Advertisement

11 ಜನ ಜೂಜುಕೋರರ ಬಂಧನ

02:56 PM Apr 12, 2020 | mahesh |

ಹಾಸನ: ಜಿಲ್ಲೆಯ ಎರಡು ಕಡೆ  ಜೂಜಾಡುತ್ತಿದ್ದ 11 ಮಂದಿಯನ್ನುಬಂಧಿಸಿರುವ ಪೊಲೀಸರು ಬಂಧಿತರಿಂದ 14,235ರೂ. ನಗದು ವಶಪಡಿಸಿ
ಕೊಂಡಿದ್ದಾರೆ. ಹಾಸನ ತಾಲೂಕು ಯಲಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಹೈ ಮಾಸ್ಟ್‌ ಲೈಟ್‌ ಕೆಳಗೆ ಶುಕ್ರವಾರ ರಾತ್ರಿ ಅಂದರ್‌ – ಬಾಹರ್‌ ಆಡುತ್ತಿದ್ದ ಯಲಗುಂದ ಗ್ರಾಮದ ರವಿ, ಸ್ವಾಮಿ, ಪುಟ್ಟಸ್ವಾಮಿ, ಎಚ್‌.ಚಂದ್ರಪ್ಪ, ಶಿವರಾಜು, ನಿಂಗರಾಜು, ನಂಜೇಶ ಅವರನ್ನು ಹಾಸನ ಗ್ರಾಮಾಂತ ರಠಾಣೆ ಪಿಎಸ್‌ಐ ಅರೋಕಿಯಪ್ಪ ಮತ್ತು ಸಿಬ್ಬಂದಿ ಬಂಧಿಸಿದರು. ಆರೋಪಿಗಳು 8,660 ರೂ. ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಅರಕಲಗೂಡು ತಾಲೂಕು ಮಲ್ಲಿಪಟ್ಟಣ ಹೋಬಳಿ, ದಾರಿಕೊಂಗಳಲೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಅಂದರ್‌-ಬಾಹರ್‌ ಆಡುತ್ತಿದ್ದ ಕೆ.ಪಿ.ಲೋಕೇಶ, ಎಸ್‌.ಪಿ.ಸುರೇಶ, ಪಾಲಾಕ್ಷ, ಕೆ.ಸಿ.ಜಗದೀಶ ಅವರನ್ನು ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ.ಕೆ.ದೀಪಕ್‌ ಮತ್ತು ಸಿಬ್ಬಂದಿ ಬಂಧಿಸಿದರು.

Advertisement

ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 5575 ರೂ. ನಗದನ್ನು ವಶಪಡಿಸಿಕೊಂಡು ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next