ಬೆಂಗಳೂರು: ಸರ್ವೀಸ್ ಅಪಾರ್ಟ್‌ಮೆಂಟ್‌ಗಳ ಮೇಲೆ ದಾಳಿ ನಡೆಸಿದ ಮಾದಕ ದ್ರವ್ಯ ನಿಗ್ರಹ ದಳದ (ಎನ್‌ಸಿಬಿ) ಅಧಿಕಾರಿಗಳು ಕೇರಳ ಮೂಲದ ಮೂವರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದಾರೆ.
ಕೇರಳದ ಕಾಸರಗೊಡಿನ ಆಸಿಫ್ ಪುಥಾನ್ (28), ಮುಜಾಹಿದ್ (25) ಮತ್ತು ಅಜರುದ್ದೀನ್ (23) ಬಂಧಿತರು. ಆರೋಪಿಗಳಿಂದ 1.02 ಕೆ.ಜಿ. ಚೆರಸ್ ಮತ್ತು 500 ಗ್ರಾಂ. ಮೆಥಾಂಫೆಟಮೈನ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬೆಂಗಳೂರು ಮತ್ತು ಗೋವಾದಲ್ಲಿ ವಿದ್ಯಾರ್ಥಿಗಳು ಮತ್ತು ಪಾರ್ಟಿ ಆಯೋಜಕರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆಲ ತಿಂಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ನಗರದ ನಾನಾ ಕಡೆ ವಾಸವಿದ್ದರು. ಕೇರಳ ಮತ್ತು ಗೋವಾದಿಂದ ಚೆರಸ್ ಮತ್ತು ಮೆಥಾಂಫೆಟಮೈನ್ ಖರೀದಿಸಿ, ಅಲ್ಲಿನ ವ್ಯಸನಿಗಳಿಗೆ, ಪಾರ್ಟಿಗಳಲ್ಲಿ ಮಾರುತ್ತಿದ್ದರು. ಈ ಮಧ್ಯೆ ಜ.4ರಂದು ಬೆಂಗಳೂರಿನ ಸಂಜಯ್‌ನಗರದ ಸರ್ವೀಸ್ ಅಪಾರ್ಟ್ ಮೆಂಟ್‌ಗೆ ಬಂದು ಇಲ್ಲಿನ ವ್ಯಕ್ತಿಗಳಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮೇಲೆ ದಾಳಿ ನಡೆಸಿ ಮಾದಕ ವಸ್ತು ಸಮೇತ ರೋಪಿಗಳನ್ನು ಬಂಧಿಸಲಾಗಿದೆ. ಮೂವರೂ ವೃತ್ತಿಪರ ಮಾದಕ ವಸ್ತು ಮಾರಾಟಗಾರರಾಗಿದ್ದು, ನಾಲ್ಕೈದು ವರ್ಷಗಳಿಂದ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಕೇರಳ, ಕರ್ನಾಟಕ, ಗೋವಾದಲ್ಲಿ ತಮ್ಮದೇ ಬೃಹತ್ ಜಾಲ ಹೊಂದಿದ್ದು, ಕಾಸರಗೊಡಿನ ಕಾಲೇಜುಗಳ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ದಂಧೆ ನಡೆಸುತ್ತಿದ್ದಾರೆ.
ಬೇಡಿಕೆ ಇದ್ದ ಕಡೆ ಆರೋಪಿಗಳು ನೇರವಾಗಿಯೇ ಹೋಗಿ ಮಾದಕವಸ್ತು ಪೂರೈಕೆ ಮಾಡುತ್ತಿದ್ದರು. ಹೀಗಾಗಿ ಇದುವರೆಗೂ ಎಲ್ಲಿಯೂ ಸಿಕ್ಕಿಬಿದ್ದಿಲ್ಲ. ಕೇರಳ ಮೂಲದ ವ್ಯಕ್ತಿಯೇ ಆರೋಪಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಶಕ್ಕೆಪಡೆದು ವಿಚಾರಣೆ ನಡೆಸಲಾಗು ತ್ತಿದೆ ಎಂದು ಎನ್‌ಸಿಬಿ ಪೊಲೀಸರು ಹೇಳಿದರು.