Advertisement

ಕೆಸರುಗದ್ದೆಯಂತಾಗಿರುವ ರಸ್ತೆಗುಂಡಿ ಮುಚ್ಚಿ

02:53 PM Sep 28, 2021 | Team Udayavani |

ದೇವನಹಳ್ಳಿ: ಪಟ್ಟಣದ ಹೊಸಬಸ್‌ ನಿಲ್ದಾಣದಲ್ಲಿ ಮಳೆನೀರು ಹರಿಯದೆ ನಿಂತಲ್ಲೇ ನಿಂತು ಕೆಸರುಗದ್ದೆಯಾಗಿದ್ದು ಪ್ರಯಾಣಿಕರು ಬಸ್‌ ಹತ್ತಲು ಪರದಾಡುವ ಸ್ಥಿತಿ ಬಂದೊದಗಿದೆ.

Advertisement

ಪಟ್ಟಣದ ಹೊಸಬಸ್‌ ನಿಲ್ದಾಣದ ಬೆಂಗಳೂರು ಕಡೆ ಹೋಗುವ ಸ್ಥಳದಲ್ಲಿ ಮಳೆ ನೀರು ನಿಂತುಕೊಂಡಿರುವುದರಿಂದ ಪ್ರಯಾಣಿಕರು ಅದರ ಪಕ್ಕದಲ್ಲಿಯೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಬಸ್‌ ನಿಲುಗಡೆ ಮಾಡುವ ಬಹುತೇಕ ಕಡೆ ಮಳೆ ನೀರು ನಿಂತಲ್ಲೇ ನಿಂತಿದೆ. ರಸ್ತೆ ಪಕ್ಕದಲ್ಲಿಯೇ ಬೆಂಗಳೂರಿಗೆ ಹೋಗುವ ಬಸ್‌ ನಿಲ್ಲಿಸುತ್ತಿರುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಪಕ್ಕದಲ್ಲೇ ಚರಂಡಿ ಇದ್ದರೂ ಮಳೆ ನೀರು ಚರಂಡಿಗೆ ಹೋಗದೆ ಇರುವ ಕಾರಣ ರಸ್ತೆಯಲ್ಲೇ ನಿಲ್ಲುತ್ತಿದೆ. ಪ್ರಯಾಣಿಕರು ಸ್ವಲ್ಪ ಯಾಮಾರಿದರೂ ಕೆಸರು ಗುಂಡಿಗೆ ಬೀಳುವಂತೆ ಆಗುತ್ತದೆ.

ಬಸ್‌ ನಿಲ್ದಾಣ ಅವಶ್ಯ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಾಲೂಕಿನಲ್ಲಿಯೇ ಜಿಲ್ಲಾಡಳಿತ ಭವನ ಇರುವುದರಿಂದ ಸಾಕಷ್ಟು ಮಂದಿ ದೇವನಹಳ್ಳಿಗೆ ಬಂದು ಹೋಗುತ್ತಾರೆ. 4 ತಾಲೂ ಕುಗಳ ಪೈಕಿ ದೇವನಹಳ್ಳಿ ಮಧ್ಯದಲ್ಲಿ ಇದೆ. ಸರ್ಕಾರ ಇನ್ನಾದರೂ ಸುಸಜ್ಜಿತವಾದ ಹೈಟೆಕ್‌ ಬಸ್‌ ನಿಲ್ದಾಣ ಮಾಡಿ ಅಭಿವೃದ್ಧಿಗೊಳಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ 3 ತಿಂಗಳ ಹಿಂದೆ ಪುರಸಭೆ

ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 207 ರಲ್ಲಿ ವಿದ್ಯುತ್‌ ಕೇಬಲ್‌ ಅಳವಡಿಸಲು ಖಾಸಗಿ ಕಂಪನಿಯಿಂದ25ಲಕ್ಷ ಹಣ ಪಾವತಿಸಿಕೊಂಡು ಅನುಮತಿ ನೀಡಿದ್ದಾರೆ. ರಾಷ್ಟ್ರೀ ಯ ಹೆದ್ದಾರಿ ಪುರಸಭೆ ವ್ಯಾಪ್ತಿಗೆ ಒಳಪಡುವು ದಿಲ್ಲವಾದರೆ ಏಕೆ ಖಾಸಗಿ ಕಂಪನಿಯವರಿಗೆ ಕೇಬಲ್‌ ಅಳವಡಿಕೆಗೆ ಹಣ ಪಾವತಿ ಮಾಡಿಕೊಳ್ಳಬೇಕಿತ್ತು. ಹಣ ಪಾವತಿಗೆ ಮಾತ್ರ ರಸ್ತೆಗಳು ಒಳಪಡುತ್ತದೆ. ಇಲ್ಲವಾದರೆ ದುರಸ್ತಿ ಕೆಲಸಗಳಿಗೆ ಪುರಸಭೆ ವ್ಯಾಪ್ತಿಗೆ ಒಳಪಡುವುದಿಲ್ಲ ಎನ್ನುವುದು ಯಾವ ರೀತಿ ನ್ಯಾಯ ಒದಗಿಸುತ್ತಾರೆ ಮೊದಲು ಪಟ್ಟಣದ ನಾಗರೀಕರಿಗೆ ಸೌಲಭ್ಯ ನೀಡುವಂತೆ ಆಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Advertisement

