Advertisement
ನೀವು ಮೊನ್ನೆ ಹೊಸದಾಗಿ ಬಂದ ಆ್ಯಪಲ್ ಮೊಬೈಲ್ ಗಮನಿಸಿದ್ದೀರಾ? ಕೈಯಲ್ಲಿ ಹಿಡಿದಾಕ್ಷಣ ಸರ್ರನೆ ಕಂಗಳನ್ನು ಸೆಳೆಯುತ್ತದೆ. ಭಾರವಿಲ್ಲದ, ಆಕರ್ಷಣೀಯ ನೋಟ ಅದರದು. ಹಾಗೇನೇ, ವೆಸ್ಪಾ ಕಂಪನಿಯ ಟೂ ವ್ಹೀಲರ್ ನೋಡಿದ್ದೀರ? ಅದರ ಮೈಲೇಜನ್ನೆಲ್ಲಾ ಪಕ್ಕಕ್ಕೆ ಇಡಿ. ಅದರ ಹೊರ ನೋಟ ಎಂಥವರನ್ನೂ ಆಕರ್ಷಿಸುತ್ತದೆ. ಎಷ್ಟೋ ಜನ ಅದರ ಲುಕ್ಕಿಗೆ ಲವ್ವಾಗಿ ಸ್ಕೂಟರ್ ಕೊಂಡದ್ದೂ ಉಂಟು.
Related Articles
Advertisement
ಪಿಯುಸಿ ಪ್ಲಸ್ಇಂದಿನ ವ್ಯಾಪಾರ, ಕೈಗಾರಿಕೆ ಮತ್ತು ಉದ್ಯಮಿಗಳು ತಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಮತ್ತು ವಸ್ತು ನಿಷ್ಟ ದೃಷ್ಟಿಕೋನವನ್ನು ವಿನ್ಯಾಸಕರ ಹುಡುಕಾಟದಲ್ಲಿದ್ದಾರೆ. ನೀವು ಯಾವುದೇ ವಸ್ತುವನ್ನು ವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ವಿಶಿಷ್ಟ ಆಯಾಮದಿಂದ ನೋಡಬಲ್ಲಿರಾದರೆ, ನಿಮಗೆ ವಿನ್ಯಾಸ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಹೀಗಾಗಿಯೇ, ಇಂಡಸ್ಟ್ರಿಯಲ್ ಡಿಸೈನಿಂಗ್‌ನಲ್ಲಿ ಪ್ರಾಡಕ್ಟ್ ಡಿಸೈನಿಂಗ್‌ಗೆ ಒಳ್ಳೆ ಬೇಡಿಕೆ ಇದೆ. ಪಿಯುಸಿ ಮುಗಿಸಿದವರು ಈ ಕೋರ್ಸ್ ಮಾಡಬಹುದು, ಆರುತಿಂಗಳ ಸರ್ಟಿಫಿಕೆಟ್ ಕೋರ್ಸ್‌ನಿಂದ ಹಿಡಿದು, ಐದು ವರ್ಷಗಳ ಎಂಜಿನಿಯರಿಂಗ್, ಪಿಎಚ್‌ಡಿ ಪದವಿ ತನಕ ಶೈಕ್ಷಣಿಕ ಅವಕಾಶಗಳಿವೆ. ವಿನ್ಯಾಸ ಶಿಕ್ಷಣದಲ್ಲಿ ಹಲವಾರು ಉಪಶಾಖೆಗಳಿವೆ. ಡಿಪ್ಲೊಮೊದಿಂದ ಡಿಗ್ರಿಯವರೆಗೂ ಅಭ್ಯಾಸ ಮಾಡುವ ಅವಕಾಶವಿದೆ. ಪಿಯುಸಿ ಪಾಸಾದವರು ಐದು ವರ್ಷಗಳ ಕಾಲ ಡಿಸೈನಿಂಗ್ ಕೋರ್ಸ್ ಪೂರೈಸಲು ಅವಕಾಶವಿದೆ. ಅಧ್ಯಯನ ಸಂದರ್ಭದಲ್ಲಿ ಹೆಚ್ಚಾಗಿ- ರಿಸರ್ಚ್, ಡಿಸೈನ್ ಮತ್ತು ಅಭಿವೃದ್ಧಿ, ಹಿಸ್ಟರ್ ಆಫ್ ಇಂಡಸ್ಟ್ರಿಯನ್ ಡಿಸೈನ್, ಕಂಪ್ಯೂಟರ್ ಬಳಸಿ ಮಾಡಬಹುದಾದ ಡಿಸೈನ್‌ಗಳು, ಲಿಬರಲ್ ಆರ್ಟ್ಸ್ ಇಂಥ ವಿಚಾರಗಳ ಕಡೆ ಒತ್ತು ಕೊಡುತ್ತಾರೆ. ಬಿಹೈಂಡ್‌ದ ಬಾಕ್ಸ್ ಅಂದರೆ ವಿಭಿನ್ನವಾಗಿ ಚಿಂತಿಸುವವರಿಗೆ ಇಲ್ಲಿ ಹೇರಳ ಅವಕಾಶಗಳು ಉಂಟು. ಇಲ್ಲಿ ಮಾಡಲ್‌ಗಳನ್ನು ವಿದ್ಯಾರ್ಥಿಗಳ ಕೈಯಿಂದಲೇ ಮಾಡಿಸಿ, ಅದನ್ನು ಉತ್ಪನ್ನಗಳನ್ನಾಗಿಸುವುದರ ಬಗ್ಗೆ ಹೇಳಿಕೊಡುವುದೂ ಉಂಟು. ಇಂಡಸ್ಟ್ರಿಯಲ್ ಡಿಸೈನರ್ ಆಗಲು ಗ್ರಾಹಕರ ವಸ್ತುಗಳು, ಮೆಡಿಕಲ್ ಡಿವೈಸ್‌ಗಳು, ಡಿಸೈನ್ ಪ್ಯಾಕೇಜಿಂಗ್, ಫನೀìಚರ್‌ಗಳು, ಮಕ್ಕಳು ಆಟಿಕೆಗಳ ಡಿಸೈನ್… ಹೀಗೆ ವಿಸ್ತಾರವಾಗಿ ಹರಡಿಕೊಂಡಿದೆ. ಇವತ್ತು ಎಲ್ಲವೂ ಪ್ರತ್ಯೇಕ ಕ್ಷೇತ್ರಗಳಾಗಿರುವುದರಿಂದ ಬೇಡಿಕೆಯೂ ಹೆಚ್ಚು.
