Advertisement
ಘಟನೆ ವಿವರ: ಕೊಲೆಯಾದ ಮದ್ದೂರಿನ ಗಣೇಶ್ ಹಾಗೂ ಹುಣಸೂರಿನ ಧನರಾಜ್ ಇಬ್ಬರು ಸ್ನೇಹಿತರಾಗಿದ್ದು, ಮದ್ದೂರಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗಣೇಶ್‌ನಿಂದ ಧನರಾಜ್ 10 ಸಾವಿರ ಬಡ್ಡಿ ಸಾಲ ಪಡೆದುಕೊಂಡಿದ್ದ, ಕಳೆದ 6 ತಿಂಗಳಿನಿಂದ ಹಣ ವಾಪಾಸ್ ನೀಡಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಗಣೇಶ್ ಹಣ ವಾಪಸ್ ನೀಡುವಂತೆ ಒತ್ತಡ ಹಾಕುತ್ತಿದ್ದ ಆರೋಪಿ ಧನರಾಜ್ ಹುಣಸೂರಿನಲ್ಲಿ ಸಾಲ ವಾಪಸ್ ಕೊಡುವೆ ಎಂದು ಏ.23ರಂದು ಬೈಕ್‌ನಲ್ಲಿ ಇಮ್ರಾನ್‌ಗೆ ಸೇರಿದ ಸಾಮಿಲ್ ಬಳಿಗೆ ಕರೆತಂದಿದ್ದನು. ಈ ವೇಳೆ ಧನರಾಜ್ ರಾತ್ರಿ ತನ್ನ ಸ್ನೇಹಿತ ಸಲ್ಮಾನ್‌ನಿಂದ ಊಟ ತರಿಸಿಕೊಂಡು ಗಣೇಶನಿಗೂ ಊಟ ಮಾಡಿಸಿ ಮಲಗಿ ಸಿದ್ದರು. ಬೆಳಗಿನ ಜಾವ ಆರೋಪಿ ಧನರಾಜ್ ಗಣೇಶನ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಮಳೆಯಾಗಿದ್ದರಿಂದ ಬೈಕ್ ಟೈರ್‌ನ ಜಾಡನ್ನು ಹಿಡಿದು ಕೊಲೆ ನಡೆದ ಸ್ಥಳದಲ್ಲಿ ಗುರುತು ಸಾಮ್ಯ ಬಂದಿದ್ದರಿಂದ ಮಾಲೀಕನನ್ನು ಪತ್ತೆ ಹಚ್ಚಿದಾಗ ಬೈಕ್ ಮದ್ದೂರಿನ ಗಣೇಶನ ಸ್ನೇಹಿತನದೆಂದು ತಿಳಿದು ಬಂದಿತ್ತು. ಗಣೇಶ ಮತ್ತು ಧನರಾಜ್ ಮೊಬೈಲ್ ಲಾಸ್ಟ್ ಕರೆ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಎಸ್.ಪಿ.ರಿಷ್ಯಂತ್, ಐಪಿಎಸ್ ಅಧಿಕಾರಿ ಲಖನ್ ಸಿಂಗ್ ಯಾದವ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುಂದರ್‌ರಾಜ್, ವೃತ್ತ ನಿರೀಕ್ಷಕ ಪೂವಯ್ಯ, ಉಪ ನಿರೀ
ಕ್ಷಕರಾದ ಮಹೇಶ್, ಶಿವಪ್ರಕಾಶ್ ನೇತೃತ್ವದ ಪೊಲೀಸ್ ತಂಡ ಕಾರ್ಯಚರಣೆ ನಡೆಸಿದೆ.