Advertisement
ಹಿರಿಯರಾದ ಆರ್.ವಿ. ದೇಶಪಾಂಡೆ ಆಸೆ ಪಡುವುದು ತಪ್ಪಲ್ಲ. ಆದರೆ ಮಾಧ್ಯಮಗಳ ಮುಂದೆ ಮಾತನಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಬೇಕೋ ಅದನ್ನು ನೀಡೋಣ ಎಂದು ತಾವು ಸಿಎಂ ಸ್ಥಾನದ ಆಕಾಂಕ್ಷಿ ಎಂದ ದೇಶಪಾಂಡೆ ಅವರಿಗೆ ತೀಕ್ಷ್ಣವಾಗಿ ಹೇಳಿದರು.
ಧಾರವಾಡ: ನನಗೂ ಮುಖ್ಯಮಂತ್ರಿ ಆಗುವ ಆಸೆಯಿದೆ. ಆದರೆ ಸದ್ಯ ಕುರ್ಚಿ ಖಾಲಿ ಇಲ್ಲ ಎಂದು ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಮುಖ್ಯಮಂತ್ರಿ ಆಗುವುದಾಗಿ ಹೇಳಿದ್ದು ಸಹಜ. ಅವರ ಆಸೆಯಲ್ಲಿ ತಪ್ಪೇನಿಲ್ಲ. 8-9 ಬಾರಿ ಶಾಸಕರಾಗಿದ್ದಾರೆ, ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಸಚಿವರಾಗಿ ಅನುಭವ ಹೊಂದಿದ್ದಾರೆ. ಇದೀಗ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ವ್ಯಕ್ತಪಡಿಸಿದ್ದಾರೆ. ಎರಡೂವರೆ ವರ್ಷಕ್ಕೆ ಸಿಎಂ ಸಿದ್ದರಾಮಯ್ಯ ಬದಲಾಗುತ್ತಾರೆ ಎಂದು ಹೇಳಿದವರಾರು? ರಾಹುಲ್ ಗಾಂಧಿ ಹೇಳಿದ್ದಾರೆಯೇ? ಸ್ವತಃ ಡಿಕೆಶಿ ಅವರೇ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ ಎಂದರು.
Related Articles
ಕಾರವಾರ: ಆರ್.ವಿ. ದೇಶಪಾಂಡೆ ಹಿರಿಯರು, ನನ್ನ ಜಿಲ್ಲೆಯವರು. ಅವರು ಮುಖ್ಯಮಂತ್ರಿಯಾದರೆ ಖುಷಿ ಪಡುವ ಮೊದಲಿಗ ನಾನು. ಆದರೆ ಪಕ್ಷದ ಹೈಕಮಾಂಡ್‌ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರ ಬೆಂಬಲ ಸಿದ್ದರಾಮಯ್ಯ ಅವರಿಗೆ ಇದೆ. ದೇಶಪಾಂಡೆ – ಸಿದ್ದರಾಮಯ್ಯ ಸ್ನೇಹಿತರು. ಅವರಿಗೆ ಸಿದ್ದರಾಮಯ್ಯ ಹೇಳಿರಬೇಕು ಎಂದು ಸಚಿವ ಮಂಕಾಳ ವೈದ್ಯ ಹೇಳಿ ದರು. ಸುದ್ದಿಗಾರರ ಜತೆ ಮಾತನಾಡಿ, ದೇಶಪಾಂಡೆ ಅವರ ಮಾತಿನ ಧಾಟಿಯಲ್ಲಿ ಏನು ಅಡಗಿದೆ ಎಂಬುದು ಸ್ಪಷ್ಟವಾಗಿಲ್ಲ. ಸಿದ್ದರಾಮಯ್ಯ ಇಂದು, ನಾಳೆ ಹಾಗೂ ಮುಂದೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದರು.
Advertisement