Advertisement

ಹಸಿರುಮನೆ ಬಳಿ ಮಂಗಗಳ ಮೃತದೇಹ ಪತ್ತೆ

09:10 PM Apr 12, 2021 | Team Udayavani |

ಸಾಗರ: ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯ ಹಸಿರುಮನೆ ಸಮೀಪ ಹುಲಿದೇವರಬನ ರಸ್ತೆ ಪಕ್ಕದಲ್ಲಿ 10 ಮಂಗಗಳ ಮೃತದೇಹ ಭಾನುವಾರ ಪತ್ತೆಯಾಗಿದೆ.

Advertisement

ವಿಷಯ ತಿಳಿದ ತಾಲೂಕು ವೈದ್ಯಾ ಧಿಕಾರಿ ಡಾ| ಮೋಹನ್‌, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಎನ್‌.ಎಚ್‌. ಶ್ರೀಪಾದ ರಾವ್‌, ಡಾ| ದಯಾನಂದ್‌ ತಕ್ಷಣ ಸ್ಥಳಕ್ಕೆ ಧಾವಿಸಿ ಮಂಗಗಳ ಕಳೇಬರಗಳ ಪರಿಶೀಲನೆ ನಡೆಸಿದರು. ಶಿವಮೊಗ್ಗ ಪಶು ವೈದ್ಯ ಕಾಲೇಜಿನ ರೋಗಪತ್ತೆ ಅಧ್ಯಯನ ವಿಭಾಗದ ವೈದ್ಯರಾದ ಅಜಯ್‌, ವೀಣಾ ಹಾಗೂ ನಿಷ್ಮ ಆಗಮಿಸಿ ಎಲ್ಲಾ ಮಂಗಗಳ ಶವ ಪರೀಕ್ಷೆ ನಡೆಸಿದರು.

ಅಂಗಾಂಶ ಮಾದರಿಗಳನ್ನು ರೋಗಪತ್ತೆ ಶಿವಮೊಗ್ಗ ಪಶು ವೈದ್ಯ ಕಾಲೇಜಿಗೆ ಕಳುಹಿಸಿಕೊಡಲಾಗಿದೆ. ಕಳೆದೆರಡು ವರ್ಷಗಳಿಂದ ಸಾಗರ ತಾಲೂಕಿನಾದ್ಯಂತ ಮಂಗನ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಗಳ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 2019ರಲ್ಲಿ ತಾಲೂಕಿನಲ್ಲಿ 20ಕ್ಕಿಂತ ಹೆಚ್ಚು ಜನರು ಮಂಗನ ಕಾಯಿಲೆಗೆ ತುತ್ತಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಮೇಲ್ನೋಟಕ್ಕೆ ಮಂಗಗಳ ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವ ಕಂಡು ಬಂದಿದ್ದು ಉದ್ದೇಶಪೂರ್ವಕವಾಗಿ ಹೊಡೆದು ಸಾಯಿಸಿರಬಹುದೆಂದು ಅಭಿಪ್ರಾಯಪಡಲಾಗಿದೆ.

ಸ್ಥಳದಲ್ಲಿ ಆವಿನಹಳ್ಳಿ ಆರೋಗ್ಯ ಇಲಾಖೆಯ ಸರಿತಾ, ಸೀತಾ, ಅರಣ್ಯ ಇಲಾಖೆಯ ಗಣಪತಿ, ಉಮೇಶ್‌, ಕೀರ್ತಿ, ಪಶು ಇಲಾಖೆಯ ಸಾಲಿಮಠ ಮತ್ತು ಉಮೇಶ್‌ ಇದ್ದರು. ಕಳೇಬರಗಳನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next