Advertisement
ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ವಾಟರ್‌ಏಡ್, ವಿಶ್ವಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ರಚಿಸಿರುವ ಈ ವರದಿಯಲ್ಲಿ, ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಾದ ಭಾರತ, ಬಾಂಗ್ಲಾದೇಶ, ಬೊಲಿವಿಯಾ, ಬುರ್ಕಿನಾ ಫಾಸೊ, ಹೈಟಿ, ಕೀನ್ಯಾ, ಸೆನೆಗಲ್, ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾ ದೇಶಗಳಲ್ಲಿ ಅತಿ ಹೆಚ್ಚು ಶೌಚಗುಂಡಿ ಶುಚಿಗೊಳಿಸುವ ಸಫಾಯಿ ಕರ್ಮಚಾರಿಗಳಿದ್ದಾರೆ ಎಂದು ಹೇಳಿದೆ.
ಈ ಕಾರ್ಮಿಕರಿಗೆ ನಿಗದಿತ ವೇತನ ಎಂಬುದು ಇರುವುದಿಲ್ಲ ಮತ್ತು ಹೆಚ್ಚಿನ ಸಂದರ್ಭದಲ್ಲಿ ಇವರು ಸುಲಿಗೆಗೆ ಬಲಿಯಾಗುತ್ತಾರೆ. ಇನ್ನೂ ಶೋಚನೀಯ ಸ್ಥಿತಿ ಎಂದರೆ ಕೆಲವು ಕಾರ್ಮಿಕರು ಆಹಾರ ಪದಾರ್ಥಗಳ ರೂಪದಲ್ಲಿ ಸಂಬಳ ಪಡೆಯುತ್ತಿದ್ದು, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ವೇತನಗಳಲ್ಲಿ ತಾರತಮ್ಯ ಅನುಭವಿಸುತ್ತಿದ್ದಾರೆ ಎಂದು ವರದಿ ಹೇಳಿದೆ. 1500 ಜನರ ಸಾವು
1993 ರಿಂದ ಇಲ್ಲಿಯವರೆಗೆ ದೇಶಾದ್ಯಂತ ಶೌಚಗುಂಡಿಯನ್ನು ಸ್ವತ್ಛಗೊಳಿಸುವ ವೇಳೆ ಸುಮಾರು 1500 ಜನರು ಸಾವನ್ನಪಿದ್ದು, 1993ರಿಂದ ಲೆಕ್ಕಹಾಕಿದರೆ ತಮಿಳುನಾಡಿನಲ್ಲಿ 206 ಕಾರ್ಮಿಕರು ಶೌಚಗುಂಡಿ ಶುಚಿಗೊಳಿಸುವ ವೇಳೆ ಮೃತಪಟ್ಟಿದ್ದಾರೆ.
Related Articles
ನೈರ್ಮಲ್ಯದ ಕೊರತೆಯಿಂದಾಗಿ ದೈಹಿಕ ಮತ್ತು ಮಾನಸಿಕ ಕಾಯಿಲೆಗೆ ಶೌಚಗುಂಡಿ ಕಾರ್ಮಿಕರು ತುತ್ತಾಗುತ್ತಿದ್ದು, ಅತಿಸಾರ ರೋಗದಿಂದ 4,32,000 ರಷ್ಟು ಜನರು ಸಾವನ್ನಪ್ಪಿದ್ದಾರೆ.
Advertisement
ಇದರೊಂದಿಗೆ ತಲೆನೋವು, ತಲೆತಿರುಗುವಿಕೆ, ಜ್ವರ, ಆಯಾಸ, ಆಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆ, ಕಾಲರಾ, ಟೈಫಾಯಿಡ್, ಹೆಪಟೈಟಿಸ್, ಚರ್ಮದ ಕಾಯಿಲೆ ಇತ್ಯಾದಿಗಳಿಗೆ ಇದು ದಾರಿ ಮಾಡಿಕೊಡುತ್ತಿದೆ. ಸಮರ್ಪಕ ಆರೋಗ್ಯ ಮತ್ತು ಸೂಕ್ತ ಸುರಕ್ಷತೆ ಸೌಲಭ್ಯ ದೊರಕದೇ ಕಾರ್ಮಿಕರು ಗಾಯ, ಸೋಂಕು ರೋಗಗಳಿಂದ ಬಳಲುತ್ತಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳಿಂದಲೂ ಸಾವಿಗೀಡಾ ಗುತ್ತಿದ್ದಾರೆ ಎಂದು ವರದಿ ಹೇಳಿದೆ.
50 ಸಾವಿರಕ್ಕೂ ಹೆಚ್ಚು ಮಂದಿದೇಶಾದ್ಯಂತ 1993 ರಿಂದ 2019 ರ ಅವಧಿಯ ಪ್ರಕಾರ ಒಟ್ಟು 50,000 ಹೆಚ್ಚು ಶೌಚಗುಂಡಿ ಕಾರ್ಮಿಕರಿದ್ದಾರೆ. 7 ಸಾವಿರ ಹೆಚ್ಚಳ
2014 ರಿಂದ 2017 ರ ಅವಧಿಯಲ್ಲಿ ಶೌಚಗುಂಡಿ ಕಾರ್ಮಿಕರ ಪ್ರಮಾಣದಲ್ಲಿ ಸುಮಾರು 7 ಸಾವಿರದಷ್ಟು ಜನರ ಹೆಚ್ಚಳವಾಗಿದೆ. ಈ ವರ್ಷ ಸತ್ತವರೆಷ್ಟು ?
