Advertisement

ಕೋವಿಡ್ ವೈರಸ್ ಸೋಂಕು ಪತ್ತೆಯಲ್ಲಿ PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

11:25 PM Apr 07, 2020 | Hari Prasad |

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಆ್ಯಂಟಿಬಾಡಿ ರ್ಯಾಪಿಡ್‌ ಟೆಸ್ಟಿಂಗ್‌ಗೆ ಅನುಮತಿ ನೀಡಿರುವುದರಿಂದ, ವಿವಿಧ ಏಜೆನ್ಸಿಗಳು ನಡೆಸುತ್ತಿರುವ ಕೋವಿಡ್ 19 ಸ್ತ್ರೀನಿಂಗ್‌ ಮತ್ತು ಸೋಂಕಿತರ ಪತ್ತೆ ಕಾರ್ಯಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರಕಾರವು, ಪ್ರಸ್ತುತ ಜನರ ಗಂಟಲು ಅಥವಾ ಮೂಗಿನಿಂದ ದ್ರವವನ್ನು ಪಡೆದು, ಪಿಸಿಆರ್‌ ವಿಧಾನದ ಮೂಲಕ ಪರೀಕ್ಷಿಸುತ್ತಿದೆ.

Advertisement

2 ಪರೀಕ್ಷೆಗಳ ವ್ಯತ್ಯಾಸ

ಪಿಸಿಆರ್‌ ಪರೀಕ್ಷೆ
ಪ್ರಸ್ತುತ ಭಾರತದಲ್ಲಿ ಕೋವಿಡ್ 19 ವೈರಸ್‌ ಸೋಂಕು ಪರೀಕ್ಷೆಗೆ ಪಿಸಿಆರ್‌ (ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌) ಪದ್ಧತಿ ಬಳಸಲಾಗುತ್ತಿದ್ದು, ಈ ಪರೀಕ್ಷೆಗೆ ಶಂಕಿತರ ಗಂಟಲು ಅಥವಾ ಮೂಗಿನ ದ್ರವ ಪಡೆಯುವುದು ಅತ್ಯಗತ್ಯ. ಇಲ್ಲಿ ಪರಿಪಕ್ವ ಫ‌ಲಿತಾಂಶ ಸಿಗಲು ಐದು ತಾಸು ಬೇಕೇಬೇಕು.

ಆ್ಯಂಟಿಬಾಡಿ ರ್ಯಾಪಿಡ್‌ ಟೆಸ್ಟ್‌
ಹೆಸರೇ ಸೂಚಿಸುವಂತೆ ತ್ವರಿತ ಫ‌ಲಿತಾಂಶ ನೀಡುವುದು ಆ್ಯಂಟಿಬಾಡಿ ರ್ಯಾಪಿಡ್‌ ಟೆಸ್ಟಿಂಗ್‌ (ಎಆರ್‌ಟಿ) ಕಿಟ್‌ಗಳ ವಿಶೇಷತೆ. ಇಲ್ಲಿ ಶಂಕಿತರ ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷಿಸಲಾಗುತ್ತಿದ್ದು, 15ರಿಂದ 30 ನಿಮಿಷಗಳಲ್ಲಿ ಪಕ್ಕಾ ಫ‌ಲಿತಾಂಶ ಸಿಗುತ್ತದೆ.

ಈ ಕಿಟ್‌ಗಳು ಸಿಗುವುದೆಲ್ಲಿ?
ಭಾರತವು ಅಮೆರಿಕ, ಚೀನ ಮತ್ತು ದಕ್ಷಿಣ ಕೊರಿಯಾದಿಂದ ಈಗಾಗಲೇ 5 ಲಕ್ಷ ಆರ್‌ಎಟಿ ಕಿಟ್‌ ಖರೀದಿಸಿದ್ದು, ಇವು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ. ಬೆಂಗಳೂರು ಮೂಲದ ಸಂಸ್ಥೆ ಸಹ ಕಿಟ್‌ ತಯಾರಿಯಲ್ಲಿ ನಿರತವಾಗಿದ್ದು, ಶೀಘ್ರವೇ ಅಗತ್ಯದಷ್ಟು ಕಿಟ್‌ಗಳು ಲಭ್ಯವಾಗಲಿವೆ.

ಎಆರ್‌ಟಿ ಕಿಟ್‌ ಏಕೆ ಮುಖ್ಯ?
ಈ ಕಿಟ್‌ಗಳನ್ನು ಗ್ರಾಮೀಣ ಮಟ್ಟದಲ್ಲಿ ಸುಲಭವಾಗಿ ಬಳಸಬಹುದಾಗಿದ್ದು, ಸದ್ಯ ಮಹಾನಗರಗಳಿಂದ ಹಳ್ಳಿಗಳಿಗೆ ಮರಳಿರುವ ಸಾವಿರಾರು ವಲಸಿಗರಲ್ಲಿನ ಸೋಂಕು ಪತ್ತೆಗೆ ಇವು ನೆರವಾಗುತ್ತವೆ.

Advertisement

ಪರೀಕ್ಷೆಗಳ ವೆಚ್ಚ?
ಪ್ರಸ್ತುತ ಖಾಸಗಿ ಲ್ಯಾಬ್‌ಗಳು ಒಂದು ಪಿಸಿಆರ್‌ ಪರೀಕ್ಷೆಗೆ 4,500 ರೂ. ಪಡೆಯುತ್ತಿವೆ. ಆದರೆ, ಒಂದು ಎಆರ್‌ಟಿ ಕಿಟ್‌ 2ರಿಂದ 3 ಸಾವಿರ ರೂ.ಗೆ ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next