ಆನೇಕಲ್: ಐದು ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಅವರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸ ಬೇಕಾ ಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ರವಿ ಡಿ.ಚೆನ್ನಣ್ಣನವರ್ ಎಚ್ಚರಿಕೆ ನೀಡಿದ್ದಾರೆ.
ಆನೇಕಲ್ ಪಟ್ಟಣದಲ್ಲಿ ರೌಡಿಗಳ ಪರೇಡ್ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು, ಕಳೆದ ಮೂರು ತಿಂಗಳಿಂದ ಕೋವಿಡ್-19 ಕೆಲಸದಲ್ಲಿ ಬ್ಯುಸಿಯಾಗಿದ್ದೆವು. ಹಿರಿಯ ಅಧಿ ಕಾರಿಗಳ ಸೂಚನೆ ಮೇರೆಗೆ ರೌಡಿಗಳನ್ನು ಕರೆದು ರೌಡಿಶೀಟ್ ರೆಕಾರ್ಡ್‌ಗಳನ್ನು ಅಪ್‌ಡೇಟ್ ಮಾಡುವ ಕೆಲಸ ಮಾಡಲಾಗಿದೆ. ಇದರ ನಡುವೆ ಆನೇಕಲ್ ವೃತ್ತ ವ್ಯಾಪ್ತಿಯಲ್ಲಿನ ಆನೇಕಲ್, ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ 33 ರೌಡಿಶೀಟ್ ಗಳನ್ನು ಕ್ಲೋಸ್ ಮಾಡಲಾಗಿದೆ.
ಉಳಿದ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಲಹೆ, ಸೂಚನೆ ನೀಡಿ ಉತ್ತಮ ಬದುಕು ಸಾಗಿಸಲು ಅವಕಾಶ ಕಲ್ಪಿಸಿ ಕೊಡುತ್ತೇವೆ ಅವರು ಹೇಳಿದರು. ಗಾಂಜಾ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿ ಕೊಂಡಿದ್ದವರನ್ನು ಕರೆದು ಎಚ್ಚರಿಕೆ ನೀಡಿದ್ದೇವೆ. ಇದರಲ್ಲಿ ಮಹಿಳೆಯರು ಇದ್ದರು. ಅವರಿಗೆ ಈ ದಂಧೆಯನ್ನು ಬಿಟ್ಟು ಸುಂದರ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಲಾಗಿದೆ ಎಂದು ಹೇಳಿದರು.
ಕ್ಷುಲ್ಲಕ ಕಾರಣಕ್ಕೆ ಗುಂಪುಗಾರಿಕೆ ಒಡೆದಾಟ ಮಾಡುವುದು, ಯಾರದೋ ಬೆಂಬಲ ಇದೆ ಎಂದು ರೌಡಿ ಚಟುವಟಿಕೆಗಳನ್ನು ನಡೆಸಿದರೆ ಅಂತಹವರನ್ನು ಮಟ್ಟ ಹಾಕ ವುದು ಹೇಗೆ ಎಂದು ನಮಗೆ ತಿಳಿದಿದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.124 ರೌಡಿಗಳಲ್ಲಿ 10 ರೌಡಿಗಳು ಜೈಲಿನಲ್ಲಿದ್ದಾರೆ. 26 ಓವಿಯಲ್ಲಿದ್ದಾರೆ. 10 ಜನ ಪ್ರಮುಖ ವಾಗಿ ಗೈರು ಹಾಜರಿ ಆಗಿದ್ದಾರೆ.
ಒಂದು ವಾರದೊಳಗಾಗಿ ಅವರ ಪತ್ತೆ ಮಾಡಿ ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ಮುಂದೆ ಹಾಜರಿ ಪಡಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದೇ ಮೊದಲ ಬಾರಿ ರೌಡಿ ಪೆರೆಡ್ ನಲ್ಲಿ 28 ಜನರನ್ನು ರೌಡಿ ಶೀಟ್ ಗಳಿಂದ ಮುಕ್ತಿಗೊಳಿಸಿ , ಮುಂದೆ ಕಾನೂನು ಬಾರ ಚಟುವಟಿಕೆಗಳಿಂದ ದೂರ ಇರಿ ಎಂದು ಅವರು ಸೂಚನೆ ನೀಡಿದರು.