ತಮ್ಮ ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ವಿನ್ಯಾಸ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ಪರಿಣತರು ಸಂಬಂಧಪಟ್ಟ ಕಂಪನಿಗಳನ್ನು ಉದ್ಯೋಗಕ್ಕಾಗಿ ಪರಿಗಣಿಸಬಹುದು ಅಥವಾ ತನ್ನದೇ ಆದ ಸಲಹಾ ಕಂಪನಿಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಮಾಡಬಹುದು. ಇಂದು ಹೆಚ್ಚಿನ ಉದ್ಯೋಗಗಳು ಯಾಂತ್ರೀಕೃತವಾಗುತ್ತಿವೆ. ಆದರೆ, ಸೃಜನಶೀಲ, ವಿನ್ಯಾಸಗಳಿಗೆ ಸಂಬಂಧಿಸಿದ ಕ್ಷೇತ್ರ ಎಂದಿಗೂ ಯಾಂತ್ರೀಕೃತ ಗೊಳ್ಳಲು ಸಾಧ್ಯವೇ ಇಲ್ಲ. ಈ ಕ್ಷೇತ್ರದಲ್ಲಿ ಮಾನವ ಬುದ್ಧಿ ಮತ್ತೆಗೆ ಮಾತ್ರ ಪ್ರಾಶಸ್ತ್ಯ. ಹಾಗಾಗಿ, ವಿನ್ಯಾಸಕಾರರಿಗೆ ಉದ್ಯೋಗ ಬರ ಆಗಲು ಸಾಧ್ಯವೇ ಇಲ್ಲ. ಅವರೆಲ್ಲಾ ತಮ್ಮ ಸೃಜನಶೀಲತೆಯಿಂದಾಗಿ ಹೆಚ್ಚಿನ ಹಣ ಮತ್ತು ಹೆಸರು ಸಂಪಾದಿಸಬಹುದು. ಇಂದು ಕರ್ನಾಟಕದಲ್ಲಿ ಹಲವಾರು ವಿನ್ಯಾಸಕ್ಕೆ ಸಂಬಂಧಿಸಿದ ಕೋರ್ಸ್ ನಡೆಸುವ ಶೈಕ್ಷಣಿಕ ಸಂಸ್ಥೆಗಳು ಹೀಗಿವೆ. ಬೆಂಗಳೂರಿನಲ್ಲಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಅಪ್ಲಾಯ್ಡ ಸೈನ್ಸ್, ಪಿಇಎಸ್ ವಿವಿ, ಜೈನ್‌ಕಾಲೇಜು, ಅಲ್ಲದೇ ಮುಂಬೈನಲ್ಲಿ ಡಿಸೈನಿಂಗ್ ಕೋರ್ಸ್‌ಗಾಗಿ ಇಂಡಿಯ್ ಸ್ಕೂಲ್ ಆಫ್ ಡಿಸೈನಿಂಗ್ ಅಂಡ್ ಇನೋವೇಷನ್ ಕಾಲೇಜಿದೆ. ಮೊಬೈಲ್, ವಾಹನ ತಯಾರಿಕಾ ಕಂಪೆನಿಗಳು. ಸಿವಿಲ್ ಎಂಜಿನಿಯರಿಂಗ್ ಮಾಡಿರುವವರು ಕ್ಯಾಡ್, ಥ್ರಿ ಡೈಮನ್ಸ್ ನಲ್ ಮಾಡಲಿಂಗ್ ತಿಳಿದಿರಬೇಕು. ಇವತ್ತು ಇಂಡಸ್ಟ್ರಿಯಲ್ ಡಿಸೈನರ್‌ಗೆ ಬೆಲೆ ಇದೆ. ಆದರೆ, ಅವರು ಭಿನ್ನವಾಗಿ ಯೋಚಿಸಬೇಕು. ಮೊಬೈಲ್ ಕ್ಷೇತ್ರದ ಆ್ಯಪಲ್, ಸ್ಯಾಮ್‌ಸಂಗ್‌ನಂಥ ಕಂಪನಿಗಳು, ಟಾಟಾ, ಹುಂಡೈನಂಥ ಕಾರು ಉತ್ಪಾದಿಸುವ ಕಂಪನಿಗಳಲ್ಲಿ ಅತ್ಯುತ್ತಮ ಡಿಸೈನರ್‌ಗಳಿಗೆ ಅವಕಾಶಗಳಿವೆ. ಅಲ್ಲದೇ, ಟಿ.ವಿಯಲ್ಲಿ ಬರುವ ಜಾಹೀರಾತು ಕ್ಷೇತ್ರದಲ್ಲೂ ಕೂಡ ಪ್ರಾಡಕ್ಟ್ ಡಿಸೈನರ್ ಆಗಬಹುದು. ಕೆ.ಜಿ