Advertisement
ಶನಿವಾರ ಬೆಳಗ್ಗೆ ಇಲ್ಲಿನ ಹಾಡಿಯೊಂದರಲ್ಲಿ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಗಮನಿಸಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ಆತನನ್ನು ಸರಪಳಿಯಿಂದ ಮರಕ್ಕೆ ಕಟ್ಟಿರುವುದು ತಿಳಿದು ಬಂತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ವ್ಯಕ್ತಿಗೆ ನೀರು, ತಿಂಡಿ ನೀಡಿದರು.
ಕೆಲವು ದಿನಗಳಿಂದ ಈತ ಪರಿಸರದಲ್ಲಿ ತಿರುಗಾಡುತ್ತಿದ್ದು, ಮಲಯಾಳ ಭಾಷೆ ಮಾತನಾಡುತ್ತಿದ್ದಾನೆ. ಈತ ಕೇರಳದ ಕಲ್ಲಿಕೋಟೆಯ ಸಯ್ಯದ್ ಎಂಬುದು ತಿಳಿದು ಬಂದಿದೆ. ಈತನ ಮನೆಯವರನ್ನು ಸಂಪರ್ಕಿಸಲಾಗಿದ್ದು, ಅವರು ಇಲ್ಲಿಗೆ ಹೊರಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಾರ್ವಜನಿಕರ ಸಹಕಾರದಲ್ಲಿ ಈತನಿಗೆ ಸ್ನಾನ ಮಾಡಿಸಿ ಉಪಚರಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಇವನನ್ನು ಕಟ್ಟಿ ಹಾಕಿದವ ರ್ಯಾರು ಎಂಬುದು ತಿಳಿದು ಬಂದಿಲ್ಲ.