ಅನುಕೂಲ ಕಲ್ಪಿಸಿ: ನೀರು ನಿಂತಿರುವ ಜಾಗದಲ್ಲಿ ಡಾಂಬರೀಕರಣ ಮಾಡಿ ಪಕ್ಕದಲ್ಲಿಯೇ ಇರುವ ಚರಂಡಿಗೆ ಹರಿ ಯುವಂತೆ ಪುರಸಭೆ ಅಧಿಕಾರಿಗಳು ಮಾಡಬೇಕು. ಆದರೆ, ನಮ್ಮ ವ್ಯಾಪ್ತಿಗೆ ಬರುವುದಿಲ್ಲಎನ್ನುತ್ತಾರೆ. ಪುರಸಭೆಗೆ ಕೋಟಿಗಟ್ಟಲೇ ತೆರಿಗೆಬರುತ್ತಿದ್ದರೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫ‌ಲ ವಾಗಿದೆ. ಇನ್ನಾದರೂ ಎಚ್ಚೆತ್ತು ಬೆಂಗಳೂರು ಕಡೆ ಹೋಗುವ ಬಸ್‌ ನಿಲ್ದಾಣದಲ್ಲಿ ಗುಂಡಿ ಮುಚ್ಚಿ ಮಳೆ ನೀರು ನಿಲ್ಲದಂತೆ ನೋಡಿಕೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕಿದೆ.

ಹಲವೆಡೆ ರಸ್ತೆ ಗುಂಡಿಗಳು:  ಪಟ್ಟಣದ ರಾಣಿ ಸರ್ಕಲ್‌ ನಿಂದ ಹಿಡಿದು ಮಿನಿವಿಧಾನ ಸೌಧ ಹತ್ತಿರದವರೆಗೆ ಹಾಗೂ ಗಿರಿಯಮ್ಮ ವೃತ್ತದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದುವರೆಗೂ ಮುಚ್ಚುವ ಕೆಲಸವಾಗಿಲ್ಲ. ಹಲವರು ಗುಂಡಿಗಳನ್ನು ತಪ್ಪಿಸಲು ಹೋಗಿ ಕೈಕಾಲು ಮುರಿದುಕೊಂಡು ಆಸ್ಪತ್ರೆ, ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕರು ರಸ್ತೆಗಳ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ್ದರೂ ಸರ್ಕಾರ ಅನುದಾನ ಬಿಡುಗಡೆಗೊಳಿಸಿ ಶಾಶ್ವತ ಪರಿಹಾರ ಕೊಡಿಸುವಲ್ಲಿ ವಿಫ‌ಲವಾಗಿದೆ. ಇನ್ನಾದರೂ ಸೂಕ್ತ ಅನುದಾನ ಸರ್ಕಾರ ನೀಡುವಂತೆ ಆಗಬೇಕು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಅನೇಕ ರಸ್ತೆಗಳು ಗುಂಡಿ ಬಿದ್ದಿವೆ. ಹೊಸಬಸ್‌ ನಿಲ್ದಾಣದ ಬೆಂಗಳೂರು ಕಡೆ ಹೋಗುವ ಬಸ್‌ ನಿಲ್ದಾಣದಲ್ಲಿ ಮಳೆನೀರು ನಿಂತಿರುವುದರಿಂದ ಬಸ್‌ಗಳಿಗೆ ಹತ್ತಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.-ನಂದಕುಮಾರ್‌, ಸಾರ್ವಜನಿಕ

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಸುಸಜ್ಜಿತ ಹೈಟೆಕ್‌ಬಸ್‌ ನಿಲ್ದಾಣ ಆಗಬೇಕು. ರಸ್ತೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಆಗಬೇಕು.-ಗಿರೀಶ್‌, ಪ್ರಯಾಣಿಕ

ಹೊಸ ಬಸ್‌ ನಿಲ್ದಾಣದ ಬೆಂಗಳೂರಿಗೆ ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ 207ಕ್ಕೆಬರುತ್ತದೆ. ಆದರೂ ನಮಗೆ ಬರದಿದ್ದರೂ ಜನ ಬಸ್‌ಗಳಿಗೆ ಕಾಯುವ ಕಡೆ ಮಳೆ ನಿಂತ ನಂತರ ಕಾಮಗಾರಿ ಪ್ರಾರಂಭಿಸುತ್ತೇವೆ.-ಕೃಷ್ಣಪ್ಪ, ಲೋಕೋಪಯೋಗಿ ಇಲಾಖೆಸಹಾಯಕ ಕಾರ್ಯಪಾಲಕ ಅಭಿಯಂತರ

 

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next