Advertisement

Mangaluru: ಮೀನುಗಾರಿಕಾ ಸಾಮಗ್ರಿಗಳ ನಾಶ: ಪೊಲೀಸರಿಗೆ ದೂರು

08:11 PM Jan 07, 2025 | Team Udayavani |

ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯ ಸಮೀಪ ಯಾಂತ್ರೀಕೃತ ಬೋಟ್‌ ಹಾದು ಹೋದ ಪರಿಣಾಮ ಬಲೆ, ಹಗ್ಗ ಸೇರಿದಂತೆ ಸುಮಾರು 1.90 ಲ.ರೂ ನಷ್ಟ ಸಂಭವಿಸಿರುವ ಬಗ್ಗೆ ಕರಾವಳಿ ಕಾವಲು ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಮೂರು ಮಂದಿ ಮೀನುಗಾರರು ಡಿ. 24ರಂದು ರಾತ್ರಿ 11ಕ್ಕೆ ಸಿದ್ದಿವಿನಾಯಕ ಗಿಲ್‌ನೆಟ್‌ ದೋಣಿಯಲ್ಲಿ ನವಮಂಗಳೂರು ಬಂದರಿನ ಪಶ್ಚಿಮ ದಿಕ್ಕಿಗೆ ಸುಮಾರು 20 ನಾಟಿಕಲ್‌ ಮೈಲು ದೂರದಲ್ಲಿ ಬಲೆ ಹಾಕಿ ಮೀನುಗಾರಿಕೆ ನಡೆಸುತ್ತಿದ್ದರು. ಆಗ ಎಲ್ಲ ಬೆಳಕನ್ನು ಬಂದ್‌ ಮಾಡಿ ಬಂದ ಅನಾಮಧೇಯ ಯಾಂತ್ರೀಕೃತ ಬೋಟೊಂದು ಬಲೆಯನ್ನು ಎಳೆದುಕೊಂಡು ಹೋಗಿದೆ.

ಅಲ್ಲದೆ ಮೀನುಗಾರಿಕೆ ಸಾಮಗ್ರಿಗಳಾದ ರೋಪ್‌, ಬೋಯ್‌ಗಳು ಸಮುದ್ರ ಪಾಲಾಗಿದೆ. ಇದರಿಂದ ಸುಮಾರು 400 ಕೆ.ಜಿ ಬಲೆ ಹಾಗೂ ಇತರ ಮೀನುಗಾರಿಕ ಸಾಮಗ್ರಿಗಳು ನಾಶವಾಗಿ 1.90 ಲ.ರೂ. ನಷ್ಟ ಉಂಟಾಗಿದೆ ಎಂದು ದೋಣಿಯ ಮಾಲಕ ಅಕ್ಷಯ ಆರ್‌. ಕಾಂಚನ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next