Advertisement

ಸುರಕ್ಷಿತ ಏರ್‌ ಶೋಗೆ ರಾಜ್ಯ ಸಿದ್ಧ: ಸಿಎಂ ಭರವಸೆ

03:09 AM Oct 08, 2020 | Hari Prasad |

ಬೆಂಗಳೂರು: ‘ಏರೋ ಇಂಡಿಯಾ- 2021’ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಗಣ್ಯರು, ಅಧಿಕಾರಿ/ ಸಿಬಂದಿ ಹಾಗೂ ಸಾರ್ವಜನಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌, ನಿಯಮಿತ ಸ್ಯಾನಿಟೈಸೇಶನ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಹಿತ ಇತರ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಕ್ಷಣ ಸಚಿವರಿಗೆ ತಿಳಿಸಿದ್ದಾರೆ.

Advertisement

ಕೇಂದ್ರದ ರಕ್ಷಣ ಉತ್ಪನ್ನಗಳ ಇಲಾಖೆಯು ರಾಜ್ಯ ಸರಕಾರದ ಸಹಯೋಗದಲ್ಲಿ 13ನೇ ಆವೃತ್ತಿಯ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ- 2021’ ಕಾರ್ಯಕ್ರಮ ಸಂಬಂಧ ಬುಧವಾರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ ರಾಯಭಾರಿಗಳ ದುಂಡು ಮೇಜಿನ ವರ್ಚುವಲ್‌ ಸಭೆಯಲ್ಲಿ ಅವರು ಮಾತನಾಡಿದರು.

ಸವಾಲಿನ ವಿಷಯ
ಹಿಂದಿನ 12 ಏರ್‌ ಶೋ ಆವೃತ್ತಿಗಳಿಗೆ ಆತಿಥ್ಯ ನೀಡಿ ರಾಜ್ಯಕ್ಕೆ ಉತ್ತಮ ಅನುಭವವಿದೆ. 2021ರ ಫೆ. 3ರಿಂದ 7ರ ವರೆಗೆ ನಡೆಯಲಿರುವ 13ನೇ ಆವೃತ್ತಿಯ ‘ಏರೋ ಇಂಡಿಯಾ- 2021’ಕ್ಕೆ ಕರ್ನಾಟಕ ಆತಿಥೇಯ ರಾಜ್ಯವಾಗಿ ಮತ್ತೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಕೋವಿಡ್‌ ನಡುವೆ ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸುವುದು ರಾಜ್ಯ ಹಾಗೂ ರಕ್ಷಣ ಸಚಿವಾಲಯಕ್ಕೆ ಸವಾಲಿನ ವಿಷಯವಾಗಿದೆ ಎಂದರು.

ದೇಶದಲ್ಲಿ ಅತಿ ದೊಡ್ಡ ರಕ್ಷಣ ಉತ್ಪಾದಡಬ್ಲ್ಯು ವಲಯ: ರಾಜನಾಥ್‌
ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿ, ಅತಿಥಿ ದೇವೋಭವ ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು ನಾವು. ಶಾಂತಿಗಾಗಿ ರಕ್ಷಣ ಇಲಾಖೆಯನ್ನು ಇನ್ನಷ್ಟು ಸಬಲಗೊಳಿಸಲು ಪೂರಕವಾಗಿ ರಕ್ಷಣ ನೀತಿ ಅಳವಡಿಸಿಕೊಳ್ಳುವುದು ನಮ್ಮ ಉದ್ದೇಶ.

ದೇಶವು ಅತಿ ದೊಡ್ಡ ರಕ್ಷಣ ಉತ್ಪಾದನ ವಲಯ ಹೊಂದಿದೆ. “ಏರೋ ಇಂಡಿಯಾ- 2021’ರ ಮೂಲಕ ಭಾರತ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮದಲ್ಲಿ ಮುಂಚೂಣಿಯ ಐದು ರಾಷ್ಟ್ರಗಳಲ್ಲಿ ಒಂದಾಗಿರಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

Advertisement

ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯಕ್‌, ವಿವಿಧ ರಾಷ್ಟ್ರಗಳ ರಾಯಭಾರಿಗಳು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next