ಚಿತ್ರದುರ್ಗ :‘ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು, ಬೆಂಕಿ ಹಚ್ಚುವುದು ಆರ್‌ಎಸ್‌ನವರಿಗೆ ರಕ್ತಗತವಾಗಿ ಬಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಗೆ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗದ ಮುರುಗಾ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಲು ಬಂದ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿ ‘ನಮ್ಮದು ಒಗ್ಗೂಡಿಸುವಂತಹ ಕೆಲಸ , ಒಡೆಯುವುದು ಅಲ್ಲ. ಅವರದ್ದು ಬರೀ ಮಾತು ಮಾತ್ರ ‘ಮನ್ ಕೀ ಬಾತ್’. ಆದ್ರೆ ನಮ್ಮದು ‘ಕಾಮ್ ಕೀ ಬಾತ್’ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ನಮ್ಮ ಧ್ಯೇಯ’ ಎಂದರು.
‘ಬ್ರಿಟೀಷರಂತೆ ಒಡೆದು ಆಳುವ ನೀತಿಯ ಪ್ರತಿರೂಪ ಸಿದ್ದರಾಮಯ್ಯ. ಅವರು ಸಿದ್ದರಾಮಣ್ಣ ಅಲ್ಲ, ಬೆಂಕಿ ರಾಮಣ್ಣ , ಪೆಟ್ರೋಲ್ ಕೈಯಲ್ಲಿ ಹಿಡಿದುಕೊಂಡೇ ಇರುತ್ತಾರೆ’ ಎಂದು ಸಿಎಂ ವಿರುದ್ಧ ಆರ್ ಅಶೋಕ್ ಕಿಡಿ ಕಾರಿದ್ದರು.
ಬಸವಣ್ಣನ ವಿಚಾರದಲ್ಲಿ ನನ್ನ ತಕರಾರಿಲ್ಲ !
ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಬಸವಣ್ಣನ ವಿಚಾರದಲ್ಲಿ ನನ್ನದು ಯಾವುದೇ ತಕರಾರುಗಳಿಲ್ಲ. ಬಸವ ತತ್ವಗಳನ್ನು ಕೇವಲ ಬಾಯಲ್ಲಿ ಹೇಳಿದರೆ ಸಾಲದು ಜೀವನದಲ್ಲೂ ಅಳವಡಿಸಿಕೊಳ್ಳಬೇಕು’ ಎಂದರು.
Related Articles
‘ಅಹಿಂದ ಸಂಘಟನೆ ಮಾಡಿದಾಗ ವಿರೋಧದ ನಡುವೆಯೂ ಮುರುಗಾ ಶ್ರೀಗಳು ಶೋಷಿತರ ಏಳಿಗೆಗಾಗಿ ನನಗೆ ಬೆಂಬಲ ನೀಡಿದ್ದರು’ ಎಂದರು.
“ಸೂಳೆ’ಕೆರೆ ಅಂದ್ರೆ ತಪ್ಪೇನಿದೆ ? ಸಿಎಂ ಪ್ರಶ್ನೆ
‘ಜನರ ಬಾಯಲ್ಲಿ ಯಾವ ಭಾಷೆ ಬರುತ್ತದೆ ಅದನ್ನೇ ಬಳಸಬೇಕು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆಯ ಸೂಳೆಕರೆಗೆ ಶಾಂತಿಸಾಗರ ಎಂದು ಕರೆದ ಕುರಿತಾಗಿ ಕೇಳಿದ ಪ್ರಶ್ನೆ . ಶ್ರೀಘ್ರದಲ್ಲಿ ಸೂಳೆಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.
ನಾನು ಅಲ್ಲ ನಾವು ; ಹೇಳಿಕೆ ಬದಲಿಸಿದ ಸಿಎಂ
‘ನಾವೇ ಬಂದು ಮುಂದಿನ ದಸರಾ ಪೂಜೆ ಮಾಡೋದು. ಅದರ ಬಗ್ಗೆ ಎರಡು ಮಾತೇ ಇಲ್ಲ.ಗೊಂದಲ ಎಲ್ಲಿದೆ.ಅಂದ್ರೆ ನಾನೇ ಅಲ್ಲ,ಕಾಂಗ್ರೆಸ್ ಪಕ್ಷ’ ಎಂದರು. ಈ ಹೇಳಿಕೆ ನೀಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮೈಸೂರಿನಲ್ಲಿ ಜಂಬೂ ಸವಾರಿಗೆ ಚಾಲನೆ ನೀಡಿ ‘ಮುಂದಿನ ದಸರಾ ನಾನೇ ನಡೆಸುವುದು ಎಂದಿದ್ದರು. ಒಂದೇ ದಿನದಲ್ಲಿ ಹೇಳಿಕೆ ಬದಲು ಮಾಡಿರುವ ಬಗ್ಗೆ ಹಲವು ಚರ್ಚೆಗಳನ್ನು ಹುಟ್ಟು ಹಾಕಿದ್ದು, ಸಿಎಂ ಹೇಳಿಕೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿ, ಭಿನ್ನಮತದ ಸೂಚನೆ ನೀಡಿದೆ ಎನ್ನಲಾಗಿದೆ.