Advertisement

ನೃತ್ಯ ಮಾಡಿದ್ದಕ್ಕೆ ಬಂಧನ‌

11:26 AM Jul 09, 2018 | Team Udayavani |

ಟೆಹರಾನ್‌: ಇನ್‌ಸ್ಟಾಗ್ರಾಂನಲ್ಲಿ ತನ್ನ ನೃತ್ಯದ ವೀಡಿಯೋವನ್ನು ಪೋಸ್ಟ್‌ ಮಾಡಿ, ಸಾವಿರಾರು ಫಾಲೋವರ್‌ಗಳನ್ನು ಗಳಿಸಿದ ಇರಾನ್‌ನ 18 ವರ್ಷದ ಯುವತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

Advertisement

ಖಟ್ಟರ್‌ ಸಂಪ್ರದಾಯವಾದಿ ರಾಷ್ಟ್ರವಾದ ಇರಾನ್‌ನಲ್ಲಿ ಆಕೆ ತಲೆಗೆ ಸ್ಕಾಫ್ì ಕೂಡ ಧರಿಸದೇ, ನೃತ್ಯ ಮಾಡುವ ಮೂಲಕ ಧರ್ಮ ವಿರೋಧಿ ಕೃತ್ಯ ಎಸಗಿದ್ದಾಳೆ ಎನ್ನುವುದು ಅಧಿಕಾರಿಗಳ ಆರೋಪ. ಜಿಮ್ನಾಸ್ಟ್‌ ಕೂಡ ಆಗಿರುವ ಮಾಯಿದೇ ಹೊಜಾಬ್ರಿ (18) ತನ್ನ ಹೆಸರಲ್ಲಿರುವ ವಿವಿಧ ಖಾತೆಗಳಲ್ಲಿ ಇರಾನ್‌ ಹಾಗೂ ಪಾಶ್ಚಾತ್ಯ ಶೈಲಿಯಲ್ಲಿ ನೃತ್ಯ ಮಾಡುತ್ತಿರುವಂಥ ಸುಮಾರು 300 ವೀಡಿಯೋಗಳನ್ನು ಅಪ್‌ಲೋಡ್‌ ಮಾಡಿದ್ದಾಳೆ. ಈ ಮೂಲಕ 12 ಸಾವಿರದಿಂದ 66 ಸಾವಿರದವರೆಗೆ ಫಾಲೋವರ್‌ಗಳನ್ನೂ ಹೊಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next