Advertisement
ಬೇಸಗೆ ರಜೆಯಲ್ಲಿ ಮಕ್ಕಳೊಂದಿಗೆ ಎಲ್ಲದಾರೂ ತಿರುಗಾಡಿ ಬರುವುದು ಅಭ್ಯಾಸ. ಹೀಗಾಗಿ ಈ ಬಾರಿ ಹರ್ಷಿ ಚಾಕಲೇಟ್ ಫ್ಯಾಕ್ಟರಿಗೆ ಭೇಟಿ ನೀಡುವ ನಿರ್ಣಯವಾಗಿತ್ತು. ಮನೆಯಿಂದ ಸುಮಾರು 1 ಗಂಟೆಯ ಪ್ರಯಾಣ. ಕಾರಿನಲ್ಲಿ ಕುಳಿತು ಮಾತನಾಡುತ್ತ, ರಸ್ತೆಯ ಇಕ್ಕೆಲಗಳ ದೃಶ್ಯವನ್ನು ಸವಿಯುತ್ತ ಹೊರಟ ನಮಗೆ ಒಂದು ಗಂಟೆಯ ದಾರಿ ಸವೆದದ್ದೇ ತಿಳಿಯಲಿಲ್ಲ.
Related Articles
Advertisement
ಒಳಗೆ ತಲುಪುತ್ತಿದ್ದಂತೆ ಅಲ್ಲಿ ನಮ್ಮನ್ನು ಕೊಂಡೊಯ್ಯಲು ಆಟೋ ರಿûಾದಂತಹ ವಾಹನ ಸಿದ್ಧವಾಗಿತ್ತು. ಅದರಲ್ಲಿ ಕುಳಿತುಕೊಂಡು ಫ್ಯಾಕ್ಟರಿಯ ಕಾರ್ಯ ವೈಖರಿಯನ್ನು ನೋಡುವ ಅವಕಾಶ ಸಿಕ್ಕಿತು. ಗೈಡ್ ಒಬ್ಬಳು ವಿವರಣೆ ಕೊಡುವ ವಿಡಿಯೋ ವಾಹನದÇÉೇ ಇದೆ. ವಿವರಣೆ ಕೇಳುತ್ತ ಚಾಕಲೇಟ್ ತಯಾರಿಯನ್ನು ನೋಡುತ್ತಾ ಮುಂದೆ ಹೋಗುತ್ತಿದ್ದಂತೆ ಬೇರೆ ಬೇರೆ ರುಚಿ, ಬಣ್ಣ, ಗಾತ್ರಕ್ಕೆ ಬದಲಾಯಿಸಿ ಪ್ಯಾಕೆಟ್‌ಗಳಾಗಿ ಹೊರಗೆ ಬರುವುದನ್ನು ನೋಡಬಹುದು. ಇವುಗಳನ್ನೆಲ್ಲ ನೋಡಿ ವಾಹನದಿಂದ ಕೆಳಗೆ ಇಳಿಯುವಾಗ ಇನ್ನೊಂದು ಸಲ ನೋಡಿದರೆ ಹೇಗೆ ಎನ್ನುವ ಆಸೆ ಮನದಲ್ಲಿ ಹುಟ್ಟಿಕೊಳ್ಳದೇ ಇರಲಾರದು.
ಚಾಕಲೇಟ್ ಫ್ಯಾಕ್ಟರಿಯ ಈ ದರ್ಶನ ಸಂಪೂರ್ಣ ಉಚಿತ! ಪ್ರಯಾಣ ಮುಗಿಸಿ ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆ ತಿನ್ನಲು ಒಂದು ಚಾಕಲೇಟು ಸಿಗುವುದು.
