ಸಂಪೂರ್ಣವಾಗಿ ಹದಗೆಡಸುತ್ತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳ ಮತ್ತು ಟೆಂಡರ್‌ದಾರರ ಬೇಜಾವಾಬ್ದಾರಿಯಿಂದ ನಗರದ ಕ್ಲಾಕ್‌ ಟವರ್‌, ಇ.ಟಿ.ಸಿ.ಎಂ. ಸರ್ಕಲ್ ಮತ್ತಿತರ ಪ್ರಮುಖ ರಸ್ತೆಗಳೆ ಹಾಳಾಗುವಂತೆ ಇದರಿಂದ ಸಾರ್ವಜನರಿಗೆ ತೊಂದರೆಯ ಜೊತೆಗೆ ಜಗಳಗಳಾಡಿ ಪೊಲೀಸ್‌ ಠಾಣೆ ಮೆಟ್ಟಲೇರುವ ಮಟ್ಟಕ್ಕೆ ಅಧಿಕಾರಿಗಳು ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷರ ಮರಗಲ್ ಶ್ರೀನಿವಾಸ್‌ ಮಾತನಾಡಿ, ಒಂದು ವಾರದ ಒಳಗೆ ನಗರದ ರಸ್ತೆಗಳು ಮತ್ತು ಒಳಚರಂಡಿಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಕೊಳಚೆ ನೀರನ್ನು ನಗರಸಭೆ ಮತ್ತು ಒಳಚರಂಡಿ ಕಚೇರಿಯ ಒಳಗೆ ಸುರಿಯುವ ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿದ ನಗರಸಭೆ ಎಂಜಿನಿಯರ್‌ ಪೂಜಾರಪ್ಪ ಮತ್ತು ಸುಧಾಕರ್‌ ಮಾತನಾಡಿ, ಚುನಾವಣೆ ಒತ್ತಡದಿಂದ ರಸ್ತೆಗಳ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಈಗಾಗಲೇ ಹದಗೆಟ್ಟಿರುವ ರಸ್ತೆ ಮತ್ತು ಹಾಳಾಗಿರುವ ಒಳಚರಂಡಿ ಬಗ್ಗೆ ಪರಿಶೀಲನೆ ಮಾಡಿ ಕೂಡಲೇ ಸರಿಪಡಿಸುವ ಭರವಸೆ ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷೆ ಎ.ನಳಿನಿ, ಮಂಗಸಂದ್ರ ನಾಗೇಶ್‌, ವೆಂಕಟೇಶಪ್ಪ, ಅಶ್ವತ್ಥಪ್ಪ, ಮಂಗಸಂದ್ರ ತಿಮ್ಮಣ್ಣ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ತೆರ್ನಹಳ್ಳಿ ಆಂಜನಪ್ಪ, ಮಾಸ್ತಿ ವೆಂಕಟೇಶ್‌, ಕೃಷ್ಣೇಗೌಡ, ಪುರುಷೋತ್ತಮ್‌, ಸಾಗರ್‌, ಸುಪ್ರೀಮ್‌ ಚಲ, ಉದಯ್‌, ಉಮಾ, ಪವಿತ್ರ, ಕಾವ್ಯಾಂಜಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next