Advertisement

ರಾಸಾಯನಿಕ ಮಿಶ್ರಿತ ನೀರಿನಿಂದ ಬೆಳೆ ನಾಶ

01:02 PM Jan 18, 2022 | Team Udayavani |

ಮಂಡ್ಯ: ತಾಲೂಕಿನ ಬಸರಾಳು ಹೋಬಳಿ ಕಾರೇಕಟ್ಟೆ ಗ್ರಾಮದಲ್ಲಿ ಗೊಬ್ಬರ ತಯಾರಿಕೆಗೆ ಅನುಮತಿ ಪಡೆದು, ರಾಸಾಯನಿಕ ತಯಾರಿಕಾ ಘಟಕ ಪ್ರಾರಂಭಿಸಲಾಗಿದೆ.ಇದರಿಂದ ಸುತ್ತಮುತ್ತಲ ಜಮೀನುಗಳಿಗೆ ರಸಾಯನಿಕಮಿಶ್ರಿತ ನೀರು ಹರಿದು ಬೆಳೆ ಸೇರಿದಂತೆ ಎಲ್ಲವೂವಿಷಮಯವಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ಗ್ರಾಮದಲ್ಲಿರುವ ರಾಸಾಯನಿಕ ಘಟಕಕ್ಕೆ ಮುತ್ತಿಗೆ ಹಾಕಿದ ಗ್ರಾಮಸ್ಥರು ರಸಾಯನಿಕ ಘಟಕದಿಂದ ವಿಷಾನಿಲ ಸೋರಿಕೆಯಾಗುತ್ತಿದೆ. ಅಲ್ಲದೆ, ರಸಾಯನಿಕ ಮಿಶ್ರಿತ ನೀರು ಭೂಮಿಗೆ ಸೇರ್ಪಡೆಯಾಗುತ್ತಿರುವ ಕಾರಣ ಅಂತರ್ಜಲ ಕಲುಷಿತವಾಗುತ್ತಿದ್ದು, ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಖಾನೆಗೆ ಬೀಗ ಹಾಕಿ: ರೈತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೂ ಆರೋಗ್ಯ ಸಮಸ್ಯೆಎದುರಾಗಿದೆ. ಜಾನುವಾರುಗಳಿಗೂ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೂಡಲೇ ಕಾರ್ಖಾನೆಗೆ ಬೀಗ ಹಾಕಿ ಸೀಲ್‌ ಮಾಡಬೇಕು ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೆಂಗು, ಮಾವು, ರಾಗಿ ಇತರೆ ಬೆಳೆಗಳು ರಸಾಯನಿಕ ದಿಂದ ಸುಟ್ಟು ಹೋಗಿವೆ. ಇದನ್ನು ಗಮನಿಸಿದ ಅಧಿಕಾರಿಗಳು ಎಲ್ಲ ಬೆಳೆಗಳ ಮಾದರಿಗಳನ್ನು ಸಂಗ್ರಹಿಸಿ, ಛಾಯಾಚಿತ್ರಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿಗೆ ಈ ಬಗ್ಗೆ ವರದಿ ನೀಡಲಾಗುವುದು. ಅಲ್ಲಿಯವರೆಗೂಗ್ರಾಮಸ್ಥರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಗ್ರಾಮದ ಮಧ್ಯ ಭಾಗದಲ್ಲೇ: ತಾಪಂ ಮಾಜಿ ಸದಸ್ಯ ಎಂ.ಜಿ.ತಿಮ್ಮೇಗೌಡ ಮಾತನಾಡಿ, ಗೊಬ್ಬರ ತಯಾರಿಕಾ ಘಟಕ ಎಂದು ಅನುಮತಿ ಪಡೆದು ಸೆಲ್ಫುರಿನ್‌ ಮ್ಯಾನ್ಯುಕ್ಚರಿಂಗ್‌ ಆಸಿಡ್‌ ಎಂಬ ರಸಾಯನಿಕ ತಯಾರಿಸು  ತ್ತಿದ್ದಾರೆ. ಇದನ್ನು ತಯಾರಿಸಬೇಕಾದರೆ ಕೈಗಾರಿಕಾ ಪ್ರದೇಶದಲ್ಲೇ ಘಟಕ ಸ್ಥಾಪಿಸಿ ತಯಾರಿಸಬೇಕಾಗುತ್ತದೆ. ಆದರೆ ಈ ಕಾರ್ಖಾನೆಯವರು ಗ್ರಾಮದ ಮಧ್ಯ ಭಾಗದಲ್ಲೇ ಮಾಡಿದ್ದಾರೆ ಎಂದು ದೂರಿದರು.

Advertisement

ಜಿಲ್ಲಾಧಿಕಾರಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಅನುಮತಿ ಪಡೆಯಬೇಕಾಗಿದೆ.ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ಘಟಕ ಸ್ಥಾಪಿಸಲಾಗಿದೆ. ಬೆಳೆಗಳು ನಾಶವಾಗಿದೆ. ಜನರು ರೋಗಗಳಿಂದಬಳಲುತ್ತಿದ್ದಾರೆ. ಒಂದು ವೇಳೆ ಜನ ಜಾನುವಾರುಗಳುಈ ರಸಾಯನಿಕದಿಂದ ಜೀವ ಕಳೆದುಕೊಂಡಿದ್ದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.

ಒಂದು ವೇಳೆ ಜೀವ ಹಾನಿಯಾಗಿದ್ದಲ್ಲಿ ಒಂದು ಅಥವಾ ಎರಡು ಲಕ್ಷ ಪರಿಹಾರ ಘೋಷಿಸಿ ಸುಮ್ಮನಾಗುತ್ತಾರೆ. ಆದರೆ ಕುಟುಂಬಗಳು ಅನಾಥವಾಗಲಿವೆ.ಇನ್ನಷ್ಟು ಜನರು ಅನಾರೋಗ್ಯ ಕ್ಕೊಳಗಾಗುತ್ತಾರೆ.ಆದ್ದರಿಂದ ತಕ್ಷಣ ಜಿಲ್ಲಾಡಳಿತ ವರದಿ ತರಿಸಿಕೊಂಡುಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥ ಮಾಲೀಕನಿಗೆ ದಂಡ ವಿಧಿಸುವುದರ ಜತೆಗೆ ಕಾನೂನು ಕ್ರಮ ಕೈಗೊಳ್ಳಬೇಕುಎಂದು ಆಗ್ರಹಿಸಿದರು. ಗ್ರಾಪಂ ಸದಸ್ಯ ಪ್ರಕಾಶ್‌, ಮುಖಂಡರಾದ ಚಿಕ್ಕಣ್ಣ, ಪುಟ್ಟಸ್ವಾಮಿ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next