ಫ್ಯಾಕ್ಟರಿಯನ್ನು ನೋಡಿ ಹೊರಗೆ ಹೊರಡುತ್ತಿದ್ದಂತೆ ಅಲ್ಲಿ ಚಾಕಲೇಟ…, ಕ್ಯಾಂಡಿ ಮೊದಲಾದವುಗಳನ್ನು ಮಾರುವ ಅಂಗಡಿಗಳು ಸಾಲಾಗಿ ಕಾಣ ಸಿಗುತ್ತವೆ. ಈ ತಿನಿಸುಗಳ ಬೆಲೆ ಬಹಳ ದುಬಾರಿ. ಇಲ್ಲಿಯವರೆಗೆ ಕೊಟ್ಟ ಉಚಿತಗಳನ್ನೆಲ್ಲ ಹಿಂಪಡೆಯುವಂತೆ ಇಮ್ಮಡಿ ಲಾಭಕ್ಕೆ ಮಾರುತ್ತಾರೆ. ಫ್ಯಾಕ್ಟರಿ ನೋಡಿದ್ದಕ್ಕೆ ಬಂದವರೆಲ್ಲ ಕೊಳ್ಳುತ್ತಾರೆ. ಅಲ್ಲದೆ ಇಲ್ಲಿಯ ಹಾಗೆ ಬೇರೆ ಬೇರೆ ರೀತಿಯ ಚಾಕಲೇಟ್, ಕ್ಯಾಂಡಿಗಳು ಒಂದೇ ಕಡೆ ಸಿಗುವುದು ಕಷ್ಟವಲ್ಲವೇ? ಇಲ್ಲಿ ತಿಂಡಿ, ತಿನಸು, ಊಟ ಕಾಫಿ ಎಲ್ಲ ವ್ಯವಸ್ಥೆಯೂ ಇದೆ. ಕಾರ್ ಪಾರ್ಕಿಂಗ್ ಏರಿಯಾ ತಲುಪಲು ಉಚಿತ ವಾಹನ ಸೌಲಭ್ಯವನ್ನೂ ಕಲ್ಪಿಸಿ¨ªಾರೆ.
ಹರ್ಷಿ ಪಟ್ಟಣದಲ್ಲಿ ಒಂದು ಥೀಮ್ ಪಾರ್ಕ್ ಕೂಡ ನಿರ್ಮಿತವಾಗಿದ್ದು, ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇಷ್ಟ ಪಡುವಂತಹ ರೈvÕ…ಗಳಿವೆ. ಅಮೆರಿಕದಲ್ಲಿ ಈಗ ಮಕ್ಕಳಿಗೆ ಬೇಸಗೆ ರಜೆ. ಅದಕ್ಕೆ ದೂರದೂರಿಂದಲೂ ಮಕ್ಕಳನ್ನು ಕರೆದುಕೊಂಡು ಬರುವುದರಿಂದ ತುಂಬಾ ಜನ ಸೇರುತ್ತಾರೆ. ಇಲ್ಲಿ ರೈvÕ…ಗಳಲ್ಲಿ ಆನಂದಿಸುತ್ತಾರೆ. ಚಾಕಲೇಟ್ ಫ್ಯಾಕ್ಟರಿ ನೋಡಲು ಬರುವವರಿಗೆ ಉಳಿದುಕೊಳ್ಳಬೇಕಾದ ಎಲ್ಲ ಸೌಲಭ್ಯಗಳೂ ಇಲ್ಲಿವೆ.
ಚಾಕಲೇಟ್ ತಯಾರಿಸಲು ಪ್ರಾರಂಭಿಸಿದ ಫ್ಯಾಕ್ಟರಿಯನ್ನೇ ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಿದ ಹರ್ಷಿ ಕಂಪೆನಿಯ ಪ್ರಯತ್ನ ಶ್ಲಾಘನೀಯ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಒಂದು ಜಾಗದ ಆರ್ಥಿಕ ಅಭಿವೃದ್ಧಿಗೂ ಇದು ಕಾರಣವಾಗಿದೆ. ಅಂತೂ ಫ್ಯಾಕ್ಟರಿ ನೋಡಿದ ಅನುಭವವನ್ನು ಮೆಲುಕು ಹಾಕುತ್ತಾ ಮನೆಯ ಕಡೆಗೆ ಹೊರಟೆವು.
ಸುಬ್ಬಣ್ಣ ಭಟ್ ಬಾಳಿಕೆ, ಫಿಲಿಡೆಲ್ಫಿಯಾ