Advertisement

ಕೊಲೆ ಆರೋಪಿಗಳ ಬಂಧನ

03:20 PM Aug 05, 2018 | |

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಂಬೂ ಬಜಾರ್‌ ರಸ್ತೆಯ ತಾಜ್‌ ಹೋಟೆಲ್‌ ಬಳಿ ಸೈಯದ್‌ ಅಮೀನ್‌ ಎಂಬಾತನನ್ನು ಹತ್ಯೆಗೈದಿದ್ದ ಐದು ಮಂದಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ವಾಲ್ಮೀಕಿ ನಗರ ನಿವಾಸಿಗಳಾದ ಮುದಾಸೀರ್‌ ಪಾಷಾ (24) ಸುಲ್ತಾನ್‌ ಪಾಷಾ (24), ಮಜರ್‌ ಖಾನ್‌ (27), ನಯೀಮ್‌ ಪಾಷಾ (23), ಮೊಹಮದ್‌ ಮುಜಮಿಲ್‌ (20) ಬಂಧಿತರು.  ಆರೋಪಿಗಳು ಸೈಯದ್‌ ಎಂಬಾತನನ್ನು ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಜುಲೈ 31ರಂದು ಬಂಬೂ ಬಜಾರ್‌ನ ಪಾತ್ರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೈಯದ್‌ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ನಡೆದು ಹೋಗುವಾಗ ಮೂರು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಸೈಯದ್‌ನನ್ನು ಅಡಗಟ್ಟಿ, ಬಳಿಕ ಅಟ್ಟಾಡಿಸಿ ಟೀ ಅಂಗಡಿ ಬಳಿ ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಸೈಯದ್‌ 2017ರ ರಂಜಾನ್‌ ಹಬ್ಬದಲ್ಲಿ ಆರೋಪಿಗಳ ಸ್ನೇಹಿತ, ಗಂಗೊಂಡನಹಳ್ಳಿ ನಿವಾಸಿ ಹ್ಯಾರೋನ್‌ ಎಂಬಾತನಿಗೆ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ಚಂದ್ರಲೇಔಟ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳು ಕಳೆದ ಒಂದು ತಿಂಗಳಿಂದ ಸೈಯದ್‌ನ ಚಲವನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಜುಲೈ 31ರಂದು ರಾತ್ರಿ ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next