ಕಳೆದ 9 ತಿಂಗಳಿಂದ 50 ಜನ ಕಾರ್ಮಿಕರು ಕಾರ್ಯ ನಿರತವಾಗಿರುವಾಗಲೇ ಸಾವಿಗೀಡಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಹೆಚ್ಚು
2018 ರ ಅಂಕಿ ಅಂಶದ ಪ್ರಕಾರ ಸುಮಾರು 6,126 ಶೌಚಗುಂಡಿ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ 1744 ಕಾರ್ಮಿಕರು
ರಾಜ್ಯದಲ್ಲಿ ಸುಮಾರು 1744 ಶೌಚಗುಂಡಿ ಸ್ವತ್ಛ ಕಾರ್ಮಿಕರಿದ್ದು, ಸದ್ಯ ನಮ್ಮ ರಾಜ್ಯ ಮೂರನೇ ಸ್ಥಾನದಲ್ಲಿದೆ. ಈ ರಾಜ್ಯಗಳಲ್ಲಿ ಹೆಚ್ಚು
ರಾಷ್ಟ್ರೀಯ ಸಫಾರಿ ಕರ್ಮಾಚಾರಿ ಹಣಕಾಸು ಹಾಗೂ ಪ್ರಗತಿ ಸಹಕಾರಿ ಸಂಘದ ಅಂಕಿ-ಅಂಶಗಳ ಪ್ರಕಾರ ಈ ರಾಜ್ಯಗಳಲ್ಲಿ ಅತ್ಯಧಿಕ ಮಂದಿ ಕೆಲಸದವರಿದ್ದಾರೆ.
ಉತ್ತರ ಪ್ರದೇಶ 6,126
ಮಧ್ಯಪ್ರದೇಶ 5,269
ಕರ್ನಾಟಕ 1,744 ನೂತನ ಯೋಜನೆ
ಶೌಚಗುಂಡಿ ಸ್ವತ್ಛತೆಯ ಹೊಣೆಗಾರಿಕೆಯನ್ನು ನಗರಪಾಲಿಕೆಗಳಿಗೆ ವಹಿಸಿದ್ದು, ಈ ನಿಯಮ ಖಾಸಗಿ ಒಡೆತನದ ಸಂಸ್ಥೆಗಳಿಗೂ ಅನ್ವಯ. ಯಂತ್ರಗಳ ಮೂಲಕವೇ ಶೌಚಗುಂಡಿ ಸ್ವತ್ಛಗೊಳಿಸಬೇಕೆಂಬ ಕಾನೂನು ಮಾಡಿರುವ ಸರಕಾರ, ಅವುಗಳ ಖರೀದಿಗೆ ನಗರಪಾಲಿಕೆಗಳಿಗೆ ಸಾಲವನ್ನು ನೀಡುವುದಾಗಿ ತಿಳಿಸಿದೆ. ದುರ್ಬಲ ಕಾನೂನು
ದುರ್ಬಲ ಕಾನೂನು ರಕ್ಷಣೆ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಅಭಿವೃದ್ಧಿಶೀಲ ದೇಶಗಳು ಸೇರಿದಂತೆ ಪ್ರಪಂಚಾದ್ಯಂತ ಶೌಚಗುಂಡಿ ಕಾರ್ಮಿಕ ಪದ್ಧತಿ ಚಾಲ್ತಿ ಅಲ್ಲಿದೆ. ಸಮಸ್ಯೆಗೆ ಕಾರಣಗಳೇನು?
· ಬಡತನ ಹಾಗೂ ನಿರ್ದಿಷ್ಟ ಜನಾಂಗದವರೇ ಈ ಕಾರ್ಯಗಳಲ್ಲಿ ತೊಡಗಬೇಕೆಂಬ ಪೂರ್ವಾಗ್ರಹ
· ಕಾರ್ಮಿಕರಿಗೆ ಸುರಕ್ಷಾ ಸಲಕರಣೆಗಳನ್ನು ನೀಡದಿರುವುದು.
· ಆಧುನಿಕ ಯಂತ್ರಗಳು ಲಭ್ಯವಿದ್ದರೂ ಅವುಗಳ ಬಳಕೆ ಇಲ್ಲ.
· ಕಾನೂನು ನಿಯಮವನ್ನು ಜಾರಿಗೆ ತರುವಲ್ಲಿ ವಿಫಲ .
· ಈ ಉದ್ಯೋಗದ ಕುರಿತು ಸರಿಯಾದ ಮಾಹಿತಿ ಇಲ್ಲ. - ಸುಶ್ಮಿತಾ ಜೈನ್