Advertisement
ಪ್ರತಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಸಕ್ರಿಯವಾಗಿ, ಕ್ರಿಯಾಶೀಲರಾಗಿ ಬಾಲ ಕಾರ್ಮಿಕ ಮಕ್ಕಳ ಪತ್ತೆಗಾಗಿ ಕಾರ್ಯನಿರ್ವಹಿಸಬೇಕು. ಅಲ್ಲದೇ ವೇಳಾಪಟ್ಟಿ ರೂಪಿಸಿಕೊಂಡು ತಹಶೀಲ್ದಾರ್ ಹಾಗೂ ಲೇಬರ್ ಅಧಿ ಕಾರಿಗಳ ಸಮ್ಮುಖದಲ್ಲಿ ದಿಢೀರ್ ದಾಳಿ ಮಾಡಿ, ಬಾಲ ಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಎಂದು ನಿರ್ದೇಶನ ನೀಡಿದರು.
ಬಾಲ ಕಾರ್ಮಿಕ ಮಕ್ಕಳ ಪತ್ತೆಗೆ ಈಗಾಗಲೇ 2020-21ರಲ್ಲಿ 3.23 ಲಕ್ಷ ರೂ. ಹಾಗೂ 2021-22ರಲ್ಲಿ 1 ಮತ್ತು 2 ಕಂತಿನಲ್ಲಿ 1.70 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕೋವಿಡ್ ಹಿನ್ನೆಲೆ ಯಾವುದೇ ತಪಾಸಣೆ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಬಾಲ ಕಾರ್ಮಿಕ ಮಕ್ಕಳ ಪತ್ತೆ ಕಾರ್ಯ ಶುರುವಾಗಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಯಲ್ಲಾಲಿಂಗ ಕಾಳನೂರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಲೀಡ್ ಬ್ಯಾಂಕನ ಮ್ಯಾನೇಜರ್ ಇಂತೆಸಾರ್ ಹುಸೇನ್ ಸೇರಿ ಸೊಸೈಟಿ
ಸದಸ್ಯರು ಇದ್ದರು.