Advertisement
ಅಪರಿಚಿತ ವ್ಯಕ್ತಿಯ ನಡೆಗಳು ತೀರಾ ಅನುಮಾನಾಸ್ಪದವಾಗಿದ್ದು ಹೊರರಾಜ್ಯದ ವ್ಯಕ್ತಿ ಇರಬಹುದೇ ಎಂಬ ಶಂಕೆಯೂ ಪೊಲೀಸರಿಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಜತೆಗೆ, ರಾಷ್ಟ್ರೀಯ ತನಿಖಾ ತಂಡ ( ಎನ್‌ಐಎ), ಕೇಂದ್ರ ಗುಪ್ತದಳ ಸೇರಿದಂತೆ ಇನ್ನಿತರೆ ತನಿಖಾ ತಂಡಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Related Articles
Advertisement
ಆದರೆ, ಶಂಕಾಸ್ಪದ ವ್ಯಕ್ತಿ ಮೊದಲಬಾರಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ತೆರಳಿ, ಮತ್ತೂಮ್ಮೆ ಒಳಪ್ರವೇಶಿಸಲು ಯತ್ನಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬೆನ್ನಲ್ಲೇ ವಿಶೇಷ ತನಿಖಾ ತಂಡಗಳು ಆತನ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.
ರೇಖಾಚಿತ್ರ ನೆರವು?ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವರ್ತನೆ ತೋರಿ ಪರಾರಿಯಾದ ಶಂಕಾಸ್ಪದ ವ್ಯಕ್ತಿಯ ಪತ್ತೆಗಾಗಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ಆತನ ಅಸ್ಪಷ್ಟ ಮುಖ ಗುರುತು ಆಧರಿಸಿ ರೇಖಾಚಿತ್ರಗಳನ್ನು ಬಿಡಿಸಲು ಸಿದ್ಧತೆ ನಡೆಸಿದ್ದಾರೆ. ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ರೈಲ್ವೇನಿಲ್ದಾಣ ಸುತ್ತಮುತ್ತಲ ಸಿಸಿಟಿವಿ ಪೂಟೇಜ್‌ಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ಫೂಟೇಜ್‌ಗಳಲ್ಲಿ ಆತನ ಅಸ್ಪಷ್ಟ ಮು ಖಚಿತ್ರಣ ಮಾತ್ರವಿದೆ. ಈಗಾಗಲೇ ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಶಂಕಾಸ್ಪದ ವ್ಯಕ್ತಿಯೊಬ್ಬನೇ ಕಾಣಿಸಿಕೊಂಡಿದ್ದಾನೆ. ಆತನ ಜತೆಗೆ ಯಾರೂ ಇಲ್ಲ. ಮೆಜೆಸ್ಟಿಕ್ ಕಡೆಯಿಂದ ಒಬ್ಬನೇ ಬಂದಿದ್ದಾನೆ. ಮೆಟ್ರೋ ನಿಲ್ದಾಣದಿಂದ ವಾಪಸ್ ಆದ ಬಳಿಕ ಆತ ಎಲ್ಲಿಗೆ ತೆರಳಿದ ಎಂಬುದು ಖಚಿತವಾಗಿಲ್ಲ. ಹಲವು ಆಯಾಮಗಳಲ್ಲಿ ಪತ್ತೆಕಾರ್ಯ ನಡೆ ಯುತ್ತಿದ್ದರೂ ಆತನ ಸುಳಿವು ದೊರೆತಿಲ್ಲ. ಆತ ರಾಜ್ಯದವನೇ ಅಥವಾ ಹೊರರಾಜ್ಯದವನೇ ಎಂಬುದು ಖಚಿತವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕರು ಮಾಹಿತಿ ನೀಡಲು ಸಂಪರ್ಕಿಸಿ
ಉಪ್ಪಾರಪೇಟೆ ಪೊಲೀಸ್ ಠಾಣೆ: 08022942503
ಉಪ್ಪಾರ ಪೇಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ -9480801716
ಪಶ್ಚಿಮ ನಿಯಂತ್ರಣ ಕೊಠಡಿ – 080 22943232, 9480801700