Advertisement
ಈ ಪಂದ್ಯ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯಲಿದ್ದು, ಇದು ಕೊಹ್ಲಿ ಪಡೆ ಬೆಂಗಳೂರಿನಲ್ಲಿ ಆಡಲಿರುವ ಪ್ರಸಕ್ತ ಋತುವಿನ ಕಟ್ಟಕಡೆಯ ಪಂದ್ಯವೂ ಆಗಿದೆ. ತವರಿನ ಅಭಿಮಾನಿಗಳಿಗೆ ಗೆಲುವನ್ನು ಅರ್ಪಿಸಿ ಆ ಮೂಲಕ ಪ್ಲೇ-ಆಫ್ ಬಾಗಿಲಿಗೆ ಹತ್ತಿರವಾಗುವುದು ಆರ್‌ಸಿಬಿಯ ಯೋಜನೆ.
ಹೈದರಾಬಾದ್ ಸಾಮರ್ಥ್ಯದ ಬಗ್ಗೆ ಅನುಮಾನವೇ ಇಲ್ಲ. ಕೊಹ್ಲಿಯಂತೆ ನಾಯಕ ವಿಲಿಯಮ್ಸನ್ ಕೂಡ ಐನೂರರ ಗಡಿ ದಾಟಿದ್ದಾರೆ. ಶಿಖರ್ ಧವನ್ 369 ರನ್ ಪೇರಿಸಿ ಆಪತಾºಂಧವರಾಗಿದ್ದಾರೆ. ಆದರೆ ಯೂಸುಫ್ ಪಠಾಣ್ (186), ಮನೀಷ್ ಪಾಂಡೆ (189), ಶಕಿಬ್ ಅಲ್ ಹಸನ್ (166) ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿಬಂದಿಲ್ಲ. ತಂಡದ ಬೌಲಿಂಗ್ ಕೂಟದಲ್ಲೇ ಅತ್ಯಂತ ಘಾತಕ. ಆದರೂ ಹಿಂದಿನ ಪಂದ್ಯದಲ್ಲಿ ಅದು ಚೆನ್ನೈ ವಿರುದ್ಧ ಪುಣೆಯಲ್ಲಿ 8 ವಿಕೆಟ್‌ಗಳ ಆಘಾತಕಾರಿ ಸೋಲುಂಡಿತ್ತು. ಇದು ಆರ್‌ಸಿಬಿ ಪಾಲಿಗೆ ತವರು ಪಂದ್ಯವಾದ್ದರಿಂದ ಹೈದರಾಬಾದ್ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
Related Articles
ಹೈದರಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ 146 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟಾಗಿಯೂ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿತ್ತು. ಜವಾಬು ನೀಡತೊಡಗಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟಿಗೆ 141 ರನ್ ಗಳಿಸಿ 5 ರನ್ನಿನಿಂದ ಶರಣಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವುದು ಕೂಡ ಕೊಹ್ಲಿ ಪಡೆಯ ಯೋಜನೆಯಾಗಿದೆ.
Advertisement