Advertisement

ಕಟ್ಟಡ ಸಾಮಗ್ರಿ ಕದ್ದವರ ಬಂಧನ

04:15 PM Oct 28, 2017 | Team Udayavani |

ಬೆಂಗಳೂರು: ರಾತ್ರಿ ವೇಳೆ ನಿರ್ಮಾಣ ಹಂತದ ಕಟ್ಟಡಗಳನ್ನು ಗುರುತಿಸಿ ಇಲ್ಲಿನ ಸಾಮಾಗ್ರಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ತಮಿಳುನಾಡು ಮೂಲದ ವ್ಯಕ್ತಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಗೋವಿಂದನ್‌, ಗುಣಶೇಖರ್‌, ಶಕ್ತಿವೇಲು, ರಾಮ ಬಂಧಿತರು.

Advertisement

ಆರೋಪಿಗಳು ಕಳವು ಮಾಡಿದ ವಸ್ತುಗಳನ್ನು ಖರೀದಿ ಮಾಡುತ್ತಿದ್ದ ಯಲಹಂಕ ಉಪನಗರ ನಿವಾಸಿಗಳಾದ ವೆಂಕಟೇಶ್‌, ಅರುಳ್‌ಕುಮಾರ್‌ ಎಂಬುವರನ್ನು ವಶಕ್ಕೆ ಪಡೆದು ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 15 ಲಕ್ಷ ಮೌಲ್ಯದ ಕಟ್ಟಡ ನಿರ್ಮಾಣ ವಸ್ತುಗಳ ಪೈಕಿ ಸೆಂಟ್ರಿಂಗ್‌ ಶೀಟ್‌ಗಳು, ಜಾಕ್‌ ರಾಡ್‌ಗಳು, ಸ್ಟೀಲ್‌, ಒಂದು ಟೆಂಪೋವನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದಲ್ಲಿ ಇನ್ನೂ ನಾಲ್ಕೈದು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನಿಂದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ನಾಲ್ವರು ಕಟ್ಟಡ ಸಾಮಾಗ್ರಿ ಕದ್ದು ಹಣ ಮಾಡಲು ಸಂಚು ರೂಪಿಸಿದ್ದರು.

ಗೋವಿಂದನ್‌ ಹಾಗೂ ಗುಣಶೇಖರ್‌ ಹಗಲಿನ ವೇಳೆ ನಿರ್ಮಾಣ ಹಂತದ ಕಟ್ಟಡಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು ಬಳಿಕ ತಮ್ಮ ಇಬ್ಬರು ಸ್ನೇಹಿತರ ಜತೆ ಸೇರಿ ಕೃತ್ಯವೆಸಗುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳ ಬಂಧನದಿಂದ ಯಲಹಂಕ, ಬಾಗಲೂರು, ಕೊತ್ತನೂರು, ಏರ್‌ಪೋರ್ಟ್‌ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಪತ್ತೆಯಾಗಿವೆ.

ಅಲ್ಲದೇ ಈ ಭಾಗಗಳಲ್ಲಿ ಕಳ್ಳರು ತಮ್ಮ ಕೈಚಳಕ ಹೆಚ್ಚಾಗಿದ್ದು, ಈ ಕುರಿತು ಕಟ್ಟಡ ಮಾಲೀಕರು ವಿವಿಧ ಠಾಣೆಗಳಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿದ್ದು, ಕ್ಷೀಪ್ರ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ.

Advertisement

ಭದ್ರತಾ ಸಿಬ್ಬಂದಿ ನೆರವು
ಈ ರೀತಿ ಆರೋಪಿಗಳು ಕೃತ್ಯವೆಸಗಲು ನಿರ್ಮಾಣ ಹಂತದ ಕಟ್ಟಡಗಳ ಭದ್ರತಾ ಸಿಬ್ಬಂದಿ ನೆರವಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸೆಕ್ಯೂರಿಟಿ ಗಾರ್ಡ್‌ಗಳಿಗೆ ಹಣದ ಆಮಿಷವೊಡ್ಡಿ ಸಾಮಾಗ್ರಿಗಳನ್ನು ಕಳವು ಮಾಡುತ್ತಿದ್ದರು. ಹೀಗಾಗಿ ಪೂರ್ವ ಸಿದ§ತೆಯಂತೆ ಕಳವು ಮಾಡಿ ನಂತರ ಭದ್ರತಾ ಸಿಬ್ಬಂದಿಗೆ ಹಣ ಕೊಟ್ಟ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕೆಂಡ್‌ ಸೇಲ್‌
ಇತ್ತ ಕಳ್ಳರಿಂದ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಿದ್ದ ಗುಜರಿ ಅಂಗಡಿ ವ್ಯಾಪಾರಿಗಳಾದ ವೆಂಕಟೇಶ್‌ ಹಾಗೂ ಅರುಳ್‌ಕುಮಾರ್‌, ನಂತರ ಹೆಚ್ಚು ಬೆಲೆಗೆ ಸೆಕೆಂಡ್‌ ಸೇಲ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಈ ದಂಧೆಯನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next