Advertisement

Thane ನಕಲಿ ಕರೆನ್ಸಿ ಪ್ರಕರಣ; ಉಗ್ರ’ಅಂಕಲ್’ಸೇರಿ ನಾಲ್ವರ ವಿರುದ್ಧ ಎನ್ಐಎ ಚಾರ್ಜ್ ಶೀಟ್

04:00 PM Sep 28, 2023 | Team Udayavani |

ಹೊಸದಿಲ್ಲಿ: ದೇಶದ ವಿತ್ತೀಯ ಸ್ಥಿರತೆಗೆ ಹಾನಿ ಮಾಡುವ ಉದ್ದೇಶದಿಂದ ಉಗ್ರ ‘ಅಂಕಲ್’ ಅಲಿಯಾಸ್ ಜಾವೇದ್ ಪಟೇಲ್ ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (ಎಫ್‌ಐಸಿಎನ್) ಹೊಂದುವ ಮತ್ತು ಚಲಾವಣೆ ಮಾಡುವ ಮೂಲಕ ತನ್ನ ಸಹಚರರ ಮೂಲಕ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದಾನೆ ಎಂದು ಎನ್ ಐಎ ಪೂರಕ ಚಾರ್ಜ್ ಶೀಟ್ ದಾಖಲಿಸಿದೆ.

Advertisement

ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬುಧವಾರ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಜಾವೇದ್ ಪಟೇಲ್ ಸೇರಿ ನಾಲ್ವರ ವಿರುದ್ದ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾರ್ಜ್ ಶೀಟ್ ನಲ್ಲಿ ಹೆಸರಿಸಲಾದವರು  ಅಂಕಲ್ ಅಲಿಯಾಸ್ “ಜಾವೇದ್ ಪಟೇಲ್(ಜಾವೇದ್ ಚಿಕ್ನಾ) ಸೇರಿ ರಿಯಾಜ್ ಶಿಕಿಲ್ಕರ್, ಮೊಹಮ್ಮದ್ ಫಯಾಜ್ ಶಿಕಿಲ್ಕರ್ ಮತ್ತು ನಾಸಿರ್ ಚೌಧರಿ ಎಂದು ಗುರುತಿಸಲಾಗಿದೆ, ಎಲ್ಲರೂ ಮುಂಬೈ ನಿವಾಸಿಗಳು ಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ. ಫಯಾಜ್ ಶಿಕಿಲ್ಕರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯೂ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಥಾಣೆ ಪೊಲೀಸರು ಕಳೆದ ವರ್ಷ ಎಪ್ರಿಲ್ ನಲ್ಲಿ ರಿಯಾಜ್ ಶಿಕಿಲ್ಕರ್ ನಿಂದ 2,000 ರೂ. ಮುಖಬೆಲೆಯ 149 ಉತ್ತಮ ಗುಣಮಟ್ಟದ ನಕಲಿ ಭಾರತೀಯ ನೋಟುಗಳನ್ನು ವಶಪಡಿಸಿಕೊಂಡ ನಂತರ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಚಾರ್ಜ್‌ಶೀಟ್ ಮಾಡಿದ್ದರು. ನಂತರ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ತನಿಖೆಯ ನಂತರ, ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಫಯಾಜ್ ನನ್ನ ಮೇ ತಿಂಗಳಲ್ಲಿ ಬಂಧಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next