Advertisement

ಹದಗೆಟ್ಟ ಕಾನೂನು ಸುವ್ಯವಸ್ಥೆ: ಕೋಟ

03:45 AM Jul 11, 2017 | Team Udayavani |

ರಾಜ್ಯದಲ್ಲಿ  12 ಹಿಂದೂ ಕಾರ್ಯಕರ್ತರ ಹತ್ಯೆ
ಉಡುಪಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಗೃಹ ಸಚಿವರ ರಾಜೀ ನಾಮೆ ಯಿಂದ ಆ ಖಾತೆ ಸಿಎಂ ಅವರಲ್ಲಿಯೇ ಇದ್ದು ಅತಂತ್ರ ವಾಗಿದೆ. ರಾಜ್ಯದಲ್ಲಿ 2013ರಿಂದ 2017ರ ಮಾ. 31ರ ವರೆಗೆ 9 ಬಿಜೆಪಿ ಕಾರ್ಯಕರ್ತರು, ಮೂವರು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ. ಆನಂತರವೂ ಹತ್ಯೆಗಳು ಮುಂದುವರಿದಿವೆ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಸೋಮವಾರ ತನ್ನ ಉಡುಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.2013ರಿಂದ 2017ರ ಮಾ. 31ರ ವರೆಗೆ ರಾಜ್ಯದಲ್ಲಿ 23 ಬಿಜೆಪಿ ಕಾರ್ಯಕರ್ತರು ಹಾಗೂ 17 ಹಿಂದೂ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಇಂದಿಗೂ ಅದು ಮುಂದುವರಿಯುತ್ತಲೇ ಇದೆ. ಆರೆಸ್ಸೆಸ್‌ನ ಸಾಮಾನ್ಯ ಕಾರ್ಯಕರ್ತ ಶರತ್‌ ಮಡಿವಾಳ ಅವರ ಹತ್ಯೆಯಾಗಿದೆ. ಅವರ ಮನೆಗೂ ಭೇಟಿ ನೀಡಿ ಪರಿಸ್ಥಿತಿ ಅರಿತುಕೊಂಡಿದ್ದೇನೆ. ಹತ್ಯೆ ನಡೆದು ಹಲವು ದಿನಗಳು ಉರುಳಿದರೂ ಪ್ರಮುಖ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗಿಲ್ಲ ಎಂದವರು ತಿಳಿಸಿದರು.

ಕಲ್ಲು ತೂರಾಟದಲ್ಲಿ ಕೇರಳಿಗರು
ಶರತ್‌ ಮೃತದೇಹ ಕೊಂಡೊಯ್ಯುವ ವೇಳೆ ಮೆರ ವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರುವ ದೃಶ್ಯಾ ವಳಿ ಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದೆ. ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು, ಮಾಹಿತಿಗಳ ಪ್ರಕಾರ, ಅವ ರಲ್ಲಿ 6 ಮಂದಿ ಕೇರಳಿಗರು ಎನ್ನುವುದು ಗೊತ್ತಾಗಿದೆ. ಮಂಗಳೂರಿ ನಲ್ಲಿ ಅಶಾಂತಿ ಸೃಷ್ಟಿಸಲು ಹೊರರಾಜ್ಯದ ಯುವಕ ರನ್ನು ಕರೆತಂದಿರುವುದು ಇಲ್ಲಿ ಸಾಬೀತಾಗುತ್ತಿದೆ. ಪರಿಸ್ಥಿತಿ ಇಷ್ಟು ಗಂಭೀರ ವಾಗಿದ್ದರೂ ರಾಜ್ಯ ಸರಕಾರ ಮಾತ್ರ ತಲೆಕೆಡಿಸಿ ಕೊಂಡಿಲ್ಲ. ಶರತ್‌ ಕೊಲೆಗಾರರ ಬಂಧಿಸಲು ಅಶಕ್ತವಾದ ಈ ರಾಜ್ಯ ಸರಕಾರದ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೋಟ ಆಗ್ರಹಿಸಿದರು.

ಕಾಂಗ್ರೆಸ್‌ ಆಡಳಿತ – 
ಅತೀ ಹೆಚ್ಚು  ಗಲಭೆ

ಬಿಜೆಪಿ ಆಡಳಿತವಿದ್ದ   2011,  12ರಲ್ಲಿ 38 ಕೋಮು ಗಲಭೆ ನಡೆದಿದ್ದು,  80 ಪ್ರಕರಣ ದಾಖಲಾಗಿದ್ದವು. 2013ರಿಂದ 2017 ಮಾ. 31ರ ವರೆಗೆ ಕಾಂಗ್ರೆಸ್‌ ಆಡಳಿತದಲ್ಲಿ 98 ಕೋಮುಗಲಭೆಗಳು ನಡೆದಿದ್ದು, 511 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಸರಕಾರದ ಅಂಕಿ-ಅಂಶಗಳೇ ತಿಳಿಸುತ್ತವೆ. ಕಾಂಗ್ರೆಸ್‌ ಆಡಳಿತದಲ್ಲಿ ಕೋಮು ಸಂಘರ್ಷಗಳು ಹೆಚ್ಚುತ್ತಲಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next