Advertisement

ಗಾಂಜಾ ಸಾಗಾಟ ಪತ್ತೆ; ಇಬ್ಬರ ಸೆರೆ, ಸೊತ್ತು ವಶ 

02:31 PM May 25, 2017 | Team Udayavani |

ಮಂಗಳೂರು:  ಒಡಿಶಾದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು  ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಉದಯ ನಾಯಕ್‌ ನೇತೃತ್ವದ ತಂಡದ ಪೊಲೀಸರು ಬುಧವಾರ ಬಂಧಿಸಿ ಒಟ್ಟು 2.5 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾ ಸಹಿತ 4,38,000 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. 

Advertisement

ಒಡಿಶಾದ ಶಾಂತನು ಕುಮಾರ್‌ ಸಾಹು (20) ಮತ್ತು ಪಣಂಬೂರು ಮೀನಕಳಿಯದ ಆಟೋ ಚಾಲಕ ವಿಕ್ರಂ ಯಾನೆ ವಿಕ್ಕಿ ಯಾನೆ ಜಯರಾಂ  (27) ಬಂಧಿತರು. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾ, 12 ಸಾವಿರ ರೂ. ಮೌಲ್ಯದ ಎರಡು ಮೊಬೈಲ್‌ ಫೋನ್‌ಗಳು, ಗಾಂಜಾ ತೂಕ ಮಾಡುವ ಮಾಪಕ, 1000 ರೂ. ನಗದು ಹಾಗೂ ಗಾಂಜಾ ಸಾಗಾಟಕ್ಕೆ ಉಪಯೋಗಿಸಿದ್ದ  1,75,000 ರೂ. ಮೌಲ್ಯದ ಆಟೋ ರಿûಾ  ವಶಪಡಿಸಿಕೊಂಡಿರುವ ಸೊತ್ತುಗಳು.  ನಗರದ ಮಂಗಳಾ ಕ್ರೀಡಾಂಗಣದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು. 
 
ಎಸಿಪಿ ಉದಯ ನಾಯಕ್‌ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬರ್ಕೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರಾಜೇಶ್‌ ಎ.ಕೆ., ಅಪರಾಧ ವಿಭಾಗದ ಪಿ.ಎಸ್‌.ಐ ನರೇಂದ್ರ ಮತ್ತು ಎಎಸ್‌ಐ ಪ್ರಕಾಶ್‌, ಸಿಬಂದಿ ಗಣೇಶ್‌, ರಾಜೇಶ್‌ ಅತ್ತಾವರ, ಕಿಶೋರ್‌ ಕೋಟ್ಯಾನ್‌, ಕಿಶೋರ್‌ ಪೂಜಾರಿ, ನಾಗರಾಜ, ಮಹೇಶ್‌ ಪಾಟೀಲ್‌ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next